Ramesh Babu:ಟಾಲಿವುಡ್ ನಟ ಮಹೇಶ್ ಬಾಬು ಸಹೋದರ ರಮೇಶ್ ಬಾಬು ವಿಧಿವಶ

Ramesh Babu passes away: ಮಹೇಶ್ ಬಾಬು ಅವರ ಹಿರಿಯ ಸಹೋದರ ರಮೇಶ್ ಬಾಬು ವಿಧಿವಶರಾಗಿದ್ದಾರೆ.  ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ಅಭಿಮಾನಿಗಳಿಗೆ ಘಟ್ಟಮನೇನಿ ಕುಟುಂಬವು ವಿನಂತಿಸಿದೆ.

Edited by - Chetana Devarmani | Last Updated : Jan 9, 2022, 09:51 AM IST
  • ನಟ-ನಿರ್ಮಾಪಕ ರಮೇಶ್ ಬಾಬು ವಿಧಿವಶ
  • ಮಹೇಶ್ ಬಾಬು ಅವರ ಹಿರಿಯ ಸಹೋದರ
  • ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಸಂತಾಪ
Ramesh Babu:ಟಾಲಿವುಡ್ ನಟ ಮಹೇಶ್ ಬಾಬು ಸಹೋದರ ರಮೇಶ್ ಬಾಬು ವಿಧಿವಶ  title=
ರಮೇಶ್ ಬಾಬು

ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಹಿರಿಯ ಸಹೋದರ ರಮೇಶ್ ಬಾಬು (Ramesh Babu passes away) ವಿಧಿವಶರಾಗಿದ್ದಾರೆ. ನಟ-ನಿರ್ಮಾಪಕರಾಗಿದ್ದ ರಮೇಶ್ ಬಾಬು (56) ಶನಿವಾರ (ಜ.08) ರಂದು ಕೊನೆಯುಸಿರೆಳೆದರು. 

ವರದಿಗಳ  ಪ್ರಕಾರ ಅವರು ಲಿವರ್ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರ ನಿಧನದ ಸುದ್ದಿಯನ್ನು ಹಿರಿಯ ಚಲನಚಿತ್ರ ನಿರ್ಮಾಪಕ ಬಿ.ಎ.ರಾಜು ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ. 

"ನಮ್ಮ ಪ್ರೀತಿಯ ರಮೇಶ್ ಬಾಬು (Ramesh Babu) ಅವರ ಅಗಲಿಕೆಯನ್ನು ನಾವು ತೀವ್ರ ದುಃಖದಿಂದ ಘೋಷಿಸುತ್ತೇವೆ. ಅವರು ನಮ್ಮ ಹೃದಯದಲ್ಲಿ ಎಂದೆಂದಿಗೂ ಬದುಕುತ್ತಾರೆ. ನಮ್ಮ ಎಲ್ಲಾ ಹಿತೈಷಿಗಳು COVID ಮಾನದಂಡಗಳಿಗೆ ಬದ್ಧವಾಗಿರಲು ಮತ್ತು ಅಂತ್ಯಕ್ರಿಯೆಯ ಸ್ಥಳದಲ್ಲಿ ಸೇರುವುದನ್ನು ತಪ್ಪಿಸುವಂತೆ ನಾವು ವಿನಂತಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

 

 

ರಮೇಶ್ ಬಾಬು ಅವರ ನಿಧನಕ್ಕೆ ಹಿರಿಯ ನಟ ಚಿರಂಜೀವಿ ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ, "ರಮೇಶ್ ಬಾಬು ಅವರ ನಿಧನದಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ದೇವರು ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ" ಎಂದಿದ್ದಾರೆ.

ಸಿನಿರಂಗದ ನಟ, ನಟಿಯರು ಸೇರಿದಂತೆ ಗಣ್ಯರು ಹಾಗೂ ಅಭಿಮಾನಿಗಳು ರಮೇಶ್ ಬಾಬು ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. 

 

 

ಇದನ್ನೂ ಓದಿ: ಶೂಟಿಂಗ್ ಕಥೆ:'RRR' ಚಿತ್ರಕ್ಕಾಗಿ ಬಲ್ಗೇರಿಯಾ ಕಾಡಿನಲ್ಲಿ ಜೂ.ಎನ್‌ಟಿಆರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News