Max One Line Story: 2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಭಿನಯ ಚಕ್ರವತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಗ್ರಸ್ಥಾನದಲ್ಲಿ ನಿಲ್ಲುತ್ತಿದ್ದು, ಇದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಈ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿ ನಿರ್ಮಾಣವಾಗಲಿದೆ. ಮಹಾಬಲಿಪುರಂನಲ್ಲಿ ಸೆಟ್‌ಗಳನ್ನು ನಿರ್ಮಿಸಿ ಭರದಿಂದ ಚಿತ್ರೀಕರಣ ನಡೆಸಲಾಗುತ್ತಿದಗ್ದು, ಮಾರ್ಚ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಮ್ಯಾಕ್ಸ್‌ನಲ್ಲಿ ಕಿಚ್ಚ ಸುದೀಪ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸದ್ಯ 'ಮ್ಯಾಕ್ಸ್' ಪ್ರಮೋಷನ್ ಹಾಗೂ ರಿಲೀಸ್‌ಗೆ ಕೆಆರ್‌ಜಿ ಸಂಸ್ಥೆ ಕೈಜೋಡಿಸಿದ್ದು, ಬುಕ್‌ಮೈ ಶೋ ಆಪ್‌ನಲ್ಲಿ ಚಿತ್ರದ ಪ್ರೊಫೈಲ್ ಕ್ರಿಯೇಟ್ ಆಗಿದ್ದು ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿದೆ. ಪ್ರೊಫೈಲ್ ಲೈಕ್ ಮಾಡುವ ಮೂಲಕ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸುತ್ತಿದ್ದು, ಇದೆಲ್ಲದರ ನಡುವೆ ಚಿತ್ರದ ಒನ್‌ಲೈನ್ ಸ್ಟೋರಿ ಕೂಡ ರಿವೀಲ್ ಆಗಿದೆ. 'ಮ್ಯಾಕ್ಸ್' ಬುಕ್‌ಮೈಶೋ ಪ್ರೊಫೈಲ್‌ನಲ್ಲಿ ಕಥೆಯ ಸಣ್ಣ ಸುಳಿವು ಬಿಟ್ಟುಕೊಡಲಾಗಿದೆ.
ಇದನ್ನೂ ಓದಿ: Yash: I hate my birthday.. ಅಭಿಮಾನಿಗಳ ಸಾವಿನ ಬಗ್ಗೆ ಯಶ್ ಸೆನ್ಸೇಷನಲ್ ಕಾಮೆಂಟ್!
ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚ ಸುದೀಪ್ ಅರ್ಜುನ್ ಮಹಾಕ್ಷಯ್ ಎಂಬ ಖಡಕ್ ಪೊಲೀಸ್ ಆಫೀಸರ್ ಆಗಿದ್ದು, ಎರಡು ತಿಂಗಳು ಅಮಾನತಿನಲ್ಲಿದ್ದ ಈತ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಈ ಹಾದಿಯಲ್ಲಿ ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸಿದ ನಂತರ, ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ 'ಮ್ಯಾಕ್ಸ್' ಸಿನಿಮಾ ಕಥೆ ಎನ್ನುವಂತೆ ಹೇಳಲಾಗಿದೆ.
ಮ್ಯಾಕ್ಸ್ ಸಿನಿಮಾ ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಇನ್ನು ಸುದೀಪ್ ಕಾಪ್ ಆಗಿ ನಟಿಸ್ತಾರೆ ಎಂದಾಗ ಕುತೂಹಲ ಮೂಡಿತ್ತು. ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಟೀಸರ್ ಸೂಪರ್ ಹಿಟ್ ಆಗಿ, ಇದೀಗ ಒನ್‌ಲೈನ್ ಸ್ಟೋರಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕಿಚ್ಚನ ಖಡಕ್ ಲುಕ್ಕು, ಬಾಡಿ ಲಾಂಗ್ವೇಜ್ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಸದ್ಯ ಅರ್ಜುನ್ ಮಹಾಕ್ಷಯ್ ಕಥೆ ಕೇಳಿ ಥ್ರಿಲ್ಲಾಗಿ, ಫಸ್ಟ್ ಡೇ ಫಸ್ಟ್ ಶೋ ಚಿತ್ರ ನೋಡುವುದು ಫಿಕ್ಸ್ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಸೆಟ್ಟೇರಿತು S/O ಮುತ್ತಣ್ಣ.. ಇದು ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಹೊಸ ಸಿನಿಮಾ!
ಕೆಲವರು 'ಮ್ಯಾಕ್ಸ್' ಚಿತ್ರದ ಒನ್‌ಲೈನ್ ಸ್ಟೋರಿ ಕೇಳಿದವರು ಬೇರೆ ಭಾಷೆಗಳ ಸಿನಿಮಾಗಳ ಜೊತೆ ಹೋಲಿಸಿ ನೋಡುತ್ತಿದರೇ, ಇತ್ತ ಕಿಚ್ಚನ ಫ್ಯಾನ್ಸ್ ಮಾತ್ರ ಅರ್ಜುನ್ ಮಹಾಕ್ಷಯ್ ಆರ್ಭಟ ನೋಡಲು ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ಹೆಸರು ಅರ್ಜುನ್ ಮಹಾಕ್ಷಯ್. ಎಲ್ಲರೂ ಮಹಾಕ್ಷಯ್‌ನ ಶಾರ್ಟ್ ಆಗಿ 'ಮ್ಯಾಕ್ಸ್' ಕರೆಯುತ್ತಾರೆ ಅನ್ನೋದು ಗೊತ್ತಾಗ್ತಿದೆ. ಕೇವಲ ಎರಡು ದಿನಗಳಲ್ಲಿ ನಡೆಯುವ ಕಥೆ 'ಮ್ಯಾಕ್ಸ್' ಎನ್ನಲಾಗ್ತಿದೆ. ಬಹಳ ರೋಚಕವಾಗಿ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.