ʼಬ್ಯಾಡ್‌ ಮ್ಯಾನರ್ಸ್‌ʼ ಮೂಲಕ ಕಿರುತೆರೆಯಿಂದ ಸಿನಿಮಾಗೆ ಕೃಷ್ಣ ತುಳಸಿ ಸೀರಿಯಲ್ ನಟಿ ಎಂಟ್ರೀ!

Priyanka Kumar: ಸ್ಟಾರ್‌ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಪ್ರಿಯಾಂಕ ಕುಮಾರ್‌, ಇದೀಗ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಮೂಲಕ ಹಿರಿತೆರೆಗೆ ಹೆಜ್ಜೆಹಾಕಿದ್ದಾರೆ.

Written by - Zee Kannada News Desk | Last Updated : Nov 27, 2023, 12:30 PM IST
  • ನಟ ಅಭಿಷೇಕ್ ಅಂಬರೀಶ್ ಅಭಿನಯದ 'ಬ್ಯಾಡ್ ಮಾನರ್ಸ್' ಚಿತ್ರದಲ್ಲಿ ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ.
  • ನಟಿ ಪ್ರಿಯಾಂಕಾ ಕುಮಾರ್‌ ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಆಸಕ್ತಿಯಿದ್ದು, ಬಾಲ್ಯದಿಂದಲೂ ನಾಟಕ, ಯಕ್ಷಗಾನವನ್ನು ನೋಡುತ್ತಲೇ ಬೆಳೆದ ಆಕೆಗೆ ನಟಿಯಾಗಬೇಕು ಎಂಬ ಆಸೆ ಜಾಸ್ತಿಯಾಯಿತು.
  • ನಟಿ ಪ್ರಿಯಾಂಕ ಕುಮಾರ್‌ 'ಅದ್ಧೂರಿ ಲವರ್', 'ದಿಲ್ದರ್' ಚಿತ್ರದಲ್ಲಿ ಬಣ್ಣ ಹಚ್ಚಿರುವ ಈಕೆಗೆ ಮೊದಲಿನಿಂದಲೂ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಬಯಕೆಯಿತ್ತು.
ʼಬ್ಯಾಡ್‌ ಮ್ಯಾನರ್ಸ್‌ʼ ಮೂಲಕ ಕಿರುತೆರೆಯಿಂದ ಸಿನಿಮಾಗೆ ಕೃಷ್ಣ ತುಳಸಿ ಸೀರಿಯಲ್ ನಟಿ ಎಂಟ್ರೀ!  title=

Priyanka Kumar in Bad Manners: ಕಿರುತೆರೆ ನಟಿ ಪ್ರಿಯಾಂಕಾ ಕುಮಾರ್‌ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ನಟಿಸಿದ್ದವರು, ಇದೀಗ ಹಿರಿತೆರೆಗೂ ಈ ನಟಿ ಪ್ರಿಯಾಂಕಾ ಹೆಜ್ಜೆಯಿಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿರುವ ನಟ ಅಭಿಷೇಕ್ ಅಂಬರೀಶ್ ಅಭಿನಯದ 'ಬ್ಯಾಡ್ ಮಾನರ್ಸ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪ್ರಿಯಾಂಕಾ ಕುಮಾರ್, ಸಿನಿಮಾದಲ್ಲಿ ಶ್ರೀಮಂತ ಉದ್ಯಮಿಯ ಮಗಳ ಪಾತ್ರದಲ್ಲಿ ಪ್ರಿಯಾಂಕಾ ಕುಮಾರ್ ಕಾಣಿಸಿಕೊಂಡಿದ್ದಾರೆ. 

