Man Vs Wild: ಪ್ರಧಾನಿ ಮೋದಿ ಹಾದಿಯಲ್ಲಿ ರಜನಿ!

ದಕ್ಷಿಣದ ಖ್ಯಾತ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಬೆಯರ್ ಗ್ರಿಲ್ಸ್ ಕರ್ನಾಟಕದ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ತಲುಪಿದ್ದು, ಅಲ್ಲಿ Man Vs Wild ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಾರೆ. ಇಲ್ಲಿ ಅವರ ಒಂದು ದಿನದ ಕಾರ್ಯಸೂಚಿ 6 ಗಂಟೆಗಳು ಇರಲಿದೆ.

Last Updated : Jan 28, 2020, 06:14 PM IST
Man Vs Wild: ಪ್ರಧಾನಿ ಮೋದಿ ಹಾದಿಯಲ್ಲಿ ರಜನಿ! title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಇದೀಗ ಮ್ಯಾನ್ ವರ್ಸೆಸ್ ವೈಲ್ಡ್ ನ ಚಿತ್ರೀಕರಣಕ್ಕಾಗಿ ಬೆಯರ್ ಗ್ರಿಲ್ಸ್ ದಕ್ಷಿಣದ ಖ್ಯಾತ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಜೊತೆಗೂಡಿ ಕರ್ನಾಟಕದ ಬಂಡೀಪುರಕ್ಕೆ ತಲುಪಿದ್ದಾರೆ. ಅವರ ಈ ಎಪಿಸೋಡ್ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ರಜಿನಿ ಗ್ರಿಲ್ಸ್ ಜೊತೆ ಅಡ್ವೆಂಚರ್ ನಡೆಸಲಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರ ಜೊತೆಗೆ ಬೆಯರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಈ ಎಪಿಸೋಡ್ ಪ್ರಪಂಚದ 180 ರಾಷ್ಟ್ರಗಳಲ್ಲಿ ಪ್ರಸಾರಿತಗೊಂಡಿತ್ತು. ಈ ಸಂಚಿಕೆಯಲ್ಲಿ ರಜನಿ ಕೂಡ ಅಭಯಾರಣ್ಯದಲ್ಲಿ ಸಾಹಸಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಸಂಚಿಕೆಯಲ್ಲಿ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಬೆಯರ್ ಅವರಿಗೆ ಎಚ್ಚರಿಕೆಯ ಸಲಹೆ ನೀಡುತ್ತಿರುವುದನ್ನು ತೋರಿಸಲಾಗಿತ್ತು. ಈ ಸಂಚಿಕೆಯಲ್ಲೂ ಸಹ ರಜಿನಿಕಾಂತ್ ಇದೇ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಬೆಯರ್ ಗ್ರಿಲ್ಸ್ ಕರ್ನಾಟಕದ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ತಲುಪಿದ್ದು, ಅಲ್ಲಿ Man Vs Wild ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಾರೆ. ಇಲ್ಲಿ ಅವರ ಒಂದು ದಿನದ ಕಾರ್ಯಸೂಚಿ 6 ಗಂಟೆಗಳು ಇರಲಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಸಾಮಾಜಿಕ್ ಮಾಧ್ಯಮಗಳಲ್ಲಿ #RAJINIKANTH ಟ್ರೆಂಡ್ ಸೃಷ್ಟಿಸಿದೆ. ರಜಿನಿ ಕುರಿತಾದ ಈ ಸುದ್ದಿಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಜಿನಿ ಅಭಿಮಾನಿಯೊಬ್ಬರು ಪ್ರಧಾನಿ ಮೋದಿ ಬಳಿಕ ರಜಿನಿ ಈ ಸಂಚಿಕೆಯ ಭಾಗವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಅಭಿಮಾನಿ ಥಲೈವಾ ಈ ದೇಶಕ್ಕಾಗಿ ಎಷ್ಟೊಂದು ಇಂಪಾರ್ಟೆಂಟ್ ಆಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ ಅಷ್ಟೇ ಅಲ್ಲ ತಾವು ಈ ಷೋನಲ್ಲಿ ರಜಿನಿ ಅವರನ್ನು ನೋಡಲು ತುಂಬಾ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಗವಹಿಸಿದ್ದ ಸಂಚಿಕೆ ಕುರಿತು ಹೇಳುವುದಾದರೆ, ಈ ಸಂಚಿಕೆಯಲ್ಲಿ ಹುಲಿ ಮಾಡುವ ಸಂಭವನೀಯ ಹಲ್ಲೆಯಿಂದ ಪಾರಾಗಲು ಈಟಿ ರೂಪದ ಶಸ್ತ್ರವೊಂದನ್ನು ನೀಡುತ್ತಾರೆ. ಆದರೆ, ಇದಕ್ಕೆ ನಯವಾಗಿ ಪ್ರತಿಕ್ರಿಯಿಸಿರುವ ಮೋದಿ, ಯಾರೊಬ್ಬರ ಪ್ರಾಣ ಹೀರಲು ತಮ್ಮ ಮೇಲಿರುವ ಸಂಸ್ಕಾರ ತಮ್ಮನ್ನು ಅನುಮತಿಸುವುದಿಲ್ಲ. ಆದರೂ ಸಹಿತ ನಿಮ್ಮ ಒತ್ತಾಯಕ್ಕೆ ಅನ್ನು ಈ ಈಟಿಯನ್ನು ನನ್ನ ಕೈಯಲ್ಲಿ ಹಿಡಿದುಕೊಳ್ಳುವೆ ಎಂದು ಹೇಳುತ್ತಾರೆ. ಈ ಸಂಚಿಕೆಯ ಚಿತ್ರೀಕರಣದ ವೇಳೆ ಬೆಯರ್, ಪ್ರಧಾನಿ ಮೋದಿ ಅವರಿಗೆ ಭಾರತದಲ್ಲಿ ನಡೆಸಲಾಗುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಕುರಿತು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ್ದ ಪ್ರಧಾನಿ ಮೋದಿ, ಯಾವುದೇ ಹೊರದೇಶದ ವ್ಯಕ್ತಿ ನನ್ನ ಭಾರತ ದೇಶವನ್ನು ಮಾಡಲು ಸಾಧ್ಯವಿಲ್ಲ. ಈ ದೇಶದ ಜನರೇ ಭಾರತವನ್ನು ಸ್ವಚ್ಛಗೊಳಿಸಬೇಕು. ಖಾಸಗಿ ಸ್ವಚ್ಚತೆ ಭಾರತೀಯರ ಸಂಸ್ಕೃತಿಯಾಗಿದೆ. ಆದರೆ, ನಾವು ಸಾಮಾಜಿಕ ಸ್ವಚ್ಚತೆಯ ಮೇಲೆ ಗಮನಹರಿಸುವ ಅಗತ್ಯತೆ ಇದೆ ಎಂದಿದ್ದರು. ಮಹಾತ್ಮಾ ಗಾಂಧಿ ಅವರು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದ ಪ್ರಧಾನಿ, ಇಂದು ಗಾಂಧೀಜಿ ಅವರು ಆರಂಭಿಸಿದ್ದ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಭಾರತ ಸ್ವಚ್ಛವಾಗಲಿದೆ ಎಂದಿದ್ದರು.

Trending News