ಜ.25ಕ್ಕೆ `ಪದ್ಮಾವತ್' ಆಗಿ ಬರ್ತಿದಾಳೆ ಪದ್ಮಾವತಿ

ದೇಶಾದ್ಯಂತ ಬಹು ವಿವಾದ ಉಂಟುಮಾಡಿದ್ದ ಸಂಜಯ್‌ ಬನ್ಸಾಲಿ ನಿರ್ದೇಶನದ  'ಪದ್ಮಾವತ್' (ಪದ್ಮಾವತಿ) ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ. 

Last Updated : Jan 8, 2018, 04:33 PM IST
ಜ.25ಕ್ಕೆ `ಪದ್ಮಾವತ್' ಆಗಿ ಬರ್ತಿದಾಳೆ ಪದ್ಮಾವತಿ title=

ನವ ದೆಹಲಿ : ದೇಶಾದ್ಯಂತ ಬಹು ವಿವಾದ ಉಂಟುಮಾಡಿದ್ದ ಸಂಜಯ್‌ ಬನ್ಸಾಲಿ ನಿರ್ದೇಶನದ  'ಪದ್ಮಾವತ್' (ಪದ್ಮಾವತಿ) ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ. ಅಲ್ಲದೆ, ಖ್ಯಾತ ನಟ ಅಕ್ಷಯ್ ಕುಮಾರ್ ಅವರ `ಪದ್ಮನ್' ಸಿನಿಮಾ ಕೂಡ ಅಂದೇ ರಿಲೀಸ್ ಆಗಲಿದ್ದು ಎರಡೂ ಚಿತ್ರಗಳ ನಡುವೆ ಕ್ಲಾಶ್ ಆಗಲಿದೆ. 

ಈ ಹಿಂದೆ ಈ ಎರಡೂ ಚಿತ್ರಗಳ ನಡುವಿನ ಕ್ಲಾಶ್ ಕುರಿತು ಹಲವಾರು ವದಂತಿಗಳು ಕೇಳಿಬಂದಿದ್ದವು. ಆದರೆ ಇದೀಗ ಚಿತ್ರ ವಿಮರ್ಶಕ ಮತ್ತು ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡುವ ಮೂಲಕ ಚಿತ್ರ ರಿಲೀಸ್ ಡೇಟ್ ಖಚಿತಪಡಿಸಿದ್ದಾರೆ.

ಬಹಳ ದಿನಗಳ ನಂತರ ಇತ್ತೀಚಿಗೆ `ಪದ್ಮಾವತಿ' ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಯು/ಎ ಪ್ರಮಾಣಪತ್ರ ನೀಡಿ, ಚಿತ್ರದ ಹೆಸರನ್ನು `ಪದ್ಮಾವತಿ'ಗೆ ಬದಲಾಗಿ `ಪದ್ಮಾವತ್' ಎಂದು ಬದಲಾಯಿಸುವಂತೆ ಸಲಹೆ ನೀಡಿತ್ತು. 

ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಶಾಹಿದ್‌ ಕಪೂರ್‌ ಮುಂತಾದವರು ನಟಿಸಿರುವ ಈ ಸಿನಿಮಾ  ಡಿಸೆಂಬರ್ 1, 2017 ರಂದು ಆರಂಭದ ಬಿಡುಗಡೆ ದಿನಾಂಕವನ್ನು ಹೊಂದಿತ್ತು. ಆದರೆ ಸಿಬಿಎಫ್ಸಿಯಿಂದ ಕ್ಲಿಯರೆನ್ಸ್ ಪಡೆಯಲು ವಿಫಲವಾದ ಕಾರಣ ಬಿಡುಗಡೆ ವಿಳಂಬವಾಗಿತ್ತು. 

Trending News