ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರಿಂದ ಮತ್ತೋರ್ವ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್​!

‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್'. 

Last Updated : Jul 2, 2019, 10:31 AM IST
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರಿಂದ ಮತ್ತೋರ್ವ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್​! title=
Pic Courtesy: DNA (File Image)

ಬೆಂಗಳೂರು: ಸಾಮಾನ್ಯವಾಗಿ ಸೆಲಿಬ್ರಿಟಿಗಳು ಒಬ್ಬರು ಮತ್ತೊಬ್ಬರಿಗೆ ಪರೋಕ್ಷವಾಗಿ ಚಾಲೆಂಜ್ ಮಾಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಯಾವ ಸೆಲಿಬ್ರಿಟಿಯೂ ಕೂಡ  ಓಪನ್​ ಚಾಲೆಂಜ್ ಮಾಡಿರುವುದನ್ನು ಕೇಳಿಲ್ಲ. ಆದರೆ ಇದೀಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತೋರ್ವ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್ ಹಾಕಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.

ಹೌದು, ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಬರೆದಿರುವ ದರ್ಶನ್, ಆ ಓಪನ್ ಚಾಲೆಂಜ್ ಏನೆಂಬುದನ್ನು ಇಂದು ಮಧ್ಯಾಹ್ನ ಫೇಸ್ಬುಕ್ ಲೈವ್ ನಲ್ಲಿ ತಿಳಿಸುವುದಾಗಿ' ಬರೆದುಕೊಂಡಿದ್ದಾರೆ.

ಬೆಳ್ಳಂಬೆಳಗ್ಗೆ ದಚ್ಚು ಸಂದೇಶ ಕಂಡು ಥ್ರಿಲ್ ಆಗಿರುವ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸಾವಿರಾರು ಲೈಕ್, ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ನಮ್ಮ ಬಾಸ್ ಇವತ್ತು ಯಾರಿಗಾದ್ರು ಗ್ರಹಚಾರ ಬಿಡುಸ್ತಾರ ಅಥವಾ ಬೇರೆ ಯಾವುದಾದರೂ ವಿಷಯ ಹಂಚಿಕೊಳ್ಳುತ್ತಾರೊ ಮಧ್ಯಾಹ್ನದವರೆಗೂ ಕಾಯಬೇಕು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಣ್ಣ ನೀವ್ ಕೆಟ್ಟದ್ದು ಮಾಡಿದೋನಿಗೂ ಒಳ್ಳೇದು ಮಾಡೋ ಕರ್ಣ ಆದ್ರೂ ಈ ತರ tweet ಮಾಡಿದಿರಾ ಅಂದ್ರೆ ನೋಡ್ಲೇಬೇಕಲ್ವಾ..... Waiting ಅಂತ ಇನ್ನೋರ್ವ ಅಭಿಮಾನಿ ಕುತೂಹಲ ವ್ಯಕ್ತಪಡಿಸಿದ್ದಾರೆ.

ಈ ರೀತಿ ಇನ್ನೂ ಹಲವರು ವಿ ಆರ್ ವೈಟಿಂಗ್ ಬಾಸ್, ನಾವು ಕಾಯುತ್ತಿದ್ದೇವೆ ಎಂದು ದರ್ಶನ್ ಓಪನ್‌ ಚಾಲೆಂಜ್‌ ಏನು ಎಂಬುದನ್ನು ತಿಳಿಯಲು ಕಾತುರರಾಗಿ ಕಾಯುತ್ತಿದ್ದಾರೆ.
 

Trending News