Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!

Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌

Written by - Savita M B | Last Updated : Apr 23, 2024, 01:55 PM IST
  • ಚಿತ್ರರಂಗಕ್ಕೆ ಬಂದು ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿ ಮರೆಯಾದವರು ಲೆಕ್ಕವಿಲ್ಲದಷ್ಟು ಮಂದಿ
  • ಆದರೆ ಕೆಲವರು ಎಷ್ಟೇ ನಿರಾಕರಣೆ ಎದುರಿಸಿದರೂ ಹಿಂದೆ ಸರಿಯುವುದಿಲ್ಲ
Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!   title=

Bollywood actress Vidya Balan: ಚಿತ್ರರಂಗಕ್ಕೆ ಬಂದು ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿ ಮರೆಯಾದವರು ಲೆಕ್ಕವಿಲ್ಲದಷ್ಟು ಮಂದಿ. ಅವರಲ್ಲಿ ಹೆಚ್ಚಿನವರು ಸಿಕ್ಕಾಪಟ್ಟೆ ಗೋಳಾಡುವುದಿಲ್ಲ.. ಅರಿಯಾದ ಅವಕಾಶಗಲೂ ಸಿಗದೇ ಹೋದರೇ ಸುಮ್ಮನೇ ಹಿಂದೆ ಸರಿದು ಬಿಡುತ್ತಾರೆ.. ಆದರೆ ಕೆಲವರು ಎಷ್ಟೇ ನಿರಾಕರಣೆ ಎದುರಿಸಿದರೂ ಹಿಂದೆ ಸರಿಯುವುದಿಲ್ಲ. ಸರಿಯಾದ ಹಿಟ್ ಸಿಗುವವರೆಗೂ ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಸ್ಟಾರ್ ಸೆಲೆಬ್ರಿಟಿ ಎಂದೇ ಗುರುತಿಸಿಕೊಂಡಿರುವ ನಟಿಯೊಬ್ಬರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಇಂತಹ ಹಲವು ನಿರಾಕರಣೆಗಳನ್ನು ಎದುರಿಸಿದ್ದರು.

ಈ ನಟಿಯನ್ನು ಏಕಕಾಲದಲ್ಲಿ 13 ಚಿತ್ರಗಳಿಂದ ರಿಜೆಕ್ಟ್‌ ಮಾಡಲಾಗಿತ್ತು.. ಅವರಿಗೆ ಐರನ್ ಲೆಗ್ ಮತ್ತು ಬಾಡಿ ಶೇಮಿಂಗ್ ಎಂಬ ಹಣೆಪಟ್ಟಿ ಹಚ್ಚಲಾಗಿತ್ತು. ಆದರೆ ಈ ನಟಿಗೆ ಸದ್ಯ ಆಕ್ಷನ್‌ ಕಟ್‌ ಹೇಳಿದರೆ ಬರೋಬ್ಬರಿ 100 ಕೋಟಿ ನೀಡಬೇಕು.. ಆ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್‌ ಬೆಡಗಿ ವಿದ್ಯಾ ಬಾಲನ್..‌ 

ಇದನ್ನೂ ಓದಿ-ರಶ್ಮಿಕಾ ಮಂದಣ್ಣ, ರಕ್ಷಿತ್‌ ಶೆಟ್ಟಿ ಬ್ರೇಕಪ್‌ಗೆ ಅಸಲಿ ಕಾರಣ ಏನು? ಆ ವ್ಯಕ್ತಿಯಿಂದಲೇ ದೂರವಾದ್ರಾ ಕಿರಿಕ್‌ ಜೋಡಿ?!

