ಮಹೇಶ್ ಪುತ್ರಿಯ ಹೃದಯವಂತಿಕೆ..! ಬರ್ತ್‌ ಡೇಗೆ ಬಡ ಹೆಣ್ಣುಮಕ್ಕಳಿಗೆ ಸೈಕಲ್ ಗಿಫ್ಟ್‌ ನೀಡಿದ ಸಿತಾರಾ

Sitara Ghattamaneni Birthday : ಟಾಲಿವುಡ್‌ ಖ್ಯಾತ ನಟ ಮಹೇಶ್ ಬಾಬು ಪುತ್ರಿ ಸಿತಾರ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹೇಶ್ ಬಾಬು ಫೌಂಡೇಶನ್‌ ಮೂಲಕ ಕೆಲವು ಬಾಲಕಿಯರಿಗೆ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದರು.

Written by - Krishna N K | Last Updated : Jul 20, 2023, 06:48 PM IST
  • ನಟ ಮಹೇಶ್ ಬಾಬು ಪುತ್ರಿ ಸಿತಾರ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
  • ಮಹೇಶ್ ಬಾಬು ಫೌಂಡೇಶನ್‌ ಮೂಲಕ ಕೆಲವು ಬಾಲಕಿಯರಿಗೆ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದರು.
  • ಸಿತಾರಾ ಕಾರ್ಯಕ್ಕೆ ಮಹೇಶ್ ಬಾಬು ಅಭಿಮಾನಿಗಳು, ನೆಟಿಜನ್‌ಗಳು ಮತ್ತು ಸೆಲೆಬ್ರಿಟಿಗಳು ಹಾಡಿ ಹೊಗಳಿದ್ದಾರೆ.
ಮಹೇಶ್ ಪುತ್ರಿಯ ಹೃದಯವಂತಿಕೆ..! ಬರ್ತ್‌ ಡೇಗೆ ಬಡ ಹೆಣ್ಣುಮಕ್ಕಳಿಗೆ ಸೈಕಲ್ ಗಿಫ್ಟ್‌ ನೀಡಿದ ಸಿತಾರಾ title=

Mahesh babu daughter Sitara : ಇಂದು ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರ ಘಟ್ಟಮನೇನಿ ಅವರ ಹುಟ್ಟುಹಬ್ಬ. ಸಾಮಾನ್ಯವಾಗಿ ಬರ್ತ್‌ಡೇ ಆಚರಿಸಿಕೊಂಡ ಸ್ಟಾರ್‌ ನಟನ ಪುತ್ರಿ ಹೃದಯವಂತಿಕೆ ಮೆರೆದಿದ್ದಾರೆ. ಕೇಕ್‌ ಕಟಿಂಗ್‌, ಪಾರ್ಟಿ ಅಂತ ಇತರೆ ಸ್ಟಾರ್‌ ಮಕ್ಕಳ ಹಾಗೆ ಆಡಂಬರ ತೋರದೆ ಮಹೇಶ್ ಮಗಳು ಸಂಪೂರ್ಣ ಭಿನ್ನವಾಗಿ ಹುಟ್ಟು ಹಬ್ಬವನ್ನು ಸೆಲೆಬ್ರೇಟ್‌ ಮಾಡಿದರು.

ಹೌದು... ತಂದೆಯ ಹಾದಿಯಲ್ಲೇ ಸಿತಾರ ಸಾಗುತ್ತಿದ್ದಾರೆ. ಇತ್ತೀಚಿಗೆ ಆಭರಣ ಕಂಪನಿಯ ಪ್ರಚಾರಕ್ಕಾಗಿ ತಾವು ಪಡೆದಿದ್ದ ಸಂಭಾವನೆಯನ್ನು ಸಮಾಜ ಸೇವೆಗೆ ಉಪಯೋಗಿಸುವ ಮೂಲಕ ಸುದ್ದಿಯಾಗಿದ್ದರು. ಇಂದು ಬುರ್ರಿಪಾಲೆಂನಲ್ಲಿರುವ ಮಹೇಶ್ ಬಾಬು ಫೌಂಡೇಶನ್‌ನ ಕೆಲವು ಯುವತಿಯರೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಅಣ್ಣ-ತಮ್ಮ ಮುಖಾಮುಖಿ : ಕಾರ್ತಿ ಹೀರೋ ಸೂರ್ಯ ವಿಲನ್‌...!

ಬುರ್ರಿಪಾಲೆಂನಲ್ಲಿರುವ ಮಹೇಶ್ ಬಾಬು ಫೌಂಡೇಶನ್ ಯುವತಿಯರೊಂದಿಗೆ ಕೇಕ್ ಕತ್ತರಿಸಿ ಎಲ್ಲರಿಗೂ ಪ್ರೀತಿಯಿಂದ ಕೇಕ್ ತಿನ್ನಿಸಿದರು. ನಂತರ ಅವರು ಅವರೊಂದಿಗೆ ಸಂಭ್ರಮಿಸಿದರು. ಇದಲ್ಲದೆ, ತನ್ನ ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ಹುಡುಗಿಯರಿಗೆ ಸೈಕಲ್‌ಗಳನನು ಉಡುಗೊರೆಯಾಗಿ ನೀಡಿದರು.

ಸದ್ಯ ಸಿತಾರ ತಾಯಿ ನಮ್ರತಾ ಮಹೇಶ್‌ ಬಾಬು ಈ ಕುರಿತ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಜನ್ಮದಿನದ ಶುಭಾಶಯಗಳು ಸಿತಾರಾ ಅಂತ ಮಗಳಿಗೆ ಹಾರೈಸಿದ್ದಾರ. ಸಿತಾರಾ ಪಿಂಕ್ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರಾ..ರಾ..ರಕ್ಕಮ್ಮ ಜಾಕ್ಲಿನ್.. ಸೋಂಟಕ್ಕೆ ಫ್ಯಾನ್ಸ್ ಫಿದಾ;‌ ಇಲ್ಲಿವೆ ಹಾಟ್ ಫೋಟೊಸ್

ಇನ್ನು ಮಹೇಶ್ ಬಾಬು ಅಭಿಮಾನಿಗಳು, ನೆಟಿಜನ್‌ಗಳು ಮತ್ತು ಸೆಲೆಬ್ರಿಟಿಗಳು ಸಿತಾರಾ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ, ಹುಟ್ಟುಹಬ್ಬದ ಶುಭ ಕೋರಿ ಹಾರೈಸುತ್ತಿದ್ದಾರೆ. ಮಹೇಶ್ ಬಾಬು ಕೂಡ ತಮ್ಮ ಮಗಳಿಗೆ ಸೋಷಿಯಲ್‌ ಮೀಡಿಯಾದ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. 11ನೇ ವಯಸ್ಸಿಗೆ ಕಾಲಿಟ್ಟ ನನ್ನ ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪ್ರಪಂಚದಲ್ಲಿ ನೀನೇ ನನ್ನ ತಾರೆ. ನೀನು ಏನು ಬೇಕಾದರೂ ಸಾಧಿಸಬಲ್ಲೆ ಎಂದು ಸಿತಾರಾಗೆ ಮಹೇಶ್ ವಿಶ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News