ಸ್ಯಾಂಡಲ್ ವುಡ್ ನ ಖ್ಯಾತ ತಾರೆ ಸುದೀಪ್ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಇಂದಿಗೆ 16 ವರ್ಷಗಳಾಗಿವೆ. ಶಾಂತಿ ಸಾಗರದಲ್ಲಿ ಮತ್ತೆ ಶಾಂತಿ ಮೂಡಿದೆ. ಕಿಚ್ಚ ಸುದೀಪ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ "ಮನೆಯೇ ಮಂತ್ರಾಲಯ..ಮನೆಯೊಡತಿಯೇ ಆಲಯದ ಕಳಶ..ಮಕ್ಕಳೆ ದೇವರವರ..ನೂರ್ಕಾಲ ಸುಖವಾಗಿ ಬಾಳಿ..ಯಾರಕಣ್ಣು ನಿಮಗೆ ತಾಕದಿರಲಿ..happy marrage aniversary ಸಹೋದರ" ಎಂದು ಶುಭಾಶಯ ಕೋರಿದ್ದಾರೆ.
ನವರಸ ನಾಯಕರ ಈ ಶುಭ ಹಾರೈಕೆ ನಿಜವಾಗಲಿ, ಸುದೀಪ್-ಪ್ರಿಯಾ ದಾಂಪತ್ಯ ಜೀವನ ನೂರ್ಕಾಲ ಸುಖವಾಗಿ ಬಾಳಲಿ ಎಂದೂ ನಾವು ಹಾರೈಸೋಣ... ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಸುದೀಪ್- ಪ್ರಿಯಾ ಸುದೀಪ್. ಈ ವರ್ಷದ ದೀಪಾವಳಿಯು ನಿಮ್ಮ ಕುಟುಂಬಕ್ಕೆ ಸುಖ-ಶಾಂತಿ ತರಲಿ ಎಂದು ನಾವು ಹೃತ್ಪೂರ್ವಕವಾಗಿ ಆಶಿಸುತ್ತೇವೆ.