1000 ಎಪಿಸೋಡ್‌ಗಳನ್ನ ಪೂರೈಸಿದ ʻನಮ್ಮನೆ ಯುವರಾಣಿʼ, ಸೆಟ್‌ನಲ್ಲಿ ಹೀಗಿತ್ತು ಸಂಭ್ರಮ

Nammane Yuvarani: ʻನಮ್ಮನೆ ಯುವರಾಣಿʼ ಧಾರಾವಾಹಿ ಬರೋಬ್ಬರಿ 1000 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಪೂರೈಸಿದೆ. ಸದ್ಯ ನಮ್ಮನೆ ಯುವರಾಣಿ ಇಡಿ ಸೆಟ್‌ ಈ ಸಂತಸವನ್ನ ಸಂಭ್ರಮಿಸುತ್ತಿದೆ.

Written by - CHARITHA PATEL | Edited by - Chetana Devarmani | Last Updated : Jun 20, 2022, 04:11 PM IST
  • ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥಾಹಂದರದ ಧಾರಾವಾಹಿಗಳು ಸಾಕಷ್ಟಿವೆ
  • 1000 ಎಪಿಸೋಡ್‌ಗಳನ್ನ ಪೂರೈಸಿದ ʻನಮ್ಮನೆ ಯುವರಾಣಿʼ
  • ಸದ್ಯ ನಮ್ಮನೆ ಯುವರಾಣಿ ಇಡಿ ಸೆಟ್‌ ಈ ಸಂತಸವನ್ನ ಸಂಭ್ರಮಿಸುತ್ತಿದೆ
1000 ಎಪಿಸೋಡ್‌ಗಳನ್ನ ಪೂರೈಸಿದ ʻನಮ್ಮನೆ ಯುವರಾಣಿʼ, ಸೆಟ್‌ನಲ್ಲಿ ಹೀಗಿತ್ತು ಸಂಭ್ರಮ  title=
ನಮ್ಮನೆ ಯುವರಾಣಿ

Nammane Yuvarani: ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥಾಹಂದರದ ಧಾರಾವಾಹಿಗಳು ಸಾಕಷ್ಟಿವೆ. ಆದರೆ ಅದೆಷ್ಟು ಧಾರಾವಾಹಿಗಳು ಟಿಆರ್‌ಪಿ ಕಾರಣದಿಂದಲೋ ಅಥವಾ ಮತ್ತಾವುದಾದರೂ ಕಾರಣದಿಂದ ಅರ್ಧಕ್ಕೆ ಮುಗಿದು ಹೋಗುತ್ತಿವೆ. 500 ಎಪಿಸೋಡ್‌ಗಳನ್ನ ಕಂಪ್ಲೀಟ್‌ ಮಾಡುವುದು ಕಷ್ಟವಾಗಿದೆ. ಅಂತಹದರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ʻನಮ್ಮನೆ ಯುವರಾಣಿʼ ಧಾರಾವಾಹಿ ಬರೋಬ್ಬರಿ 1000 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಪೂರೈಸಿದೆ. ಸದ್ಯ ನಮ್ಮನೆ ಯುವರಾಣಿ ಇಡಿ ಸೆಟ್‌ ಈ ಸಂತಸವನ್ನ ಸಂಭ್ರಮಿಸುತ್ತಿದೆ.

ಇದನ್ನೂ ಓದಿ: ಸ್ಮಾಲ್‌ ಸ್ಕ್ರೀನ್‌ನಿಂದ ಬಿಗ್‌ ಸ್ಕ್ರೀನ್‌ಗೆ ಹಿಟ್ಲರ್‌ ಕಲ್ಯಾಣದ ಲೀಲಾ!

ಜೈಮಾತ ಕಂಬೈನ್ಸ್‌ ಬ್ಯಾನರ್‌ ಅಡಿ ಮೂಡಿ ಬರುತ್ತಿರುವ ಈ ಧಾರಾವಾಹಿಯನ್ನ ಜನ ತುಂಬಾನೆ ಇಷ್ಟಪಟ್ಟಿದ್ದಾರೆ. ಈ ಮುಂಚೆ ಈ ಧಾರವಾಹಿಯಲ್ಲಿ ಮೀರಾ ಹಾಗೂ ಅನಿಕೇತ್‌ ಪಾತ್ರವನ್ನು ಜನ ತುಂಬಾನೆ ಮೆಚ್ಚಿಕೊಂಡಿದ್ದರು. ಆದರೆ ಇದ್ದಕಿದ್ದ ಹಾಗೆ, ಕಥೆಯಲ್ಲಿ ಟ್ವಿಸ್ಟ್‌ ಬಂದು ಮೀರಾ ಹಾಗೂ ಸಾಕೇತ್‌ ಪಾತ್ರಗಳು ವೈಂಡ್‌ ಆಯ್ತು. ಆ ಬಳಿಕ ಶುರುವಾಗಿದ್ದೆ ಗಂಗಾ ಹಾಗೂ ಪ್ರಣಮ್‌ ಅಧ್ಯಾಯ. ಇವರಿಬ್ಬರನ್ನು ಶುರುವಿನಲ್ಲಿ ಜನ ನಿರಾಕರಿಸಿದರು. ಆದರೆ ಕತೆ ಸಾಗ್ತಾ ಸಾಗ್ತಾ ಈ ಜೋಡಿಯನ್ನು ಪ್ರೇಕ್ಷಕರು ಮೆಂಚಿಕೊಂಡಿದ್ದಾರೆ. ಈ ಮುದ್ದಾದ ಜೋಡಿಯ ಕಾಂಬಿನೇಷನ್‌ ಸ್ಕ್ರೀನ್‌ನಲ್ಲಿ ಅದ್ಬುತವಾಗಿ ಮೂಡಿ ಬರುತ್ತಿದೆ.