ವಿದ್ಯಾ ಬಾಲನ್ ಅವರು ಜನವರಿ 1, 1979 ರಂದು ಮುಂಬೈನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು... 1995 ರಲ್ಲಿ 16 ನೇ ವಯಸ್ಸಿನಲ್ಲಿ ಭಾರತೀಯ ಸಿಟ್ಕಾಮ್ 'ಹಮ್ ಪಾಂಚ್' ನ ಮೊದಲ ಸೀಸನ್‌ನಲ್ಲಿ ನಟಿಸಿದರು. ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟ ವಿದ್ಯಾ ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ವಿದ್ಯಾ ಬಾಲನ್ ಅವರು ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಮೋಹನ್ ಲಾಲ್ ಎದುರು ಮಲಯಾಳಂನ ‘ಚಕ್ರಂ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದರು. ಅದರ ನಂತರ ಅವರು ಇನ್ನೂ 12 ಮಲಯಾಳಂ ಚಿತ್ರಗಳಿಗೆ ಸಹಿ ಹಾಕಿದರು. ಆದರೆ, ನಿರ್ಮಾಣ ಸಮಸ್ಯೆಯಿಂದ ಚಕ್ರ ಚಿತ್ರ ಸಿಕ್ಕಿಹಾಕಿಕೊಂಡಿತ್ತು. ಆ ವೇಳೆ ಮೋಹನ್ ಲಾಲ್ ಅಭಿನಯದ ಸಿನಿಮಾವೊಂದು ಮುಂದೂಡಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು. ಪ್ರಾಜೆಕ್ಟ್ ಬ್ರೇಕ್ ಆಗಲು ವಿದ್ಯಾ ಬಾಲನ್ ಕಾರಣ ಎಂದು ನಿರ್ಮಾಪಕರು ಆರೋಪಿಸಿದ್ದರು.. ಆಗಲೇ ಆಕೆಗೆ ಐರನ್ ಲೆಗ್ ಸೀಲ್ ನೀಡಲಾಯಿತು. ನಂತರ ವಿದ್ಯಾ ಬಾಲನ್ ಸಹಿ ಮಾಡಿದ್ದ ಚಿತ್ರಗಳಿಂದಲೂ ಹೊರಗುಳಿದಿದ್ದರು.

ಇದನ್ನೂ ಓದಿ-Actor shobaraj: ನೂರಾರು ಸಿನಿಮಾಗಳ ಖಡಕ್‌ ವಿಲನ್‌ ಶೋಭರಾಜ್‌ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ ಗೊತ್ತಾ?

 2001ರಲ್ಲಿ ಲಿಂಗುಸ್ವಾಮಿ ಅವರ ‘ರನ್’ (2002) ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾದರು. ಆದರೆ ಒಂದು ಶೆಡ್ಯೂಲ್ ಮುಗಿದ ನಂತರ ಅವರನ್ನು ಕೈಬಿಟ್ಟು ಮೀರಾ ಜಾಸ್ಮಿನ್ ಅವರನ್ನು ನೇಮಿಸಲಾಯಿತು. ವಿದ್ಯಾ ಬಾಲನ್ ನಂತರ ತಮ್ಮ ಮೂರನೇ ತಮಿಳು ಚಿತ್ರ 'ಮನಸೆಲ್ಲಂ' (2003) ಗೆ ಸಹಿ ಹಾಕಿದರು. ಆದರೆ ನಿರ್ದೇಶಕರಿಗೆ ಅವರ ನಟನೆ ಇಷ್ಟವಾಗದ ಕಾರಣ ತ್ರಿಷಾ ಅವರನ್ನು ತೆಗೆದುಕೊಳ್ಳಲಾಯಿತು..

2003 ರಲ್ಲಿ ಅವರ ಮಲಯಾಳಂ ಚಿತ್ರ ಚಿತ್ರಮಂದಿರಗಳಿಗೆ ಬರಲಿಲ್ಲ. ಇದರಂತೆ ಒಂದಲ್ಲ, ಎರಡಲ್ಲ.. ಒಟ್ಟು ವಿದ್ಯಾ ಬಾಲನ್ ನಾಯಕಿಯಾಗಿ ಆಯ್ಕೆಯಾದ 13 ಚಿತ್ರಗಳಿಂದ ಅವರನ್ನು ತೆಗೆದುಹಾಕಲಾಯಿತು..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News