Mahesh Babu: ಪತ್ನಿ ಜೊತೆ ಬಿಲ್‌ ಗೇಟ್ಸ್‌ ಭೇಟಿಯಾದ ಮಹೇಶ್‌ ಬಾಬು

Mahesh Babu meets Bill Gates: ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ನ್ಯೂಯಾರ್ಕ್‌ನಲ್ಲಿ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Jun 29, 2022, 01:17 PM IST
  • ಪತ್ನಿ ಜೊತೆ ಬಿಲ್‌ ಗೇಟ್ಸ್‌ ಭೇಟಿಯಾದ ಮಹೇಶ್‌ ಬಾಬು
  • ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್
  • ನ್ಯೂಯಾರ್ಕ್‌ನಲ್ಲಿ ಬಿಲ್ ಗೇಟ್ಸ್ ಅವರನ್ನು ಭೇಟಿಯಾದ ದಂಪತಿ
Mahesh Babu: ಪತ್ನಿ ಜೊತೆ ಬಿಲ್‌ ಗೇಟ್ಸ್‌ ಭೇಟಿಯಾದ ಮಹೇಶ್‌ ಬಾಬು  title=
ಮಹೇಶ್‌ ಬಾಬು

Mahesh Babu meets Bill Gates: ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಪತ್ನಿ ನಮ್ರತಾ ಶಿರೋಡ್ಕರ್ ಅವರೊಂದಿಗೆ ರಜೆಯನ್ನು ಎಂಜಾಯ್‌ ಮಾಡುತ್ತಿರುವ ತೆಲುಗು ನಟ ಮಹೇಶ್ ಬಾಬು ಅವರು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ. ಈ ಮಧುರ ಕ್ಷಣದ ಫೋಟೋವನ್ನು ಕ್ಲಿಕ್ಕಿಸಿದ್ದು, ತಮ್ಮ ಟ್ವಿಟರ್‌ ಖಾತೆಯಲ್ಲಿ ಮಹೇಶ್‌ ಬಾಬು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಆ್ಯಂಕರ್​ ಅನುಶ್ರೀಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ನಟ ಶಿವರಾಜ್‌ ಕುಮಾರ್‌!

ನಟ ಮಹೇಶ್ ಅವರು ಬಿಲ್‌ ಗೇಟ್ಸ್ ಅವರನ್ನು ಅತ್ಯಂತ ವಿನಮ್ರರಾಗಿರುವ 'ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು' ಎಂದು ಬಣ್ಣಿಸಿದ್ದಾರೆ. 'ನಿಜವಾಗಿಯೂ ಅವರೊಂದು ಸ್ಫೂರ್ತಿ' ಎಂದು ಟ್ವೀಟ್‌ ಮಾಡಿದ್ದಾರೆ. 

 

 

ಮೇ ತಿಂಗಳಿನಿಂದ, ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಮಕ್ಕಳೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಆರಂಭದಲ್ಲಿ, ಅವರು ಯುರೋಪಿನ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದರು ಮತ್ತು ಈಗ US ನಲ್ಲಿದ್ದಾರೆ.  

“ಮಿಸ್ಟರ್ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿ ಸಂತೋಷವಾಯಿತು. ಈ ಜಗತ್ತು ಕಂಡ ಮಹಾನ್ ದಾರ್ಶನಿಕರಲ್ಲಿ ಒಬ್ಬರು ಮತ್ತು ಅತ್ಯಂತ ವಿನಮ್ರರು! ನಿಜವಾಗಿಯೂ ಅವರೊಂದು ಸ್ಫೂರ್ತಿ! ” ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News