Mahesh Babu : ಬಯಲಾಯ್ತು ಮಹೇಶ್‌ ಬಾಬು ಬ್ಯೂಟಿ ಸೀಕ್ರೇಟ್‌! ಆಗಾಗ ವಿದೇಶಕ್ಕೆ ಹೋಗೋದು ಇದೇ ಕಾರಣಕ್ಕೆ?

Mahesh Babu Beauty Secret: ಸೂಪರ್‌ಸ್ಟಾರ್ ಮಹೇಶ್ ಬಾಬು 47 ವರ್ಷ ವಯಸ್ಸಿನವನಾಗಿದ್ದರೂ, ಇನ್ನೂ 30 ವರ್ಷದವರಂತೆ ಕಾಣುತ್ತಾರೆ. ಇದೀಗ ಮತ್ತೊಮ್ಮೆ ಮಹೇಶ್ ಬಾಬು ಬ್ಯೂಟಿ ಸೀಕ್ರೇಟ್‌ ವಿಚಾರ ಮುನ್ನೆಲೆಗೆ ಬಂದಿದೆ.   

Written by - Chetana Devarmani | Last Updated : Apr 16, 2023, 12:27 PM IST
  • ಮಹೇಶ್ ಬಾಬು ಬ್ಯೂಟಿ ಸೀಕ್ರೇಟ್‌ ವಿಚಾರ ಮತ್ತೆ ಮುನ್ನೆಲೆಗೆ
  • ಬಯಲಾಯ್ತು ಮಹೇಶ್‌ ಬಾಬು ಬ್ಯೂಟಿ ಸೀಕ್ರೇಟ್‌!
  • ಆಗಾಗ ವಿದೇಶಕ್ಕೆ ಹೋಗೋದು ಇದೇ ಕಾರಣಕ್ಕೆ?
Mahesh Babu : ಬಯಲಾಯ್ತು ಮಹೇಶ್‌ ಬಾಬು ಬ್ಯೂಟಿ ಸೀಕ್ರೇಟ್‌! ಆಗಾಗ ವಿದೇಶಕ್ಕೆ ಹೋಗೋದು ಇದೇ ಕಾರಣಕ್ಕೆ?  title=
Mahesh Babu

Mahesh Babu Beauty Secret: ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತೊಮ್ಮೆ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ತ್ರಿವಿಕ್ರಮ್ ಜೊತೆ ಅಯ್ಯು, ಖಲೇಜಾ ಸಿನಿಮಾ ಮಾಡಿರುವುದರಿಂದ ಈ ಸಿನಿಮಾದ ಬಗ್ಗೆ ಎಲ್ಲರಿಗೂ ನಿರೀಕ್ಷೆ  ಹೆಚ್ಚಾಗಿದೆ. ಆದರೆ ಸಿನಿಮಾದ ಶೂಟಿಂಗ್‌ಗೆ ಸ್ವಲ್ಪ ಗ್ಯಾಪ್ ಸಿಕ್ಕಿದ್ದರಿಂದ, ವಿಶ್ವ ಪರ್ಯಟನೆಯಲ್ಲಿದ್ದ ತಮ್ಮ ಕುಟುಂಬವನ್ನು ಮಹೇಶ್‌ ಬಾಬು ಸೇರಿಕೊಂಡಿದ್ದಾರೆ. 

ಮಹೇಶ್‌ ಬಾಬು ಶೆಡ್ಯೂಲ್‌ ಫ್ರೀ ಇರುತ್ತೋ ಇಲ್ಲವೋ ಎಂದು ಗೊತ್ತಿರದ ಕಾರಣ, ಅವರ ಪತ್ನಿ ನಮ್ರತಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಹುದಿನಗಳ ಹಿಂದೆ ವಿದೇಶಕ್ಕೆ ಹೋಗಿ ಅಲ್ಲಿಂದ ವಲ್ಡ್‌ ಟೂರ್‌ ಆರಂಭಿಸಿದರು. ಆದರೆ ಅಂದು ಬ್ಯುಸಿಯಾಗಿದ್ದ ಮಹೇಶ್ ಬಾಬು ಇತ್ತೀಚೆಗಷ್ಟೇ ಬಿಡುವಿನ ವೇಳೆ ವಿದೇಶಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಮಹೇಶ್ ಬಾಬು ವಿದೇಶಕ್ಕೆ ಹೋದಾಗ ಕೆಲವು ವಿಶ್ವಪ್ರಸಿದ್ಧ ವೈದ್ಯರನ್ನು ಭೇಟಿಯಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ : ಅಧ್ಯಕ್ಷ ನಟಿʼಯನ್ನು ಬುರ್ಕಾದಲ್ಲಿ ನೋಡಿ ಶಾಕ್‌ ಆದ ಪ್ಯಾನ್ಸ್‌..!

