ಮಹೇಶ್‌ ಬಾಬು ಪುತ್ರಿಯ ಇನ್‌ಸ್ಟಾ ಫಾಲೋವರ್ಸ್‌ ಸಂಖ್ಯೆ ನೋಡಿದ್ರೆ ಶಾಕ್‌ ಆಗ್ತೀರಾ..!

ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಮಗಳು ಸಿತಾರಾ ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ ಆದರೂ ಸಿಕ್ಕಾಪಟ್ಟೆ ಅಭಿಮಾನಿಗಳ ಹೊಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸಿತಾರಾಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ. ಸಧ್ಯ ಒಂದು ಮಿಲಿಯನ್‌ ದಾಟಿರುವ ಸಿತಾರಾ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿರುವ ವಿಡಿಯೋ ಒಂದನ್ನು ಹೇಳಿದ್ದಾರೆ.

Written by - Krishna N K | Last Updated : Dec 2, 2022, 06:04 PM IST
  • ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಮಗಳು ಸಿತಾರಾ ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸಿತಾರಾಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ
  • ಸೋಷಿಯಲ್ ಮೀಡಿಯಾದಲ್ಲಿ ಸಿತಾರಾಗೆ ಹತ್ತು ಲಕ್ಷ ಫಾಲೋವರ್ಸ್ ಸಿಕ್ಕಿದ್ದಾರೆ
ಮಹೇಶ್‌ ಬಾಬು ಪುತ್ರಿಯ ಇನ್‌ಸ್ಟಾ ಫಾಲೋವರ್ಸ್‌ ಸಂಖ್ಯೆ ನೋಡಿದ್ರೆ ಶಾಕ್‌ ಆಗ್ತೀರಾ..! title=

Mahesh babu daughter Sitara : ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಮಗಳು ಸಿತಾರಾ ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ ಆದರೂ ಸಿಕ್ಕಾಪಟ್ಟೆ ಅಭಿಮಾನಿಗಳ ಹೊಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸಿತಾರಾಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ. ಸಧ್ಯ ಒಂದು ಮಿಲಿಯನ್‌ ದಾಟಿರುವ ಸಿತಾರಾ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿರುವ ವಿಡಿಯೋ ಒಂದನ್ನು ಹೇಳಿದ್ದಾರೆ.

ಸ್ವತಃ ಮಹೇಶ್‌ ಬಾಬು ಸಹ ಮಗಳಷ್ಟು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರಲ್ಲ. ಇನ್ನು ಸಿತಾರಾ ಅಣ್ಣ ಗೌತಮ್ ಸೋಷಿಯಲ್ ಮೀಡಿಯಾ ಪ್ರಪಂಚದಿಂದ ತುಂಬಾ ದೂರ ಉಳಿದಿದ್ದಾರೆ. ಆದ್ರೆ ಅಮ್ಮ ನಮ್ರತಾ ಶಿರೋಡ್ಕರ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರ್ತಾರೆ. ಅಮ್ಮನಂತೆ ಮಗಳು ಎನ್ನುವಂತೆ ಸಿತಾರಾ ಕೂಡಾ  ಸಾಮಾಜಿಕ ಮಾಧ್ಯಮದಲ್ಲಿ ಬ್ಯುಸಿಯಾಗಿದ್ದು, ಹೊಸ ಹೊಸ ವಿಡಿಯೋವನ್ನು ಅಪ್‌ಲೋಡ್‌ ಮಾಡುತ್ತಿರುತ್ತಾರೆ.

ಇದನ್ನೂ ಓದಿ: ತಪ್ಪನ್ನೇ ಹುಡುಕ್ತಿದ್ರೆ ಎಲ್ಲಾ ತಪ್ಪಾಗಿ ಕಾಣುತ್ತೆ : ಕಿಚ್ಚನ ಕಿಚ್ಚಿನ ಮಾತು ಯಾರಿಗೆ..?

ಸೋಷಿಯಲ್ ಮೀಡಿಯಾದಲ್ಲಿ ಸಿತಾರಾಗೆ ಹತ್ತು ಲಕ್ಷ ಫಾಲೋವರ್ಸ್ ಸಿಕ್ಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಅನುಯಾಯಿಗಳನ್ನು ತಲುಪಿದ ನಂತರ, ಸಿತಾರಾ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿ ಮಿಂಚುತ್ತಿದೆ. ಹಾಗೆ ತನ್ನ ಎಲ್ಲಾ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಕೊರೊನಾ ಸಮಯದಲ್ಲಿ ಸಿತಾರಾ ವಿವಿಧ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಆ ಸಮಯದಲ್ಲಿ ಸಕ್ರಿಯರಾಗಿದ್ದರಿಂದ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇತ್ತು. 

ಸಿತಾರಾ ಅವರು ಮಹೇಶ್ ಬಾಬು ಅವರೊಂದಿಗೆ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಮಹೇಶ್ ಬಾಬು ಫ್ಯಾನ್ಸ್‌ ಸಹ ಸಿತಾರಳನ್ನು ಫಾಲೋ ಮಾಡಲು ಪ್ರಾರಂಭಿಸಿದರು. ಟಾಲಿವುಡ್‌ ಸ್ಟಾರ್ ಕಿಡ್ಸ್‌ಗಳ ಪೈಕಿ ಸಿತಾರಾ ಈಗ ಅಪರೂಪದ ಸಾಧನೆ ಮಾಡುತ್ತಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಸಿತಾರಾ ಲಕ್ಷಾಂತರ ಫಾಲೋವರ್ಸ್‌ಗಳನ್ನು ಪಡೆದಿದ್ದು ನಿಜಕ್ಕೂ ಅಚ್ಚರಿಯೇ ಸರಿ. ಘಟ್ಟಮನೇನಿ ಇಂದಿರಾ ದೇವಿ ಮತ್ತು ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಕುರಿತು ಮಿಸ್ ಯೂ ತಾತಾ ಎಂದು ಸಿತಾರಾ ಹಾಕಿದ್ದ ಪೋಸ್ಟ್  ನೆಟ್ಟಿಗರ ಹೃದಯಕ್ಕೆ ನಾಟಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News