'ಸೀತಾ ರಾಮ ಕಲ್ಯಾಣ' ಆಗಿ ಬರುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ..!

ನಿರ್ದೇಶಕ-ನೃತ್ಯ ಸಂಯೋಜಕರಾದ ಹರ್ಷ ಮಾಡಲಿದ್ದಾರಾ ಕಮಾಲ್?  

Last Updated : Dec 1, 2017, 04:35 PM IST
'ಸೀತಾ ರಾಮ ಕಲ್ಯಾಣ' ಆಗಿ ಬರುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ..! title=

'ಜಾಗ್ವಾರ್' ಸಿನಿಮಾದಿಂದ ಚಂದನವನಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ 'ಸೀತಾ ರಾಮ ಕಲ್ಯಾಣ' ಆಗಿ ಮತ್ತೆ ಬರುತ್ತಿದ್ದಾರೆ. 

ಜಾಗ್ವಾರ್ ನಂತರ ನಿಖಿಲ್ ಹಲವು ಕಥೆಗಳನ್ನು ಕೇಳಿದ್ದರಂತೆ. ಆದರೆ ಯಾವುದನ್ನೂ ಒಪ್ಪದ ಇವರು ಕೊನೆಗೂ ಅಂಜನೀ ಪುತ್ರ ನಿರ್ದೇಶಕ ಹಾಗೂ ನೃತ್ಯ ಸಂಯೋಜಕರಾದ ಹರ್ಷ ನಿರ್ದೇಶನದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಬಸವನಗುಡಿಯ ಕಾರಂಜಿ ದೇವಸ್ಥಾನದಲ್ಲಿ 'ಸೀತಾ ರಾಮ ಕಲ್ಯಾಣ' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಈ ಚಿತ್ರ ಪಕ್ಕಾ ಫ್ಯಾಮಿಲಿ ಮನರಂಜನೆಯ ಚಿತ್ರ. ಜೊತೆಗೆ ಸಾಕಷ್ಟು ಹಾಸ್ಯ ದೃಶ್ಯಗಳನ್ನೂ ಒಳಗೊಂಡಿದೆ ಅಂತ ಹೇಳ್ತಾರೆ ಹರ್ಷಾ. ನಿರ್ದೇಶಕ-ನೃತ್ಯ ಸಂಯೋಜಕರಾದ ಹರ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಮಾಡಲಿದ್ದಾರಾ ಕಮಾಲ್? ಎಂಬುದನ್ನು ಕಾದುನೋಡಬೇಕಿದೆ.

ಸೀತಾ ರಾಮ ಕಲ್ಯಾಣ ಎಂದರೆ ನಟ-ನಟಿಯ ವಿವಾಹದ ಬಗ್ಗೆ ಎಣೆದಿರುವ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಇದು ಸಾಮಾನ್ಯ ಲವ್ ಸ್ಟೋರಿ ಅಲ್ಲ ಅಂತಾರೆ ಹರ್ಷ. ಒಂದು ದಶಕದಿಂದ ಕಾಣದೆ ಇರುವ ಸೊಗಡು ಈ ಚಿತ್ರದಲ್ಲಿ ಕಾಣಲಿದೆ. ಇದೊಂದು ಗ್ರಾಮೀಣ ಸೊಗಡಿನ ಚಿತ್ರ. ಜೀವನದ ಓಡುವ ಬಂಡಿಯಲ್ಲಿ ನಾವೆಲ್ಲರೂ ಮರೆತಿರುವ ಸಾಮಾನ್ಯ ವಿಷಯಗಳ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ ಎಂದು ನಿಖಿಲ್ ತಿಳಿಸಿದ್ದಾರೆ. ಈ ಚಿತ್ರದ ಜನವರಿಯಿಂದ ಸೆಟ್ಟೇರಲಿದೆ ಎಂದು ಚಿತ್ರತಂಡ ತಿಳಿಸಿದೆ. 

Trending News