Divorce Rumors: ವಿಚ್ಛೇಧನ ವದಂತಿಗಳ ಮಧ್ಯೆ ಮುಂಬೈಗೆ ತೆರೆಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಜ್ಯೋತಿಕಾ!

Jyothika Suriya Divorse Rumors Update: ಇತ್ತೀಚೆಗೆ ಕಾಲಿವುಡ್‌ ಕಪಲ್‌ ಸೂರ್ಯ-ಜ್ಯೋತಿಕಾ ವಿಚ್ಛೇದನದ ವದಂತಿ ಹರಿದಾಡುತ್ತಿದ್ದು, ಇದೀಗ ನಟಿ ಜ್ಯೋತಿಕಾ ಮೊದಲ ಬಾರಿಗೆ ಮುಂಬೈಗೆ ಹೋಗಿರುವುದರ ಬಗ್ಗೆ ಸ್ಪಷ್ಟನೆ ನೀಡಿ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.  

Written by - Zee Kannada News Desk | Last Updated : Jan 28, 2024, 10:15 AM IST
  • ಸೂರ್ಯ ಮತ್ತು ಜ್ಯೋತಿಕಾ ಇಬ್ಬರ ಡೈವೋರ್ಸ್ ಪಡೆಯುತ್ತಿದ್ದಾರೆಂಬ ವದಂತಿಗಳಿಗೆ ಈ ನಟಿ ಸ್ಪಷ್ಟನೆ ನೀಡಿದ್ದಾರೆ.
  • ಕಳೆದೆರಡು ತಿಂಗಳುಗಳ ಈ ಗಾಸಿಪ್‌ಗಳಿಗೆ ಜೋಡಿ ಯಾವುದೇ ಉತ್ತರ ನೀಡದಿರುವ ಕಾರಣ, ವದಂತಿ ಹೆಚ್ಚಾಗಲು ಅವಕಾಶ ಮಾಡಿಕೊಟ್ಟಿತು.
  • ಇತ್ತೀಚೆಗೆ ನಟಿ ಜ್ಯೋತಿಕಾ ಸಿನಿಮಾ ಇಂಡಸ್ಟ್ರೀಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದರಿಂದ ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳು ಸೇರಿದಂತೆ ಹಲವಾರು ಆಫರ್‌ಗಳು ಅಕೆಯ ಕೈಯಲ್ಲಿವೆ.
Divorce Rumors: ವಿಚ್ಛೇಧನ ವದಂತಿಗಳ ಮಧ್ಯೆ ಮುಂಬೈಗೆ ತೆರೆಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಜ್ಯೋತಿಕಾ! title=

Actress Jyothika Clarified About Divorse Rumours: ಚಿತ್ರರಂಗದಲ್ಲಿ ಇತ್ತೀಚೆಗೆ ಒಂದಾದ ಮೇಲೆ ಒಂದು ವಿಚ್ಛೇಧನ ವದಂತಿಗಳು ಹರಿದಾಡುತ್ತಿದ್ದು, ಮೊದಲು ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್‌ ರೂಮರ್ಸ್‌ ಬಳಿಕ, ಕಾಲಿವುಡ್‌ ಕಪಲ್‌ ಸೂರ್ಯ-ಜ್ಯೋತಿಕಾ ವಿಚ್ಛೇದನದ ವದಂತಿ ಸುತ್ತುತ್ತಿದ್ದವು.  ಸೂರ್ಯ ಮತ್ತು ಜ್ಯೋತಿಕಾ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಸೂರ್ಯ ಅವರನ್ನು ಬಿಟ್ಟು ಜ್ಯೋತಿಕಾ ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದಾರೆ. ಇಬ್ಬರು ಡೈವೋರ್ಸ್ ಪಡೆಯುತ್ತಿದ್ದಾರೆಂಬ ವದಂತಿಗಳಿಗೆ ನಟಿ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ. 

