'ಮರ್ಫಿ' ಸಿನಿಮಾದ ಮನಮೋಹಕ ಹಾಡು ಬಿಡುಗಡೆ

Murphy movie song released: ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಗೀತೆಗೆ ಧನಂಜಯ್ ರಂಜನ್ ಪದ ಗೀಚಿದ್ದು, ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ.

Written by - YASHODHA POOJARI | Last Updated : Aug 8, 2024, 09:06 AM IST
  • 'ಮರ್ಫಿ' ಸಿನಿಮಾದ ಹಾಡು ಬಿಡುಗಡೆ
  • ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಗೀತೆ
  • ನಟ ಪ್ರಭು ಮುಂಡ್ಕೂರ್ ನಟನೆಯ ಸಿನಿಮಾ
'ಮರ್ಫಿ' ಸಿನಿಮಾದ ಮನಮೋಹಕ ಹಾಡು ಬಿಡುಗಡೆ  title=

Murphy movie song: ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಪ್ರಭು ಮುಂಡ್ಕೂರ್ ನಟನೆಯ ಮರ್ಫಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟಂಬರ್ 27ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಪ್ರಚಾರ ಕಾರ್ಯಗಳಿಗೆ ಚಾಲನೆ ಕೊಡಲಾಗಿದೆ. ಮರ್ಫಿ ಅಂಗಳದಿಂದ ಸಮಯ ಎಂಬ ಮನಮೋಹಕ ಹಾಡು ಬಿಡುಗಡೆ ಮಾಡಲಾಗಿದೆ. 

ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಗೀತೆಗೆ ಧನಂಜಯ್ ರಂಜನ್ ಪದ ಗೀಚಿದ್ದು, ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಪ್ರಭು ಮುಂಡ್ಕೂರ್, ನಾಯಕಿಯರಾದ ರೋಶಿನಿ ಪ್ರಕಾಶ್ ಹಾಗೂ ಇಳಾ ವೀರಮಲ್ಲ ಹಾಡಿನಲ್ಲಿ ಮಿಂಚಿದ್ದಾರೆ.

BSP ವರ್ಮಾ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕೂರ್ ವರ್ಮಾ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೋಮ್ಯಾಂಟಿಕ್ ಡ್ರಾಮಾ ಎಳೆಯ ಮರ್ಫಿ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. 

ಇದನ್ನೂ ಓದಿ: ಕೊಲೆ ಕೇಸ್‌ನಲ್ಲಿ ದರ್ಶನ್ & ಗ್ಯಾಂಗ್ ಗೆ ಬೇಗನೆ ಶಿಕ್ಷೆ ಕೊಡಿಸಲು ಪೊಲೀಸರ ಮೆಗಾ ಪ್ಲಾನ್..!

ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮೆರಾ ಹಿಡಿದ್ದಾರೆ.

ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್ ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯು ಸರ್ಟಿಫಿಕೇಟ್ ಪಡೆದು ಸೆನ್ಸಾರ್ ಪಾಸಾಗಿರುವ ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಎಮೋಷನಲ್ ಅಂಶಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದೆ.

ಇದನ್ನೂ ಓದಿ: ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?

ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಮನೆಮಂದಿಯಲ್ಲಾ ಕುಳಿತು ನೋಡುವಂತಹ ಒಂದು ನೀಟಾದ ಸಿನಿಮಾ ಎನ್ನುವುದು ಚಿತ್ರತಂಡ ಅಭಿಪ್ರಾಯ. ಇನ್ನು ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಪಕ್ಕ ಸೆಪ್ಟಂಬರ್ 27ರಂದು ರಾಜ್ಯಾದ್ಯಂತ ಮರ್ಫಿ ಸಿನಿಮಾ ಬೆಳ್ಳಿಪರದೆಗೆ ಎಂಟ್ರಿ ಕೊಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News