ಕಾನೂನು ಎಲ್ಲರಿಗೂ ಒಂದೇ ಅಲ್ವಾ : ಸಂತೋಷ್‌ - ಅರ್ಚಕರ ಬಂಧನ, ಸೆಲೆಬ್ರೆಟಿಗಳ ವಿಚಾರಣೆ..! ನ್ಯಾಯ ಎಲ್ಲಿದೆ..?

Tiger nail case : ಬಿಗ್‌ಬಾಸ್‌ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಲಾಯಿತು. ಅಲ್ಲದೆ, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ ನನ್ನ ಬಳಿ ಇರುವುದು ನಿಜವಾದ ಹುಲಿ ಉಗುರು ಎಂದ ರಾಜ್ಯ ಸಭಾ ಸದಸ್ಯ ಜಗ್ಗೇಶ್‌ ವಿರುದ್ಧ ನೋಟಿಸ್‌ ನೀಡಲಾಗಿದೆ. ಉಳಿದ ನಟರ ವಿಚಾರಣೆ ಮಾಡಲಾಗಿದೆಯಷ್ಟೇ..

Written by - Krishna N K | Last Updated : Oct 27, 2023, 01:33 PM IST
  • ಬಿಗ್‌ಬಾಸ್‌ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್‌ ಅವರನ್ನು ಬಂಧನ
  • ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ವಶಕ್ಕೆ
  • ರಾಜಕೀಯ ಗಣ್ಯರು, ನಟರ ಮನೆಗೆ ಹೋಗಿ ವಿಚಾರಣೆ, ತನಿಖೆ
ಕಾನೂನು ಎಲ್ಲರಿಗೂ ಒಂದೇ ಅಲ್ವಾ : ಸಂತೋಷ್‌ - ಅರ್ಚಕರ ಬಂಧನ, ಸೆಲೆಬ್ರೆಟಿಗಳ ವಿಚಾರಣೆ..! ನ್ಯಾಯ ಎಲ್ಲಿದೆ..? title=

Tiger claw pendant case : ವರ್ತೂರು ಸಂತೋಷ್‌ ಬಳಿ ಹುಲಿ ಉಗುರು ಇದೇ ಅಂತ ತಿಳಿದ ತಕ್ಷಣ ಬಿಗ್‌ಬಾಸ್‌ ಮನೆಗೆ ಹೋಗಿ ಅರಣ್ಯಾಧಿಕಾರಿಗಳು ಅವರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಅಲ್ಲದೆ ಜಾಮೀನು ಸಹ ಇಲ್ವಂತೆ. ಆದ್ರೆ ರಾಜಕೀಯ ಗಣ್ಯರು, ಸ್ಟಾರ್‌ ನಟರು, ಸ್ವಾಮೀಜಿಗಳು ಬಳಿ ಹುಲಿ ಉಗುರು ಇದ್ದರೂ ಸಹ ವಿಚಾರಣೆ ನಡೆಸಲಾಗುತ್ತಿದೆ ಎಂಬ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ತಾರತಮ್ಯ ವಿಚಾರಕ್ಕೆ ನಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು.. ಬಿಗ್‌ಬಾಸ್‌ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಲಾಯಿತು. ಸಧ್ಯ ಅವರು ಜೈಲಿನಲ್ಲಿದ್ದಾರೆ. ಅಲ್ಲದೆ, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಆದ್ರೆ ನನ್ನ ಬಳಿ ಇರುವುದು ನಿಜವಾದ ಹುಲಿ ಉಗುರು ಎಂದ ರಾಜ್ಯ ಸಭಾ ಸದಸ್ಯ ಜಗ್ಗೇಶ್‌ ವಿರುದ್ಧ ನೋಟಿಸ್‌ ನೀಡಲಾಗಿದೆ. ಉಳಿದ ನಟರ ವಿಚಾರಣೆ ಮಾಡಿ ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ನಟ ದರ್ಶನ್‌ ಮನೆಯಲ್ಲಿ ಸಿಕ್ಕ ಹುಲಿ ಉಗುರುಗಳು ನಕಲಿಯಾಗಿದ್ದವು.