ಸೂರ್ಯ ಮತ್ತು ಜ್ಯೋತಿಕಾ 1999 ರಲ್ಲಿ "ಪೂವೆಲ್ಲಂ ಕೆಟ್ಟುಪ್ಪರ್" ನಿಂದ ಪ್ರಾರಂಭವಾದ ಈ ಜೋಡಿಯ ಸಿನಿಮಾ ಒಟ್ಟು ಏಳು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈ ಜೋಡಿ ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ  ಬಳಿಕ ಸೆಪ್ಟೆಂಬರ್ 11, 2006 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ, ಈ ದಂಪತಿಗೆ 2007 ರಲ್ಲಿ ದಿಯಾ ಎಂಬ ಮಗಳು ಮತ್ತು 2010 ರಲ್ಲಿ ದೇವ್ ಎಂಬ ಮಗ ಜನಿಸಿದ್ದಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಜೀವನವನ್ನು ಸಮತೋಲನದಲ್ಲಿಡಲು ಸೂರ್ಯ ಮತ್ತು ಜ್ಯೋತಿಕಾ ಪ್ರಯತ್ನ ಪಡುತ್ತಿರುವ ವೇಳೆಯೇ ಈ ದಂಪತಿ ಮುಂಬೈಗೆ ಸ್ಥಳಾಂತರಗೊಂಡ ನಂತರ ವಿಚ್ಛೇಧನದ ವದಂತಿಗಳು ಹೆಚ್ಚಾಗಲು ಕಾರಣವಾಯಿತು. 

ಇದನ್ನೂ ಓದಿ: Divorce Rumors: ಈ ಕಾರಣಕ್ಕೆ ದೂರ ಉಳಿದಿದ್ದೇವೆ..! ವಿಚ್ಛೇದನದ ಬಗ್ಗೆ ಜ್ಯೋತಿಕಾ ಸೂರ್ಯ ಕ್ಲಾರಿಟಿ

ನಟಿ ಜ್ಯೋತಿಕಾ ಸ್ವಲ್ಪ ಸಮಯದಿಂದ ಮುಂಬೈನಲ್ಲೇ ವಾಸಿಸುತ್ತಿದ್ದಾರೆ ಎಂಬ ವರದಿಯ ಬೆನ್ನಲ್ಲೇ, ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ಉಳಿಯುತ್ತಿರುವುದು ಇಬ್ಬರ ನಡುವಿನ ಪ್ರತ್ಯೇಕತೆಯನ್ನು ಸೂಚಿಸುತ್ತದೆ ಎಂದು ಹಲವು ವರದಿಗಳು ಪ್ರಕಟವಾದವು. ಕಳೆದೆರಡು ತಿಂಗಳುಗಳ ಈ ಗಾಸಿಪ್‌ಗಳಿಗೆ ಜೋಡಿ ಯಾವುದೇ ಉತ್ತರ ನೀಡದಿರುವ ಕಾರಣ, ವದಂತಿ ಹೆಚ್ಚಾಗಲು ಅವಕಾಶ ಮಾಡಿಕೊಟ್ಟಿತು. ಆದರೆ, ವಿಚ್ಛೇದನದ ವದಂತಿಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯಿಸುವ ಮೂಲಕ ಜ್ಯೋತಿಕಾ ಎಲ್ಲಾ ಅಂತೆ ಕಂತೆಗಳಿಗೆ ಅಂತ್ಯ ಹಾಡಿದ್ದಾರೆ. 

ಇತ್ತೀಚೆಗೆ ನಟಿ ಜ್ಯೋತಿಕಾ ಸಿನಿಮಾ ಇಂಡಸ್ಟ್ರೀಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದರಿಂದ ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳು ಸೇರಿದಂತೆ ಹಲವಾರು ಆಫರ್‌ಗಳು ಅಕೆಯ ಕೈಯಲ್ಲಿವೆ. ಮುಂಬೈಗೆ ಸ್ಥಳಾಂತರಗೊಂಡಿರುವುದು ಪ್ರಾಥಮಿಕವಾಗಿ ಶೂಟಿಂಗ್ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಎಂದು ಮಾಹಿತಿ ನೀಡಿದ್ದಾರೆ. ಜ್ಯೋತಿಕಾ ಶೂಟಿಂಗ್ ಮತ್ತು ಮಕ್ಕಳ ಶಿಕ್ಷಣದ ಕಾರಣಗಳಿಗಾಗಿ ಮುಂಬೈಗೆ ಸ್ಥಳಾಂತರಗೊಂಡಿದ್ದೇನೆ. ಈ ಕಮಿಟ್‌ಮೆಂಟ್‌ಗಳನ್ನು ಮುಗಿಸಿದ ನಂತರ ಚೆನ್ನೈಗೆ ವಾಪಸ್ ಹೋಗಲು ಯೋಜಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಗಳು ವಿಚ್ಛೇದನದ ಸುತ್ತಲಿನ ವದಂತಿಗೆ ಫುಲ್ ಸ್ಟಾಪ್ ಹಾಕಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News