'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬಂದ ಖ್ಯಾತ ನಟಿ... ಆ ಜಾಗಕ್ಕೆ ಈ ಬ್ಯೂಟಿ ಎಂಟ್ರಿ !!

Lakshmi Nivasa Kannada Serial : 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ದಿವ್ಯಶ್ರೀ ಇದೀಗ ತಂಡದಿಂದ ಹೊರಬಂದಿದ್ದಾರೆ.   

Written by - Chetana Devarmani | Last Updated : Mar 20, 2024, 12:58 PM IST
    • 'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಈ ನಟಿ ಔಟ್! ‌
    • 'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಿಂಚನಾ ಪಾತ್ರ
    • 'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬಂದ ನಟಿ
'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬಂದ ಖ್ಯಾತ ನಟಿ... ಆ ಜಾಗಕ್ಕೆ ಈ ಬ್ಯೂಟಿ ಎಂಟ್ರಿ !! title=

Lakshmi Nivasa Kannada Serial : ಜನಪ್ರಿಯ ಕನ್ನಡ ಧಾರಾವಾಹಿ 'ಲಕ್ಷ್ಮಿ ನಿವಾಸ' ನೋಡುಗರ ಮನಗೆಲ್ಲುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್‌ ಕೌಟುಂಬಿಕ ಕಥಾಹಂದರವನ್ನೊಳಗೊಂಡಿದೆ. ಈ ಧಾರಾವಾಹಿಯಿಂದ ಇದೀಗ ಓರ್ವ ನಟಿ ಹೊರಬಂದಿದ್ದಾರೆ. ಅವರ ಜಾಗಕ್ಕೆ ಬೇರೊಬ್ಬ ನಟಿ ಬಂದಿದ್ದಾರೆ.  

'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ದಿವ್ಯಶ್ರೀ ಇದೀಗ ತಂಡದಿಂದ ಹೊರಬಂದಿದ್ದಾರೆ. ಲಕ್ಷ್ಮಿ ನಿವಾಸದಿಂದ ದಿವ್ಯಶ್ರೀ ಹೊರ ಬಂದಿರುವುದು ಸೀರಿಯಲ್‌ ಅಭಿಮಾನಿಗಗಳಲ್ಲಿ ಬೇಸರ ತಂದಿದೆ. 

ಇದನ್ನೂ ಓದಿ: Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್

ದಿವ್ಯಶ್ರೀ ಅವರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್‌ ಬಂದಿರುವ ಕಾರಣ ಲಕ್ಷ್ಮಿ ನಿವಾಸವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಹೊಸ ಸೀರಿಯಲ್ 'ಚುಕ್ಕಿ ತಾರೆ' ಯಲ್ಲಿ ದಿವ್ಯಶ್ರೀ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಇದೇ ಕಾರಣಕ್ಕೆ ಅವರು ಸಿಂಚನಾ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.

ನಟಿ ರೂಪಿಕಾ ʻಲಕ್ಷ್ಮಿ ನಿವಾಸʼದಲ್ಲಿ ಸಿಂಚನಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ರೂಪಿಕಾ ಅವರ ಪ್ರವೇಶವು ವೀಕ್ಷಕರಲ್ಲಿ ನಿರೀಕ್ಷೆ ಮತ್ತು ಉತ್ಸಾಹವನ್ನು ತಂದಿದೆ. ಬಹುಮುಖ ಪ್ರತಿಭೆ ಮತ್ತು ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರೂಪಿಕಾ, ಸಿಂಚನಾ ಪಾತ್ರಕ್ಕೆ ಹೊಸ ಜೀವ ತುಂಬಲಿದ್ದಾರೆ. 

ಲಕ್ಷ್ಮಿ ನಿವಾಸ ಧಾರಾವಾಹಿಗೆ ಅವರ ಸೇರ್ಪಡೆಯು ಹೊಸ ಭರವಸೆ ಮೂಡಿಸಿದೆ. ದಿವ್ಯಶ್ರೀ ಅವರ ನಿರ್ಗಮನ ಮತ್ತು ರೂಪಿಕಾ ಅವರ ಪ್ರವೇಶದೊಂದಿಗೆ, ಲಕ್ಷ್ಮಿ ನಿವಾಸ ಧಾರಾವಾಹಿ ರೋಚಕ ಹೊಸ ಅಧ್ಯಾಯಕ್ಕೆ ಸಿದ್ಧವಾಗಿದೆ.  

ಇದನ್ನೂ ಓದಿ: ಒಂಟಿತನ, ಅಬಾರ್ಷನ್.. ಸಾಯಲು ಮಾತ್ರೆ ನುಂಗಿದ್ದೆ, ಆದ್ರೂ ಮಗಳು ಬದುಕಿ ಬಿಟ್ಟಳು!! ಕಾಮಿಡಿ ಕಿಲಾಡಿಗಳು ನಯನಾ ಬಾಳಲ್ಲಿ ಅಂಥದ್ದೇನಾಯ್ತು?

ನಟಿ ರೂಪಿಕಾ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿ ಜನರ ಮನಕ್ಕೆ ಹತ್ತಿರವಾದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಸೀರಿಯಲ್‌ನ ನಾಯಕಿ ದೀಪಿಕಾ ಆಗಿ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾದರು.

'ಬೆಳ್ಳಿಚುಕ್ಕಿ', 'ಬದುಕು', 'ತ್ರಿವೇಣಿ ಸಂಗಮ' ಗಳಲ್ಲಿ ಬಾಲನಟಿಯಾಗಿ ನಟಿ ರೂಪಿಕಾ ಅಭಿನಿಯಿಸಿದ್ದಾರೆ. 'ಚೆಲುವಿನ ಚಿಲಿಪಿಲಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.'ತೀರ್ಥರೂಪ', 'ಮಾಯದಂಥ ಮಳೆ', 'ಬೀರ', 'ಥರ್ಡ್ ಕ್ಲಾಸ್', 'ರುದ್ರಾಕ್ಷಿಪುರ', 'ಮಂಜರಿ','ನವರಂಗಿ', 'ಡೈಮಂಡ್ ಕ್ರಾಸ್' ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿ ರೂಪಿಕಾ ನಟಿಸಿ ಜನರ ಮನಗೆದ್ದವರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News