ಇಸ್ಪೀಟು ಆಡಿ ಸಂಕಷ್ಟಕ್ಕೆ ಸಿಲುಕಿದ ಟಾಲಿವುಡ್‌ ಸ್ಟಾರ್ಸ್:‌ ಮಹೇಶ್, ವೆಂಕಟೇಶ್ ವಿರುದ್ಧ ನೆಟ್ಟಗರ ಆಕ್ರೋಶ!

Tollywood Stars In Trouble: ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರು ಹೊಸ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುವುದರ ಜೊತೆಗೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.ಇಬ್ಬರೂ ಸ್ಟಾರ್ ನಟರು ಇಸ್ಟೀಟು ಆಡುತ್ತಿರುವ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Written by - Zee Kannada News Desk | Last Updated : Nov 6, 2023, 01:51 PM IST
  • ಸಂಕಷ್ಟದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್.
  • ಇಬ್ಬರೂ ಸ್ಟಾರ್ ನಟರು ಇಸ್ಟೀಟು ಆಡುತ್ತಿರುವ ಸೋಶಿಯಲ್ ಮೀಡಿಯಾದಲ್ಲಿ ವೈರಲ್.
  • ಇಸ್ಪೀಟ್ ಟೇಬಲ್ ಮುಂದೆ ಕುಳಿತಿರೋ ಇಬ್ಬರ ನಟರ ಫೋಟೊಗಳನ್ನು ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇಸ್ಪೀಟು ಆಡಿ ಸಂಕಷ್ಟಕ್ಕೆ ಸಿಲುಕಿದ ಟಾಲಿವುಡ್‌ ಸ್ಟಾರ್ಸ್:‌ ಮಹೇಶ್, ವೆಂಕಟೇಶ್ ವಿರುದ್ಧ ನೆಟ್ಟಗರ ಆಕ್ರೋಶ! title=

Mahesh Babu And Victory Venkatesh in Controversy: ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರು ತಾವಾಯಿತು ತಮ್ಮ ಸಿನಿಮಾ ಆಯಿತು ಎಂದು ಇರುತ್ತಿದ್ದ ಇವರು, ಹೊಸ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡು, ವಿವಾದವೊಂದರಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಟಾಲಿವುಡ್ ಸ್ಟಾರ್ ನಟರು ಇಸ್ಟೀಟು ಆಡುತ್ತಿರುವ ಫೋಟೊವನ್ನು ಸೀಕ್ರೆಟ್ ಆಗಿ ಸೆರೆ ಹಿಡಿಯಲಾಗಿದ್ದು, ಸದ್ಯ ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರು ನಟರಿಗೆ ಸಂಕಷ್ಟ ಎದುರಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಹೇಶ್ ಬಾಬು ಹಾಗೂ ವೆಂಕಟೇಶ್ ಭಾಗವಹಿಸಿದ್ದು, ಮಹೇಶ್ ಬಾಬು ಆರೇಂಜ್ ಶರ್ಟ್ ಧರಿಸಿ ಟೇಬಲ್ ಮುಂದೆ ಕುಳಿತಿದ್ದರೆ, ಇತ್ತ ವಿಕ್ಟರಿ ವೆಂಕಟೇಶ್ ಔಟ್ ಅಂಡ್ ಔಟ್ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಕಾರ್ಡ್ಸ್ ಆಡುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶಕ್ಕೆ ಒಳಗಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆ ಆರಂಭ ಆಗಿದೆ. ಇದಕ್ಕೆ ಮಹೇಶ್ ಬಾಬು ಅಭಿಮಾನಿಗಳು ಸಮಜಾಯಿಷಿ ನೀಡುವುದಕ್ಕೆ ಸಜ್ಜಾಗಿದ್ದಾರೆ.

ಇದನ್ನು ಓದಿ: ಅಧೀರನ ಸಂಭಾವನೆ ರಿವಿಲ್‌! ವಿಲನ್‌ ಪಾತ್ರದಲ್ಲಿ ಆಕ್ಟ್‌ ಮಾಡೋಕೆ ಸಂಜು ಕೇಳೋದೆಷ್ಟು ಗೊತ್ತೇ?

ಹೌದು... ತೆಲುಗಿನ ಜನಪ್ರಿಯ ಉದ್ಯಮಿಯೊಬ್ಬರ ಕ್ಲಬ್ ಹೌಸ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್  ಅತಿಥಿಗಳಾಗಿ ಭಾಗವಹಿಸಿದ್ದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿರದೆ, ಇಸ್ಪೀಟ್ ಟೇಬಲ್ ಮುಂದೆ ಕುಳಿತಿರೋ ಇಬ್ಬರ ನಟರ ಫೋಟೊಗಳನ್ನು ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ನಟರು ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಕೊಟ್ಟಂತಾಗಿದ್ದು, ಹೀಗಾಗಿ ಕಾನೂನು ಪ್ರಕಾರ ಇಬ್ಬರಿಗೂ ಶಿಕ್ಷೆ ಕೊಡಿ ಎಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ಮಹೇಶ್ ಬಾಬು ಅಭಿಮಾನಿಗಳು ತಮ್ಮ ನಟನ ಪರವಾಗಿ ನಿಂತಿದ್ದು, ತಮ್ಮ ನಟ ಇಂತಹ ಆಟಗಳನ್ನು ಆಡುವುದಿಲ್ಲ. ಮಹೇಶ್ ಬಾಬು ಕ್ಲಬ್ ಉದ್ಘಾಟನೆಗೆ ಹೋಗಿದ್ದರು ಅಷ್ಟೇ ಎಂದು ಹೇಳುತ್ತಿರುವುದರ ಜೊತೆಗೆ,  ಮಹೇಶ್ ಬಾಬು ಈ ಹಿಂದೆ ಇಂತಹ ಯಾವುದೇ ಆಟಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿರುವ ಫೋಟೊ ವೈರಲ್ ಆಗುತ್ತಿದ್ದಂತೆ ಮಹೇಶ್ ಬಾಬು ಹಾಗೂ ವೆಂಕಟೇಶ್ ವಿರುದ್ಧ ನೆಟ್ಟಿಗರು ಸಿಟ್ಟಾಗಿರೋದಂತೂ ನಿಜ. ಈ ಬಗ್ಗೆ ಇಬ್ಬರು ಸ್ಟಾರ್ ನಟರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News