Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್!

Mehabooba Update: ಚಂದನವನದ ನಟ ಶಶಿ ಹಾಗೂ ನಟಿ ಪಾವನ ಗೌಡ ನಟಿಸಿರುವ ಜಾತಿ-ಮತ-ಧರ್ಮ ಮೀರಿದ ಪ್ರೇಮ ಕಥೆ ಮೆಹಬೂಬ ಸಿನಿಮಾದ ರಿಲೀಸ್‌ ಡೇಟ್‌ ಪೀಕ್ಸ್‌ ಆಗಿದೆ. ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ವಿಭಿನ್ನವಾಗಿ ಅನೌನ್ಸ್‌ ಮಾಡಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 19, 2024, 09:23 PM IST
  • ನಟ ಶಶಿ ಬಿಗ್ ಬಾಸ್ ಸೀಸನ್ 06ರಲ್ಲಿ ಬಿಗ್ ಬಾಸ್ ಕಿರೀಟವನ್ನೂ ಮುಡಿಗೇರಿಸಿಕೊಂಡು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
  • ಮೆಹಬೂಬ ಸಿನಿಮಾ ಇದು ಸರ್ವ ಧರ್ಮ ಸಮಾನತೆ ಸಂದೇಶವನ್ನು ಹೊತ್ತು ತರುತ್ತಿರುವ ಕಥೆಯಿದಾಗಿದ್ದು, ಕೇರಳದಲ್ಲಿ ನಡೆದ ಸತ್ಯಘಟನೆಯನ್ನು ಆಧಾರಿಸಿ ಚಿತ್ರದ ಕಥೆ ಹೆಣೆದಿದ್ದಾರೆ.
  • ಈ ಚಿತ್ರದ ರಿಲೀಸ್‌ ಡೇಟ್‌ನ್ನು ವಿಧಾನಸೌಧ ,ನ್ಯಾಯಾಲಯ,ಪೊಲೀಸ್ ಠಾಣೆ, ಮಸೀದಿ,ಮಾರ್ಕೆಟ್ ,ಮಂದಿರದ ಎದುರು ವಿಭಿನ್ನವಾಗಿ ರಿವೀಲ್‌ ಮಾಡಿದ್ದಾರೆ.
Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್! title=

Mehabooba Release Date: ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಹಾಗೂ ಮಾಡ್ರನ್ ರೈತ ಎಂದೇ ಖ್ಯಾತಿ ಪಡೆದಿರುವ ಶಶಿ ಹಾಗೂ ಪಾವನ ಗೌಡ ಅಭಿನಯಿಸಿರುವ ಮೆಹಬೂಬ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಈ ಹಿಂದೆ ನಟ ಶಶಿ ಬಿಗ್ ಬಾಸ್ ಸೀಸನ್ 06ರಲ್ಲಿ  ಬಿಗ್ ಬಾಸ್ ಕಿರೀಟವನ್ನೂ ಮುಡಿಗೇರಿಸಿಕೊಂಡು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಇದೀಗ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿವುದರ ಮೂಲಕ ಮತ್ತೆ ಪ್ರೇಕ್ಷಕರ ಹೃದಯ ಗೆಲ್ಲಲ್ಲು ಸಜ್ಜಾಗಿದ್ದಾರೆ.

ಸದ್ಯ ನಟ ಶಶಿ ಮಾಡ್ರನ್ ರೈತನಿಂದ ಇದೀಗ ನಾಯಕನಾಗಿ ಬಡ್ತಿ ಪಡೆದಿದ್ದು, ಮೆಹಬೂಬಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಮೆಹಬೂಬ ಸಿನಿಮಾ ಇದು ಸರ್ವ ಧರ್ಮ ಸಮಾನತೆ ಸಂದೇಶವನ್ನು ಹೊತ್ತು ತರುತ್ತಿರುವ ಕಥೆಯಿದಾಗಿದ್ದು, ಕೇರಳದಲ್ಲಿ ನಡೆದ ಸತ್ಯಘಟನೆಯನ್ನು ಆಧಾರಿಸಿ ಚಿತ್ರದ ಕಥೆ ಹೆಣೆದಿದ್ದಾರೆ. ಇನ್ನೂ ಈ ಚಿತ್ರದ ನಾಯಕಿ ನಟಿ ಪಾವನಾ ಗೌಡ ಎಂಥದ್ದೇ ಪಾತ್ರವನ್ನು ನುಂಗಿಕೊಂಡಂತೆ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: 

ನಟ ಶಶಿ ಹಾಗೂ ನಟಿ ಪಾವನ ಗೌಡ ಅಭಿನಯದ ವಿಚಾರದಲ್ಲಿ ಇಬ್ಬರ ನಡುವೆ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಚಿತ್ರದ ನಾಯಕ ಶಶಿ ಸಿನಿಮಾದ ನಾಯಕ ಮಾತ್ರವಲ್ಲದೇ ನಿರ್ಮಾಪಕರು ಕೂಡ ಆಗಿದ್ದಾರೆ. ಇನ್ನೇನು ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಈ ಸಿನಿಮಾ ಇದೇ ಮಾರ್ಚ್ 15ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ರಿಲೀಸ್‌ ಡೇಟ್‌ನ್ನು ವಿಧಾನಸೌಧ ,ನ್ಯಾಯಾಲಯ,ಪೊಲೀಸ್ ಠಾಣೆ, ಮಸೀದಿ,ಮಾರ್ಕೆಟ್ ,ಮಂದಿರದ ಎದುರು ವಿಭಿನ್ನವಾಗಿ ರಿವೀಲ್‌ ಮಾಡಿದ್ದಾರೆ.

ಹೌದು.. ಮೆಹಬೂಬ ಸಿನಿಮಾದ ನಟ ಶಶಿ ಹಾಗೂ ನಾಯಕಿ ಪಾವನ ಗೌಡ ಮುಸ್ಲಿಂ ಹುಡುಗಿಯಂತೆ ವೇಷ ತೊಟ್ಟು,ಕೈಯಲ್ಲಿ ರಿಲೀಸ್ ಡೇಟ್ ಬೋರ್ಡ್ ಇಟ್ಟುಕೊಂಡು ಸರ್ವ ಧರ್ಮ ಸಮಾನತೆಯನ್ನ ಸಾರೋ ವಿಚಾರ ಹೇಳುತ್ತಾ ಚಿತ್ರದ ಬಿಡುಗಡೆಯ ಡೇಟ್‌ ಅನ್ನು ಅನೌನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಸದ್ಯ ಕಾರ್ತಿಕ್ ಗೌಡ ಮತ್ತು ನಜ್ರೀಯಾ ಬಾನುವಿನ‌ ಲವ್‌ ಸ್ಟೋರಿ ಬೆಳ್ಳಿ ತೆರೆಗೆ ಅಪ್ಪಳಿಸುವುದು ಬಾಕಿಯಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News