ʼಆದಿಪುರುಷ್‌ʼ ಬ್ಯಾನ್‌ ಆಗ್ರಹಿಸಿ AICWA ದಿಂದ ಪ್ರಧಾನಿ ಮೋದಿಗೆ ಪತ್ರ..!

Adipurush : ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದ ಸಿನಿಮಾ ʼಆದಿಪುರುಷ್‌ʼ. ರಿಲೀಸ್‌ ನಂತರವೂ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ಈ ಸಿನಿಮಾವನ್ನು ಬ್ಯಾನ್‌ ಮಾಡುವಂತೆ AICWA ಪ್ರಧಾನಿ ಮೋದಿಯವರಿಗೆ ಪತ್ರ ಬಡೆದಿದೆ.   

Written by - Savita M B | Last Updated : Jun 20, 2023, 05:15 PM IST
  • ʼಆದಿಪುರುಷ್‌ʼ ಸಿನಿಮಾ ಕುರಿತು ಕೇಳಿಬರುತ್ತಿರುವ ಟೀಕೆಗಳು ಕಡಿಮೆಯಾಗುತ್ತಿಲ್ಲ.
  • ಹಿಂದೂ ಭಾವನೆಗೆ ಈ ಸಿನಿಮಾ ಧಕ್ಕೆಯುಂಟು ಮಾಡುತ್ತಿದೆ.
  • ಆದಿಪುರುಷ್‌ ಸಿನಿಮಾ ಪ್ರದರ್ಶನವನ್ನು ನಿಷೇಧಿಸಲು ಪ್ರಧಾನಿ ಮೋದಿಗೆ ಪತ್ರ
ʼಆದಿಪುರುಷ್‌ʼ ಬ್ಯಾನ್‌ ಆಗ್ರಹಿಸಿ AICWA ದಿಂದ ಪ್ರಧಾನಿ ಮೋದಿಗೆ ಪತ್ರ..!  title=

AICWA Letter On Adipurush : ʼಆದಿಪುರುಷ್‌ʼ ಸಿನಿಮಾ ಕುರಿತು ಕೇಳಿಬರುತ್ತಿರುವ ಟೀಕೆಗಳು ಕಡಿಮೆಯಾಗುತ್ತಿಲ್ಲ. ಹಿಂದೂ ಭಾವನೆಗೆ ಈ ಸಿನಿಮಾ ಧಕ್ಕೆಯುಂಟು ಮಾಡುತ್ತಿದೆ. ಎಂದು ಹಲವೆಡೆ ಪ್ರತಿಭಟನೆಗಳು ಹಾಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಸಿನಿಮಾದಲ್ಲಿನ ಸಂಭಾಷಣೆ ಹಾಗೂ ಪಾತ್ರಗಳು ಹಿಂದೂ ಸಂಸ್ಕೃತಿಗೆ ಅಪಮಾನ ಮಾಡುತ್ತಿದೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. 

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಆದಿಪುರುಷ್‌ ಸಿನಿಮಾ ಸಖತ್‌ ಟ್ರೋಲ್‌ ಆಗುತ್ತಿದೆ. ರಾವಣನ ವೇಷ ಭೂಷಣ, ಹನುಮಥನ ಡೈಲಾಗ್ಸ್‌ ಸೇರಿದಂತೆ ಹಲವಾರು ವಿಷಯಗಳಿಗಾಗಿ ಸಿನಿಮಾ ಟ್ರೋಲ್‌ ಆಗುತ್ತಿದೆ. ಸಿನಿಮಾ ತೆರೆಗೆ ಬಂದಾಗಿನಿಂದಲೂ ಇದರ ವಿರುದ್ಧ ಟೀಕೆಗಳು ಹೆಚ್ಚಾಗುತ್ತವೆ. 