ಇದನ್ನು ಸ್ವತಃ ಮಹೇಶ್ ಬಾಬು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಾ.ಹರಿ ಕೊನಿಗ್ ಜೊತೆಗಿನ ಮಹೇಶ್ ಬಾಬು ಇತ್ತೀಚಿನ ಫೋಟೋ ವೈರಲ್ ಆಗುತ್ತಿದೆ. ಆದರೆ ಈ ವೈದ್ಯರು ಆರೋಗ್ಯ ಮತ್ತು ಸೌಂದರ್ಯ ತಜ್ಞರಾಗಿದ್ದು, ಸಮಗ್ರ ಪ್ರಕೃತಿ ಚಿಕಿತ್ಸೆ, ಮಾನಸಿಕ ಶಾಂತಿ ಮತ್ತು ಉತ್ತಮ ಆಹಾರ ಪದ್ಧತಿಗಳ ಮೂಲಕ ಆರೋಗ್ಯಕರ ಮತ್ತು ಸುಂದರವಾಗಿರುವುದು ಹೇಗೆ ಎಂದು ಸೂಚಿಸುವ ಪರಿಣಿತರು ಎಂಬುದು ಗಮನಾರ್ಹ. ಜರ್ಮನಿಯ ಡಾ.ಹರಿ ಕೊನಿಗ್ ಜೊತೆ ಮಹೇಶ್ ಬಾಬು ಇರುವ ಫೋಟೋ ನೋಡಿದವರೆಲ್ಲ ಮಹೇಶ್ ಬಾಬು ಅವರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ವಯಸ್ಸನ್ನು ಮರೆ ಮಾಡಲು ಈ ವೈದ್ಯ ಸಲಹೆಯಂತೆ ನಡೆದುಕೊಳ್ಳಬಹುದು ಎಂದು ಹೇಳುತ್ತಾರೆ.

ವಿದೇಶಕ್ಕೆ ಹೋದಾಗ ಇಂತಹ ವೈದ್ಯರೊಂದಿಗೆ ಸಮಾಲೋಚಿಸಿ, ಯಾವ ರೀತಿ ಯಂಗ್‌ ಹಾಗೂ ಎನರ್ಜೆಟಿಕ್‌ ಆಗಿ ಕಾಣುವಂತೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ ಎಂಬ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ. ವಾಸ್ತವವಾಗಿ ಮಹೇಶ್‌ ಬಾಬು ಅವರ ವಯಸ್ಸು 47 ವರ್ಷ, ಆದರೆ ತುಂಬ ಚಿಕ್ಕವರಂತೆ ಕಾಣುತ್ತಾರೆ.  ಇದೇ ಕಾರಣಕ್ಕೆ ಹಲವು ಬಾರಿ ಮಹೇಶ್‌ ಬಾಬು ಅವರ ಬ್ಯೂಟಿ ಸೀಕ್ರೇಟ್‌ ಬಗ್ಗೆ ಚರ್ಚೆಗಳು ನಡೆಯುತ್ತವೆ.

ಇದನ್ನೂ ಓದಿ : ಒಮ್ಮೆ ಅಣ್ಣ - ತಂಗಿ, ಮತ್ತೊಮ್ಮೆ ಪ್ರೇಮಿಗಳು.. ಬಾಲಿವುಡ್‌ ಜೋಡಿಗಳ ನಡುವಿನ ಸಂಬಂಧ ಬದಲಾದಾಗ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News