 

 

ಇನ್ನೂ ಈ ಧಾರವಾಹಿಯ ಬಗ್ಗೆ ಹೇಳೊದಾದ್ರೆ, ಪತ್ರಿಯೊಂದು ಪಾತ್ರಕ್ಕೂ ತನ್ನದೆ ಆದ ಮಹತ್ವವನ್ನು ನೀಡಿದ್ದಾರೆ. ಗಂಡ-ಹೆಂಡಿತಿಯ ನಡುವಿನ ಪ್ರೀತಿ, ಅಣ್ಣ-ತಮ್ಮನ ನಡುವಿನ ಬಾಂಧವ್ಯ ಹಾಗೂ ಅದ್ಬುತವಾದ ಸ್ನೇಹದ ಬಗ್ಗೆ ಎಳೆಎಳೆಯಾಗಿ ಬಿಡಿಸಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಸಂಸಾರದಲ್ಲಿ ಪ್ರತಿಯೊಬ್ಬರ ಪಾತ್ರ ಯಾವ ರೀತಿ ಇರಲಿದೆ ಅದರಲ್ಲೂ ಸೊಸೆಯಾಗಿ ಬಂದವಳು ಹೇಗಿದ್ದರೆ ಒಂದು ಕುಟುಂಬ ಚೆನ್ನಾಗಿರುತ್ತೆ ಎಂಬುವುದು ನಮ್ಮನೆ ಯುವರಾಣಿ ತಂಡ ತೋರಿಸಿಕೊಟ್ಟಿದೆ.

ಒಟ್ಟು ಮೂರು ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಸೀರಯಲ್‌ನ ತಂಡದ ಪ್ರತಿಯೊಬ್ಬರ ಪರಿಶ್ರಮಕ್ಕೆ ಇಂದು ಈ 1000 ಎಪಿಸೋಡ್‌ಗಳ ಮೂಲಕ ಪ್ರತಿಫಲ ಸಿಕ್ಕಂತಾಗಿದೆ. ನಮ್ಮನೆ ಯುವರಾಣಿ ತಂಡ ಸದ್ಯ ಈ ಖುಷಿಯನ್ನ ಕೇಕ್‌ ಕತ್ತರಿಸುವ ಮೂಲಕ ಸಲಿಬ್ರೇಟ್‌ ಮಾಡಿದೆ. ಇನ್ನೂ ಈ ಧಾರವಾಹಿಯ ಮುಖ್ಯ ಪಾತ್ರಧಾರಿ ಸಾಕೇತ್‌ ಅಲಿಯಾಸ್‌ ರಘು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನ ಶೇರ್‌ ಮಾಡಿವುದರ ಜೊತೆಗೆ ಇಷ್ಟು ದಿನ ನನ್ನ ಪಾತ್ರ ಮೆಚ್ಚಿ ತಮ್ಮ ಟೀಮ್‌ನ ಸಪೋರ್ಟ್‌ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Kiccha Sudeep: ಪೊಲೀಸ್ ತಂಡದ ಜೊತೆ ಕಿಚ್ಚನ ಕ್ರಿಕೆಟ್.. ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಸುದೀಪ್

ಒಟ್ಟಿನಲ್ಲಿ ಸಾಕಷ್ಟು ಟ್ವಿಸ್ಟ್‌ ಅಂಡ್‌ ಟರ್ನ್‌ಗಳನ್ನು ನೀಡುತ್ತ ಕಥೆಯನ್ನು ಎಲ್ಲೂ ಸಹ ಲ್ಯಾಗ್‌ ಮಾಡದೆ ಬರೋಬ್ಬರಿ ಮೂರು ವರ್ಷ ಪ್ರೇಕ್ಷಕರಿಗೆ ಫುಲ್‌ ಪ್ಯಾಕ್‌ ಎಂಟರ್‌ಟೈನ್‌ಮೆಂಟ್‌ ನೀಡಿದ ನಮ್ಮನೆ ಯುವರಾಣಿ ತಂಡಕ್ಕೆ ನಮ್ಮ ಕಡೆಯಿಂದ ಕಂಗ್ರಾಟ್ಸ್‌... ಮುಂದೆ ಹೀಗೇ ಒಳ್ಳೆ ರೀತಿಯಲ್ಲಿ ಕಥೆ ಸಾಗಲಿ ಎಂಬುವುದು ಎಲ್ಲರ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News