ಇದೀಗ ಆದಿಪುರುಷ್‌ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಆಲ್‌ ಇಂಡಿಯಾ ಸಿನಿ ಅಸೋಸಿಯೇಷನ್‌ (AICWA) ಪ್ರಧಾನಿ ಮೋದಿಗೆ ಪತ್ರಬರೆದಿದೆ. ಅಲ್ಲದೇ ಈ ಸಿನಿಮಾ ವಿರುದ್ಧ ಎಫ್‌ಐಆರ್‌ ದಾಖಲಾಗಬೇಕು ಎಂದು ಒತ್ತಡ ಹೇರಿದೆ. ಹಾಗದರೇ AICWA ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಇರುವುದಾದರೂ ಏನು..? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ ..

ಇದನ್ನೂ ಓದಿ-Satish Neenasam: ಸಪ್ತ ಸಾಗರದಾಚೆಗಿನ ದುಬೈಯಲ್ಲಿ ನೀನಾಸಂ ಸತೀಶ್ ಬರ್ತ್ ಡೇ ಸೆಲೆಬ್ರೇಷನ್..!

ಸೂಪರ್‌ ಸ್ಟಾರ್‌ ಪ್ರಭಾಸ್‌ ಸಿನಿಮಾ ಆದಿಪುರುಷ್‌ ಸಾಕಷ್ಟು ವಿವಾದಗಳ ಹೊರೆಯನ್ನೇ ಹೊತ್ತಿದೆ. ಇದೀಗ ಆಲ್‌ ಇಂಡಿಯಾ ಸಿನಿ ಅಸೋಸಿಯೇಷನ್‌ ಈ ಸಿನಿಮಾವನ್ನು ನೀಷೇಧಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವ ಬರೆದಿದೆ. ಈ ಚಿತ್ರವನ್ನು ಓಟಿಟಿ ಹಾಗೂ ಥಿಯೇಟರ್‌ ಎಲ್ಲ ವೇದಿಕೆಗಳಲ್ಲೂ ಬ್ಯಾನ್‌ ಮಾಡುವಂತೆ ಮನವಿ ಸಲ್ಲಿಸಿದೆ. 

ಈ ಆದಿಪುರುಷ್‌ ಸಿನಿಮಾದ ಪಾತ್ರಗಳು ಹಾಗೂ ಡೈಲಾಗ್‌ಗಳು ಶ್ರೀರಾಮ ಹಾಗೂ ಹನುಮಂತನಿಗೆ ಅಗೌರವವನ್ನು ತಂದಿಡುತ್ತಿವೆ. ಈ ಸಿನಿಮಾ ಸನಾತನ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುತ್ತಿವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಬರೆಯಲಾಗಿದೆ. 

ಇದನ್ನೂ ಓದಿ-"ದೇವರು ಟೈಮ್‌ ತಗೊಂಡು ಇವರನ್ನ ಮಾಡಿದ್ದಾನೆ" ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!

ಶ್ರೀ ರಾಮ ಪ್ರತಿ ಭಾರತೀಯನಿಗೂ ದೇವರು. ಇಲ್ಲಿ ಯಾವ ಧಾರ್ಮಿಕ ಭಾವನೆಯಿಂದ ಬಂದಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಹಾಗಿದದರೂ ಈ ಸಿನಿಮಾದಲ್ಲಿ ಶ್ರೀರಾಮ ಹಾಗೂ ರಾವಣನ ಪಾತ್ರಗಳು ವಿಡಿಯೋ ಗೇಮ್‌ನಂತೆ ಇವೆ. ಅಲ್ಲದೇ ಸಂಭಾಷಣೆಗಳು ಭಾರತೀಯರಿಗೆ ನೋವುಂಟು ಮಾಡಿವೆ. ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಅಷ್ಟೇ ಅಲ್ಲ ಈ ಸಂಭಾಷಣೆಯನ್ನು ಬರೆದ ಲೇಖಕ ಮನೋಜ್‌ ಮುಂತಶೀರ್‌ ಹಾಗೂ ನಿರ್ದೇಶಕ ಓಂ ರಾವುತ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡುವಂತೆ ತಿಳಿಸಲಾಗಿದೆ. ಹೀಗಾಗಿ ಚಿತ್ರತಂಡ ಗಂಭೀರ ಸಮಸ್ಯೆಗೆ ಒಳಗಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News