ಇದನ್ನೂ ಓದಿ: ಡಿಸೆಂಬರ್‌ 6ಕ್ಕೆ ನಂದಿ ಅವಾರ್ಡ್ಸ್ ಸಮಾರಂಭ: ಕರ್ನಾಟಕ ರಾಜ್ಯ ಪ್ರಶಸ್ತಿ

ಸಧ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಹುಲಿ ಉಗುರಿನ ಪೆಂಡೆಂಟ್‌ ಧರಿಸಿರುವ ಮೃಣಾಲ್ ಹೆಬ್ಬಾಳ್ಕರ್ ಅವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅರಣ್ಯಾಧಿಕಾರಿಗಳು ಸಹ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ. ಆದ್ರೆ ಹುಲಿ ಉಗುರು ಅಸಲಿ ಅಥವಾ ನಕಲಿ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ.

ವಿಪರ್ಯಾಸ ಅಂದ್ರೆ ಅರಣ್ಯಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ವಲಯ ಅರಣ್ಯಾಧಿಕಾರಿ (RFO) ಮುನಿರಾಜ್ ಕೂಡ ಹುಲಿ ಉಗುರು ಧರಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಕುರಿತು ದೂರು ಸಹ ದಾಖಲಾಗಿದೆ. ಸ್ವಯಂ ಸೇವಕ ಬಾಬು ಎಂಬುವರು ಮುನಿರಾಜ್‌ ವಿರುದ್ಧ ದೂರು ನೀಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಗಾಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. 

ಇದನ್ನೂ ಓದಿ:ಶಾರುಖ್‌ ʼಪಠಾಣ್‌ʼ, ʼಜವಾನ್‌ʼ ದಾಖಲೆ ಮುರಿಯತ್ತಾ ಸಲ್ಮಾನ್‌ ಭಾಯ್‌ ʼಟೈಗರ್‌ 3ʼ..! ಏನಂತೀರಾ.?

ಆದ್ರೆ ಸಾಮಾನ್ಯ ಜನರ ವಿರುದ್ಧ ದೂರು ಬಂದ್ರೆ ತಕ್ಷಣ ಅವರನ್ನು ಹಿಡಿದು ಠಾಣೆಗೆ ತರುವ ಪೊಲೀಸರು ಸೆಲೆಬ್ರೆಟಿಗಳ ವಿಚಾರದಲ್ಲಿ ಏಕೆ ವಿಚಾರಣೆಗಷ್ಟೇ ಸಿಮಿತಗೊಳಿಸುತ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೆ, ಉಗುರು ಧರಿಸಿದ್ದ ಆರೋಪದ ಮೇಲೆ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಅರ್ಚಕರನ್ನ ಬಂಧಿಸುವ ಕಾಂಗ್ರೆಸ್ ಸರ್ಕಾರ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಮತ್ತು ಪುತ್ರರನ್ನ ಯಾಕೆ ಅರಣ್ಯ ಇಲಾಖೆ ಬಂಧಿಸುವುದಿಲ್ಲ? "ಕಾನೂನು ಎಲ್ಲರಿಗೂ ಒಂದೇ ಅಲ್ವಾ?" ಎಂದು ಕಿರಿಕಾಡುತ್ತಿದ್ದಾರೆ.

ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್‌ ಅವರೇ ಒರಿಜಿನಲ್ ಹುಲಿ ಉಗುರು ಎಂದು ಸ್ವತಃ ಒಪ್ಪಿಕೊಂಡ ದಾಖಲೆ ಇರುವಾಗ ಎಲ್ಲರ ಚಿತ್ತ ನಿಮ್ಮ ಇಲಾಖೆಯ ಮುಂದಿನ ಹೆಜ್ಜೆಯತ್ತ ಇದೆ.. ನೋಡೋಣ ಏನ್ ಕ್ರಮ ಜರುಗಿಸುವಿರೆಂದು ಎಂದು ಅರಣ್ಯಾಧಿಕಾರಿಗಳ ನಡೆ ಕುರಿತು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ, ನಿಜ ಇಲ್ಲಿ ಸಂತೋಷವ್ರಿಗೊಂದು ಜಗ್ಗೇಶವ್ರಿಗೊಂದು ನ್ಯಾಯ ಇಲ್ಲವಲ್ಲ ಇವರನ್ನು ಬಂಧಿಸಿ ತನಿಖೆ ನಡೆಸಿ. ಇದಕ್ಕಿಂತ ಸಾಕ್ಷಿ ಬೇಕೆ ಎಂದು ಅಂತರ್ಜಾಲ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News