ನವ ದೆಹಲಿ: ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ ಚಿತ್ರ ಬಹಳಷ್ಟು ವಿವಾದಗಳನ್ನು ಎದುರಿಸಿ ಕಡೆಗೂ ಜನವರಿ 25, 2018 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಅಂತೆಯೇ ಚಿತ್ರದ ಇತ್ತೀಚಿನ ಸಂಗ್ರಹ ಮಾಹಿತಿ ಹೊರಬಂದಿದ್ದು, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಈ ಚಿತ್ರ ಶೀಘ್ರದಲ್ಲೇ 100 ಕೋಟಿ ರೂ.ಗಳನ್ನು ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಕುರಿತು ಖ್ಯಾತ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ-
#Padmaavat continues to SPARKLE... Biz on Sat [after a big holiday on Fri] was EXCEPTIONAL... Will comfortably cross ₹ 100 cr mark today [Sun]… Wed [limited preview shows] 5 cr, Thu 19 cr, Fri 32 cr, Sat 27 cr. Total: ₹ 83 cr. India biz.
— taran adarsh (@taran_adarsh) January 28, 2018
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ಮರೆಮಾಚಿ ರಾಜವಂಶಸ್ಥರನ್ನು ಮತ್ತು ರಜಪೂತ ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಐತಿಹಾಸಿಕ ಸತ್ಯಗಳನ್ನೇ ಮರೆ ಮಾಚಲಾಗಿದೆ. ಇತಿಹಾಸಕಾರರನ್ನು ಸಂಪರ್ಕಿಸದೇ ಆತುರವಾಗಿ ಸಿನಿಮಾ ಮಾಡಿದ್ದಾರೆ ಎಂಡು ಆರೋಪಿಸುವ ಮೂಲಕ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಿಂದಾಗಿ ಡಿಸೆಂಬರ್ 1, 2017 ರಂದೇ ತೆರೆ ಕಾಣಬೇಕಿದ್ದ ಸಿನಿಮಾ ಹಲವು ವಿವಾದಗಳನ್ನು ಮೆಟ್ಟಿ ಜ.25ರಂದು ತೆರೆಕಂಡಿದೆ.
ರಾಣಿ ಪದ್ಮಾವತಿಯ ಹೆಸರಿನ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರೆ, ಶಾಹಿದ್ ಕಪೂರ್ ಮಹಾರಾಲ್ ರತನ್ ಸಿಂಗ್ ಪಾತ್ರದಲ್ಲಿ ಮತ್ತು ರಣವೀರ್ ಸಿಂಗ್ ಅಲೌದ್ದೀನ್ ಖಿಲ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.