ನಟಿ ಪ್ರಿಯಾಂಕಾ ಕುಮಾರ್‌ ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು, ತಮ್ಮ ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಆಸಕ್ತಿಯಿದ್ದು, ಬಾಲ್ಯದಿಂದಲೂ ನಾಟಕ, ಯಕ್ಷಗಾನವನ್ನು ನೋಡುತ್ತಲೇ ಬೆಳೆದ ಆಕೆಗೆ ನಟಿಯಾಗಬೇಕು ಎಂಬ ಆಸೆ ಜಾಸ್ತಿಯಾಯಿತು. ತೀರ್ಥಹಳ್ಳಿಯಲ್ಲಿ 6ನೇ ತರಗತಿವರೆಗೆ ಓದಿದ ಪ್ರಿಯಾಂಕಾ ಮುಂದೆ ಮೈಸೂರಿಗೆ ಶಿಫ್ಟ್ ಆಗಿ. ಬಳಿಕ ನಟಿಯಾಗಬೇಕು ಎಂಬ ಬಯಕೆ ಅದ್ಯಾವಾಗ ತೀವ್ರವಾಗಿತ್ತೋ ಆವಾಗ ಆಕೆ ಇದ್ದಂತಹ ಆಡಿಶನ್‌ಗಳಲ್ಲಿ ಭಾಗವಹಿಸಲಾರಂಭಿಸಿದರು. 

ಇದನ್ನೂ ಓದಿ: ಲಕ್ಷ್ಮಿ ನಿವಾಸದಲ್ಲಿ ದಿಶಾ ಮದನ್:‌ ದಶಕದ ಬಳಿಕ ಕಿರುತೆರೆಗೆ ಮರಳಿದ ನಟಿ!

ಸುಮಾರು ಮೂರು ವರ್ಷಗಳ ಕಾಲ ಆಡಿಶನ್‌ಗಳಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಕುಮಾರ್ 'ಕೃಷ್ಣ ತುಳಸಿ' ಮೂಲಕ ನಟನೆಗೆ ಜಿಗಿದು, ಇದೀಗ ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮಾನರ್ಸ್' ಸಿನಿಮಾಕ್ಕೆ ಆಡಿಶನ್ ಮೂಲಕ ಆಯ್ಕೆಯಾದ ಪ್ರಿಯಾಂಕಾ ಕುಮಾರ್‌ಗೆ ಚಿತ್ರದ ಕಥೆ ಹಾಗೂ ಪಾತ್ರದ ಬಗ್ಗೆ ಕೊಂಚವೂ ಅರಿವಿರಲಿಲ್ಲವಂತೆ. ನಿರ್ದೇಶಕ ದುನಿಯಾ ಸೂರಿ ಶೂಟಿಂಗ್‌ಗೆ ಮೊದಲು ಪ್ರಿಯಾಂಕಾಗೆ ಸಿನಿಮಾದ ಕಥೆಯ ಜೊತೆಗೆ ಪಾತ್ರದ ಬಗ್ಗೆ ಸವಿವರವಾಗಿ ವಿವರಿಸಿದರಂತೆ. ಹಾಗಾಗಿ ಪ್ರಿಯಾಂಕಾಗೆ ನಟಿಸಲು ಕಷ್ಟವಾಗಲಿಲ್ಲವಂತೆ. 

ನಟಿ ಪ್ರಿಯಾಂಕ ಕುಮಾರ್‌ 'ಅದ್ಧೂರಿ ಲವರ್', 'ದಿಲ್ದರ್' ಚಿತ್ರದಲ್ಲಿ ಬಣ್ಣ ಹಚ್ಚಿರುವ ಈಕೆಗೆ ಮೊದಲಿನಿಂದಲೂ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಬಯಕೆಯಿತ್ತು. ದೊಡ್ಡ ನಟರ ಜೊತೆಗೆ, ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಇರಾದೆ ಇರುವ ಪ್ರಿಯಾಂಕಾಗೆ ಪರಭಾಷೆಯ ಸಿನಿಮಾಗಳಿಗಿಂತಲೂ ಕನ್ನಡ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಆಸೆಯಂತೆ. ಇದರ ಜೊತೆಗೆ ದುನಿಯಾ ಸೂರಿ ನಿರ್ದೇಶನದಡಿ ಸಿನಿಮಾದಲ್ಲಿ ನಟಿಸುತ್ತಿರುವುದು ಕೂಡಾ ಆಕೆಗೆ ಸಂತಸ ತಂದಿದೆಯಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News