ಜಾಹೀರಾತಿಗೆ ಪಡೆದಿದ್ದ ಹಣವನ್ನೆಲ್ಲ ದಾನ ಮಾಡಿದ ಮಹೇಶ್‌ ಬಾಬು ಪುತ್ರಿ..!

Sitara Ghattamaneni : ಟಾಲಿವುಡ್‌ ಸ್ಟಾರ್‌ ಮಹೇಶ್ ಬಾಬು ಅವರ ಮಗಳು ಸಿತಾರಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೂ ದೊಡ್ಡ ಮಟ್ಟದ ಕ್ರೇಜ್‌ ಹೊಂದಿದ್ದಾರೆ. ಇತ್ತೀಚಿಗೆ ಸಿತಾರಾ ಪ್ರತಿಷ್ಠಿತ ಆಭರಣ ಜಾಹೀರಾತಿನಲ್ಲಿ ನಟಿಸಿದ್ದರು. ಅಲ್ಲದೆ, ದೊಡ್ಡ ಸಂಭಾವನೆ ಪಡೆದು ಸುದ್ದಿಯಾಗಿದ್ದರು. 

Written by - Krishna N K | Last Updated : Jul 15, 2023, 08:33 PM IST
  • ಮಹೇಶ್ ಬಾಬು ಪುತ್ರಿ ಸಿತಾರಾ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಹೊಂದಿದ್ದಾರೆ.
  • ಇತ್ತೀಚಿಗೆ ಸಿತಾರಾ ಪ್ರತಿಷ್ಠಿತ ಆಭರಣ ಜಾಹೀರಾತಿಗಾಗಿ ದೊಡ್ಡ ಸಂಭಾವನೆ ಪಡೆದು ಸುದ್ದಿಯಾಗಿದ್ದರು.
  • ಇದೀಗ ಸಾಮಾಜಿಕ ಕಾರ್ಯದ ಮೂಲಕ ಸಿತಾರಾ ಘಟ್ಟಮನೇನಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
 ಜಾಹೀರಾತಿಗೆ ಪಡೆದಿದ್ದ ಹಣವನ್ನೆಲ್ಲ ದಾನ ಮಾಡಿದ ಮಹೇಶ್‌ ಬಾಬು ಪುತ್ರಿ..! title=

Sitara Mahesh babu : ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಗಳು ಸಿತಾರಾ ಘಟ್ಟಮನೇನಿ ಇದೀಗ ಸಾಮಾಜಿಕ ಕಾರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಖ್ಯಾತ ಆಭರಣ ಕಂಪನಿಯೊಂದರ ಪ್ರಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್‌ ಪುತ್ರಿ, ತಮಗೆ ಬಂದ ಸಂಭಾವನೆಯನ್ನು ಸಮಾಜ ಸೇವೆಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು.. ಇತ್ತೀಚೆಗೆ ಆಭರಣ ಕಂಪನಿಯೊಂದು ಸೀತಾರಾ ಜಾಹೀರಾತಿನ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಈ ಫೋಟೋಗಳನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ನ್ಯೂಯಾರ್ಕ್ ಟೈಮ್ ಸ್ಕ್ವೇರ್ನಲ್ಲಿ ಪ್ರದರ್ಶಿಸಲಾಯಿತು. ಇದೀಗ ಆ ಜಾಹೀರಾತು ಮಾಡಿ ದುಡಿದ ಹಣವನ್ನು ಸಿತಾರಾ ಸಮಾಜ ಸೇವೆಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಾಳಹಸ್ತಿಯಲ್ಲಿ ಆರತಿ ಮಾಡಿ ವಿವಾದಕ್ಕೆ ಸಿಲುಕಿದ ಖ್ಯಾತ ನಟ

ಈ ಕುರಿತು ನಮ್ರತಾ ಮಹೇಶ್‌ ಬಾಬು ಅವರಿಗೆ, ಸಿತಾರಾಗೆ ಎಷ್ಟು ಸಂಭಾವನೆ ಸಿಕ್ಕಿತು ? ಅದನ್ನು ನಿಮಗೆ ಕೊಟ್ಟಿದ್ದಾರೆಯೇ ? ತಂದೆಗೆ ಕೊಟ್ಟಿದ್ದೀರಾ? ಎಂಬ ಪ್ರಶ್ನೆ ಕೇಳಿದಾಗ... ದಾನಕ್ಕೆ ಕೊಡಿ ಎಂದು ಸಿತಾರಾ ಹೇಳಿರುವುದಾಗಿ ತಿಳಿಸಿದರು. ಅಲ್ಲದೆ, ಚಿತ್ರರಂಗಕ್ಕೆ ಸಿತಾರಾ ಎಂಟ್ರಿ ಕೊಡುವುದಾಗಿಯೂ ಹೇಳಿದ್ದಾರೆ.

ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್ ಸೆಂಟರ್‌ನಲ್ಲಿ ಈ ಜಾಹೀರಾತು ಫೋಟೋಗಳನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬಂತು. ಅವಳು ತನ್ನ ತಂದೆಯನ್ನು ಅಪ್ಪಿ ಜೋರಾಗಿ ಅತ್ತಳು. ಮಗ ಗೌತಮ್ ಬಗ್ಗೆ ಕೇಳಿದಾಗ ಈಗ ಗೌತಮ್‌ಗೆ 16 ವರ್ಷ. ಅವನು ಪದವಿಯನ್ನು ಮಾಡುತ್ತಿದ್ದಾನೆ. ಸಿನಿಮಾ ರಂಗಕ್ಕೆ ಬರಲು ಎಂಟು ವರ್ಷ ಬೇಕಾಗಬಹುದು ಎಂದು ಸಿತಾರಾ ತಾಯಿ ನಮ್ರತಾ ತಿಳಿಸಿದ್ದಾರೆ.

ಇದನ್ನೂ ಓದಿ:  ಅಪ್ಪನ ರಾಜಕೀಯ ಎಂಟ್ರಿ ಬೆನ್ನಲ್ಲೇ ಸಿನಿರಂಗಕ್ಕೆ ಕಾಲಿಟ್ಟ ʼಸಂಜಯ್‌ ವಿಜಯ್‌ʼ..!

ಮಹೇಶ್ ಬಾಬು ಅಭಿನಯದ ಸುಕುಮಾರ್ ನಿರ್ದೇಶನದ 'ನೇನೊಕ್ಕಡಿನೆ' ಚಿತ್ರದಲ್ಲಿ ಗೌತಮ್ ನಟಿಸಿದ್ದರು. ಮಗುವಿನ ಪಾತ್ರವನ್ನು ನಿರ್ವಹಿಸಿದ್ದರು. ಆ ಚಿತ್ರದ ನಂತರ ಗೌತಮ್‌ ಯಾವುದೇ ಸಿನಿಮಾ ಮಾಡಲಿಲ್ಲ. 'ಸರ್ಕಾರು ವಾರಿ ಪಟ' ಸಿನಿಮಾದಲ್ಲಿ 'ಪೆನ್ನಿ' ಚಿತ್ರದ ಪ್ರಚಾರ ಚಿತ್ರದಲ್ಲಿ ಸಿತಾರಾ ಕಾಣಿಸಿಕೊಂಡಿದ್ದರು.

ಇನ್ನು ಮಹೇಶ್ ಬಾಬು ಅವರ ಸಿನಿಮಾಗಳ ವಿಚಾರಕ್ಕೆ ಬರೋಣ... ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ 'ಗುಂಟೂರು ಕಾರಂ' ಸೆಟ್ಟೇರುತ್ತಿದೆ. ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಂತರ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಸಿನಿಮಾ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News