ನವ ದೆಹಲಿ: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರ ದೇಶಾದ್ಯಂತ ಕೋಲಾಹಲವನ್ನು ಸೃಷ್ಟಿಸಿದೆ. ಸೆನ್ಸಾರ್ ಬೋರ್ಡ್ ಸಹ ಚಿತ್ರ ಬಿಡುಗಡೆಗೆ ನಿರಾಕರಿಸಿದೆ. ಆದರೆ ಬ್ರಿಟೀಷ್ ಬೋರ್ಡ್ ಆಫ್ ಫಿಲಂಸ್ ಕ್ಲಾಸಿಫಿಕೇಷನ್ 'ಪದ್ಮಾವತಿ' ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದ್ದು, ಡಿ.1 ಕ್ಕೆ ಬ್ರಿಟನ್ ನಲ್ಲಿ 'ಪದ್ಮಾವತಿ' ಚಿತ್ರ ಬಿಡುಗಡೆಗೊಳ್ಳಲಿದೆ.
British censor board certifies 'Padmavati' for Dec 1 release in UK
Read @ANI Story | https://t.co/S6CfQnHdCN pic.twitter.com/Ul8YvsUOaz
— ANI Digital (@ani_digital) November 23, 2017
ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇಡೀ ವಿಶ್ವದಾದ್ಯಂತ ಡಿಸೆಂಬರ್ 1 ರಂದು ನಿಗದಿಗೊಳಿಸಲಾಗಿತ್ತು, ಆದರೆ ಗಲ್ಫ್ ರಾಷ್ಟ್ರಗಳಲ್ಲಿ ನವೆಂಬರ್ 30 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಭಾರತದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಚಿತ್ರ ತಂಡ ಬಿಡುಗಡೆಯ ನೂತನ ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ.
ಬಿಬಿಎಫ್ಸಿ ನೀಡಿದ ಪ್ರಮಾಣಪತ್ರಗಳ ಪ್ರಕಾರ, ಸಂಜಯ್ ಲೀಲಾ ಭಾನ್ಸಾಲಿ ನಿರ್ದೇಶನದ ಚಿತ್ರದ ಉದ್ದವು 2 ಗಂಟೆಗಳ 44 ನಿಮಿಷಗಳು.
#Padmavati certified 12A by British censors on 22 Nov 2017. Approved run time: 163 min 42 sec [2 hours, 43 minutes, 42 seconds]... Censored in both, 2D and 3D.
— taran adarsh (@taran_adarsh) November 23, 2017