Pavithra gowda : ನನ್ನ ಮಗಳು ದರ್ಶನ್‌ ಪುತ್ರಿ ಅಂತ..! ವಿಜಯಲಕ್ಷ್ಮಿ ದರ್ಶನ್‌ಗೆ ಖಡಕ್‌ ಉತ್ತರ ಕೊಟ್ಟ ಪವಿತ್ರ ಗೌಡ..! 

Pavithra gowda worn Vijayalakshmi darshan : ಕಳೆದ ಎರಡು ದಿನಗಳಿಂದ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಮತ್ತು ಪವಿತ್ರಗೌಡ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಜಗಳ ಶುರುವಾಗಿದೆ. ಮೊನ್ನೆ ಪವಿತ್ರ ಹಂಚಿಕೊಂಡಿದ್ದ ಫೋಟೋಸ್‌ಗಳಿಂದ ಪ್ರಾರಂಭವಾದ ಯುದ್ಧ ಇದೀಗ ವಯಕ್ತಿಕ ವಿಚಾರವನ್ನು ಕೆದಕುವ ಹಂತ ತಲುಪಿದೆ. ಸಧ್ಯ ವಿಜಿ ದರ್ಶನ್‌ಗೆ ಪವಿತ್ರ ಸುದೀರ್ಫ ಬರಹದ ಮೂಲಕ ಉತ್ತರ ನೀಡಿದ್ದಾರೆ.

Written by - Krishna N K | Last Updated : Jan 26, 2024, 01:41 PM IST
  • ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಮತ್ತು ಪವಿತ್ರಗೌಡ ನಡುವೆ ಸೋಷಿಯಲ್‌ ವಾರ್‌.
  • ವಿಜಿ ದರ್ಶನ್‌ಗೆ ಪವಿತ್ರ ಸುದೀರ್ಫ ಬರಹದ ಮೂಲಕ ಉತ್ತರ ನೀಡಿದ ಪವಿತ್ರಗೌಡ.
  • ನನ್ನ ಖಾಸಗಿ ಫೋಟೋಗಳನ್ನು ಪೋಸ್ಟ್‌ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ.
Pavithra gowda : ನನ್ನ ಮಗಳು ದರ್ಶನ್‌ ಪುತ್ರಿ ಅಂತ..! ವಿಜಯಲಕ್ಷ್ಮಿ ದರ್ಶನ್‌ಗೆ ಖಡಕ್‌ ಉತ್ತರ ಕೊಟ್ಟ ಪವಿತ್ರ ಗೌಡ..!  title=

Pavithra gowda Vijayalakshmi darshan : ಪವಿತ್ರ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ ಫೋಸ್ಟ್‌ನಲ್ಲಿ, ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಲೈಫ್‌ನಲ್ಲಿ ಉಂಟಾದ ತೊಂದರೆ ಇಂದ ನಾನು ಸಂಜಯ್ ಅವರಿಂದ ಡಿವೋರ್ಸ್‌ ಪಡೆದಿದೇನೆ. ಇಲ್ಲಿಯ ವರೆಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! 

ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ದಯವಿಟ್ಟು ಇದನ್ನು ಗಮನಿಸಿ "ನಾನು ಯಾವುದೇ ಸ್ವಂತ ವೈಯಕ್ತಿಕ ಅಗತ್ಯತೆಗಳು ಮತ್ತು ಕೆಲಸಕ್ಕಾಗಿ ಅವರ ಜೊತೆ ಇಲ್ಲ" ಇದು 10 ವರ್ಷಗಳ ಕಾಲ ಶುದ್ಧ ಪ್ರೀತಿ ಮತ್ತು ಕಾಳಜಿ, ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. 

ಇದನ್ನೂ ಓದಿ:ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಬಯಲಿಗೆ ಬಂತು ವಿನ್ನರ್‌ ಹೆಸರು..! ಗೆಲ್ಲೋದು ಯಾರ್‌ ಗೊತ್ತೆ?

ಈ ವಿಚಾರವಾಗಿ ವಿಜಯಲಕ್ಷ್ಮಿಯವರೆ ನನಗೆ ಹಲವಾರು ಸಾರಿ ಕಾಲ್‌ ಮಾಡಿ ನನ್ನ ಬಳಿ ಮಾತನಾಡಿದ್ದು ತಮಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ದಾಖಲೆ ಹಾಗೂ ನನ್ನ ಡಿವೋರ್ಸ್‌ ಪತ್ರಗಳನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. 

ನನ್ನ ಹಾಗೂ ನನ್ನ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮಿ ದರ್ಶನ್‌ ಯಂಬ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಹಳಷ್ಟು ಜನ ಕೆಟ್ಟ ಪದಗಳಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೇ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ಖಾಸಗಿ ಫೋಟೋಗಳನ್ನು ಪೋಸ್ಟ್‌ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ.

ಇದನ್ನೂ ಓದಿ:: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ನಿಧನ..! 

ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಬದ್ದ ಕ್ರಮ ತಗೊಳೋ ಹಕ್ಕು ಇದೆ, ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ❗️ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ ಎಂದು ನೇರವಾಗಿ ವಿಜಯಲಕ್ಷ್ಮಿ ದರ್ಶನ್‌ ಅವರನ್ನು ಟ್ಯಾಗ್‌ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News