ಕುತೂಹಲಕ್ಕೆ ಕಾರಣವಾದ NBK107 ಫಸ್ಟ್ ಲುಕ್! ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ 'ಮಫ್ತಿ'?

NBK107: 'ಎನ್‌ಬಿಕೆ 107' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕನ್ನಡದ 'ಮಫ್ತಿ' (Mufti) ಸಿನಿಮಾ  ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ಎಂಬ ಕುತೂಹಲ ಮೂಡಿಸಿದೆ. 

Written by - Chetana Devarmani | Last Updated : Feb 23, 2022, 05:55 PM IST
  • 'ಎನ್‌ಬಿಕೆ 107' ಚಿತ್ರದ ಫಸ್ಟ್ ಲುಕ್ ರಿಲೀಸ್
  • ಕನ್ನಡದ 'ಮಫ್ತಿ' ಸಿನಿಮಾ ತೆಲುಗಿನಲ್ಲೂ ರಿಮೇಕ್?
  • ಕುತೂಹಲಕ್ಕೆ ಕಾರಣವಾದ NBK107 ಫಸ್ಟ್ ಲುಕ್!
ಕುತೂಹಲಕ್ಕೆ ಕಾರಣವಾದ NBK107 ಫಸ್ಟ್ ಲುಕ್! ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ 'ಮಫ್ತಿ'?  title=
ಎನ್‌ಬಿಕೆ 107

ಎನ್‌ಬಿಕೆ 107 ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಮತ್ತು ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸುತ್ತಿದ್ದು, ಬಾಲಕೃಷ್ಣ ಅವರಿರುವ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. 

ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

'ಅಖಂಡ'ದ (Akhanda) ಸೂಪರ್ ಯಶಸ್ಸಿನ ನಂತರ, ನಂದಮೂರಿ ಬಾಲಕೃಷ್ಣ ಇದೀಗ ಗೋಪಿಚಂದ್ ಮಲಿನೇನಿ ಅವರ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ತಾತ್ಕಾಲಿಕವಾಗಿ NBK107 ಎಂದು ಹೆಸರಿಸಲಾಗಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಂದು ನಿರ್ಮಾಪಕರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. 

 

 

ಈ ಚಿತ್ರದಲ್ಲಿ ಬಾಲಕೃಷ್ಣ ಅವರ ನೋಟವು ಶಿವರಾಜ್ ಕುಮಾರ್ (Shivarajkumar) ಅವರ ಲುಕ್ ಗೆ ಹೋಲುತ್ತದೆ. ಇದರಿಂದಾಗಿ ಈ ಪೋಸ್ಟರ್ ನೋಡಿದ ನಂತರ, ಈ ಚಿತ್ರವು ಕನ್ನಡದ 'ಮಫ್ತಿ' ಚಿತ್ರದ ರಿಮೇಕ್ ಆಗಿದೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ. 

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News