ದಕ್ಷಿಣದ ಈ ಖ್ಯಾತ ನಟಿಗೆ ಪಿಜ್ಜಾ ಡೆಲಿವರಿ ಬಾಯ್ ಮಾಡಿದ್ದೇನು?

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಗಾಯತ್ರಿ ಸಾಯಿ ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Last Updated : Feb 28, 2020, 03:58 PM IST
ದಕ್ಷಿಣದ ಈ ಖ್ಯಾತ ನಟಿಗೆ ಪಿಜ್ಜಾ ಡೆಲಿವರಿ ಬಾಯ್ ಮಾಡಿದ್ದೇನು? title=

ದಕ್ಷಿಣ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಪಡೆದಿರುವ ನಟಿ ಗಾಯಾತ್ರಿ ಸಾಯಿ ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಯತ್ರಿ ಅವರ ನಂಬರ್ ಅನ್ನು ಒಂದು ಅಡಲ್ಟ್ಸ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಗಾಯತ್ರಿಗೆ ವಿಪರೀತ ಕಾಲ್ ಗಳು ಬರಲಾರಂಭಿಸಿವೆ. ಇದರಿಂದ ಸಂಕಷ್ಟಕ್ಕೆ ಸಿಳುಗಿರುವ ಗಾಯತ್ರಿಗೆ ಈ ಕೆಲಸ ಓರ್ವ ಪಿಜ್ಜಾ ಡಿಲೆವರಿ ಮಾಡಿರುವುದು ತಿಳಿದುಬಂದಿದೆ. ವಿಷಯ ಏನು ಅಂದ್ರೆ, ಗಾಯತ್ರಿ ಪಿಜ್ಜಾ ಒಂದನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ಪಿಜ್ಜಾ ಡೆಲಿವರಿ ಮಾಡಲು ಬಂದ ಬಾಯ್ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಅದನ್ನು ಅಡಲ್ಟ್ಸ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಗಾಯತ್ರಿ  ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ 26 ವರ್ಷದ ನಟಿ "ಡಾಮಿನೋಜ್ ಡಿಲೆವರಿ ಬಾಯ್ ವೊಬ್ಬ ಫೆಬ್ರುವರಿ 9 ನೇ ತಾರೀಖಿಗೆ ಮತ್ತಿನಲ್ಲಿ ತಮ್ಮ ಚೆನ್ನೈ ನಿವಾಸಕ್ಕೆ ಭೇಟಿ ನೀಡಿ ಪಿಜ್ಜಾ ಡಿಲೆವರಿ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಡಲ್ಟ್ಸ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದು, ಈ ಪ್ರಕರಣದಲ್ಲಿ ತಾವು ಮಾಡಿರುವ ದೂರು ಇನ್ನೂ ಬಾಕಿ ಉಳಿದಿದೆ. ಏಕೆಂದರೆ ಇದುವರೆಗೂ ತಮ್ಮ ಕಚೇರಿ ಈ ಕುರಿತು ತಮ್ಮೊಂದಿಗೆ ಯಾವುದೇ ಸಂಪರ್ಕ ನಡೆಸಿಲ್ಲ. ನನ್ನ ಬಳಿ ಹಲವು ಕಾಲ್ ಗಳು ಹಾಗೂ ವಾಟ್ಸ್ ಆಪ್ ಸಂದೇಶಗಳಿದ್ದು ಅವುಗಳನ್ನು ನಾನು ಹಂಚಿಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ ಗಾಯತ್ರಿ ಒಂದು ಚಿರಪರಿಚಿತ ಹೆಸರಾಗಿದ್ದು, ಅವರು ಬಾಲಿವುಡ್ ನ ಒಂದು ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

Trending News