Bharjari Gandu: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಭರ್ಜರಿ ಗಂಡು’ ಹಿಂದಿ ಡಬ್ಬಿಂಗ್ ರೈಟ್ಸ್

ತಮ್ಮ ನಟನೆಯಿಂದಲೇ  ಕರ್ನಾಟಕದ ತುಂಬಾ ಮನೆ ಮಾತಾಗಿರುವವರು ಕಿರಣ್ ರಾಜ್ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Apr 3, 2022, 10:08 AM IST
  • ಜೋರಾಗಿ ಸಾಗುತ್ತಿದೆ ಮೈಸೂರು ಹುಡುಗನ ಗೆಲುವಿನ ಓಟ
  • ದೊಡ್ಡ ಮೊತ್ತಕ್ಕೆ ಸೇಲ್ ಆದ ‘ಭರ್ಜರಿ ಗಂಡು’ ಹಿಂದಿ ರೈಟ್ಸ್
  • ತೆರೆಗೆ ಬರಲು ಸಜ್ಜಾದ ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಸಿನಿಮಾ
Bharjari Gandu: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಭರ್ಜರಿ ಗಂಡು’ ಹಿಂದಿ ಡಬ್ಬಿಂಗ್ ರೈಟ್ಸ್ title=
‘ಭರ್ಜರಿ ಗಂಡು’ ಹಿಂದಿ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್

ಬೆಂಗಳೂರು: ಕಲೆ, ಸಂಸ್ಕೃತಿಯ ತವರಾಗಿರುವ ಮೈಸೂರು ಕನ್ನಡ ಚಿತ್ರರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan), ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಾಕಷ್ಟು ಅದ್ಭುತ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಸ್ಯಾಂಡಲ್‍ವುಡ್‍ನಲ್ಲಿ ಹೆಸರು ಮಾಡುತ್ತಿರುವ ‘ಕನ್ನಡತಿ’ ಧಾರಾವಾಹಿ(Kannadathi Serial) ಖ್ಯಾತಿಯ ಕಿರಣ್ ರಾಜ್ ಕೂಡ ಮೈಸೂರಿನವರೇ ಎಂಬುದು ವಿಶೇಷ.

ಕಿರಣ್ ರಾಜ್‍(Kiran Raj)ಗೆ  ಅಪಾರ ಅಭಿಮಾನಿ ಬಳಗವಿದೆ. ತಮ್ಮ ನಟನೆಯಿಂದಲೇ  ಕರ್ನಾಟಕದ ತುಂಬಾ ಮನೆ ಮಾತಾಗಿರುವವರು ಕಿರಣ್ ರಾಜ್ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಕಿರಣ್ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿರುವ ‘ಬಡ್ಡೀಸ್’, ‘ಭರ್ಜರಿ ಗಂಡು’ ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿದೆ.

ಇದನ್ನೂ ಓದಿ: Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್!

‘ಭರ್ಜರಿ ಗಂಡು’(Bharjari Gandu) ಚಿತ್ರದ ಟೀಸರ್ ಬಿಡುಗಡೆಯಾಗಿ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಟೀಸರ್ ಬಿಡುಗಡೆಯಾದ ಬಳಿಕ ಈ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಚಿತ್ರದ ಹಿಂದಿ ರೈಟ್ಸ್‌(Hindi Dubbing Rights) ಬಿಡುಗಡೆಗೂ ಮುಂಚೆಯೇ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ‘ಬಡ್ಡೀಸ್’ ಚಿತ್ರದ ಫಸ್ಟ್‍ಲುಕ್ ಕಳೆದ ವಾರ ಬಿಡುಗಡೆಯಾಗಿದ್ದು, ವಿಭಿನ್ನ ಪೋಸ್ಟರ್‍ನಿಂದಲೇ ಸಿನಿ ಪ್ರಿಯರ ಮನ ಗೆದ್ದಿದೆ.

ಟೀಸರ್, ಪೊಸ್ಟರ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ನಟನಿಗಾಗಿ ಈಗಾಗಲೇ ರಾಜ್ಯಾದ್ಯಂತ ಅಭಿಮಾನಿಗಳ ಸಂಘ ಕೂಡ ತೆರೆದಿದ್ದಾರೆ. ಕಿರಣ್ ರಾಜ್(Kiran Raj) ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದಾರಂತೆ. ಕೇವಲ ನಟನೆಗಷ್ಟೇ ಸೀಮಿತವಾಗದ ಕಿರಣ್ ರಾಜ್ ಸಮಾಜಮುಖಿ ಕೂಡ. ಕೋವಿಡ್ ಸಾಂಕ್ರಾಮಿಕದ ವೇಳೆ ಇವರು ಮಾಡಿದ ಸಮಾಜ ಕಾರ್ಯಗಳು ಅಷ್ಟಿಷ್ಟಲ್ಲ.

ಇದನ್ನೂ ಓದಿ: ಕಾರು ಅಪಘಾತ: ಬಾಲಿವುಡ್ ನಟಿ ಮಲೈಕಾ ಆರೋರಾ ಆಸ್ಪತ್ರೆಗೆ ದಾಖಲು

ಸಮಾಜದಿಂದ ದೂರವೇ ಉಳಿದಿರುವ ತೃತೀಯ ಲಿಂಗಿಗಳಿಗೂ ಕಿರಣ್ ರಾಜ್(Kiran Raj) ನೆರವಾಗಿದ್ದಾರೆ. ಇವರ ಸಹಾಯ ನೆನೆದು ಅವರು ಆನಂದಭಾಷ್ಪವನ್ನೇ ಸುರಿಸಿದ್ದಾರೆ. ಉತ್ತಮ ನಟನೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಜನಾನುರಾಗಿಯಾಗಿರುವ ಕಿರಣ್ ರಾಜ್ ಅವರ ಸಿನಿಭವಿಷ್ಯ ಉಜ್ವಲವಾಗಿರಲಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News