Renukaswamy murder case : ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಂದು ಅಂತಿಮವಾಗಿ ತನಿಖೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಫೆಬ್ರುವರಿ ತಿಂಗಳಲ್ಲಿ ಪವಿತ್ರಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿರುವ ಬಗ್ಗೆ ಮನೆ ಕೆಲಸದವಾನದ ಪವನ್ ಗೆ ತಿಳಿಸಿದ್ದಳು.
ಈ ವಿಷಯವನ್ನು ಪವನ್ ಮ್ಯಾನೇಜರ್ ನಾಗರಾಜ್ ಗೆ ಹೇಳಿದ್ದ. ಹೀಗಾಗ ಸ್ವಾಮಿಯ ಸಂದೇಶದ ಬಗ್ಗೆ ದರ್ಶನ್ ಜೊತೆಗೆ ಮಾತಕತೆ ನಡೆಸಿ ರೇಣುಕಾಸ್ವಾಮಿ ಅಪಹರಿಸಲು ಸಂಚು ರೂಪಿಸಲಾಗಿತ್ತು. ಜೂನ್ 8 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಸಿ ಬೆಂಗಳೂರಿಗೆ ಕರೆತಂದು ಶಡ್ಗೆ ಕರೆತಂದು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಬಳಿಕ ಅಲ್ಲಿಂದ ಮೃತದೇಹವನ್ನು ಮೊರಿ ಬಳಿ ಬಿಸಾಕಿ ಎಸ್ಕೇಪ್ ಆಗುವವರೆಗೂ ಪವಿತ್ರಾ ಗೌಡಳ ಪಾತ್ರ ಪ್ರಕರಣದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿದೆ..
ಇದನ್ನೂ ಓದಿ:ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್.. ಲಕ್ಷ್ಮೀ ಬಾರಮ್ಮ ಸಿರೀಯಲ್ ನಟಿ ಭೂಮಿಕಾ ನಿಜಕ್ಕೂ ಯಾರು ಗೊತ್ತೇ?
ಹೌದು, ಪವಿತ್ರಾಗೌಡ ಕೊಲೆ ಮಾಡಲು ಮೂಲ ಕಾರಣ ಅನ್ನೋದು ಇಂದು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ತರುವವರಿಗೂ ಆರೋಪಿಗಳ ಜೊತೆ ಸಂಪರ್ಕದಲ್ಲಿ ಪವಿತ್ರಾಗೌಡ ಇದ್ದಳಂತೆ. ಶೆಡ್ ಗೆ ರೇಣುಕಾಸ್ವಾಮಿಯನ್ನು ಕರೆತಂದ ಬಳಿಕ ದರ್ಶನ್ ಜೊತೆಗೆ ಪವಿತ್ರಾ ಹೋಗಿರೋ ಬಗ್ಗೆ ಮತ್ತು ಹಲ್ಲೆ ಮಾಡಿದ್ದಾಳೆ ಎಂಬುದನ್ನು ವಿವರಿಸಲಾಗಿದೆ.
ರೇಣುಕಾ ಮೇಲೆ ದರ್ಶನ್ ಹಾಗೂ ಇತರರು ಹಲ್ಲೆ ನಡೆಸುವ ವೇಳೆ ಪವಿತ್ರಾ ಹಾಜರಿದ್ದಳು. ಅಷ್ಟೇ ಅಲ್ಲದೇ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರೋದು ಅಧಿಕೃತ ಆಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಸೆರೆಯಾಗಿದ್ದು, ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಹೀಗಾಗಿ ತನಗೆ ಬಂದ ಅಶ್ಲೀಲ ಮೆಸೇಜ್ ಬಗ್ಗೆ ಇತರೆ ಆರೋಪಿಗಳಿಗೆ ತಿಳಿಸಿ ಕೊಲೆಗೆ ಪವಿತ್ರಾಳೇ ಮೂಲ ಕಾರಣ ಎಂಬುದನ್ನು ಚಾರ್ಜ್ ಶೀಟಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ, 17 ಆರೋಪಿಗಳು.. 231 ಸಾಕ್ಷಿ.. 3991 ಪುಟಗಳಲ್ಲಿ ಇದೆ ಈ ಎಲ್ಲ ಅಂಶ !
ಇನ್ನು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ಏನು ಮಾಡಿದ್ರು ಅನ್ನೋದು ಇತರೆ ಆರೋಪಿಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಅವರ ಪಾತ್ರ ದೃಢವಾಗಿದ್ದು, ಆಕೆಗೆ ಮತ್ತಷ್ಟು ಸಂಕಷ್ಟ ಎದುರಾಗಿರುವುದಂತೂ ಸುಳ್ಳಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.