ಬಿಡುಗಡೆಗೂ ಮುನ್ನವೇ ಕೇರಳದಲ್ಲಿ ಕೆಜಿಎಫ್ ದಾಖಲೆ ಮುರಿದ ಕಿಂಗ್‌ ಆಫ್‌ ಕೋಥಾ...ಇಲ್ಲಿದೆ ಕಲೆಕ್ಷನ್‌ ಡಿಟೇಲ್ಸ್‌!

King of Kotha Breaks KGF Record : ದುಲ್ಕರ್ ಸಲ್ಮಾನ್ ಅಭಿಮಾನಿಗಳು ಹಾಗೂ ದಕ್ಷಿಣ ಭಾರತದ ಸಿನಿಮಾ ಜಗತ್ತು ಕಾತರದಿಂದ ಕಾಯುತ್ತಿರುವ ಚಿತ್ರ ಕಿಂಗ್ ಆಫ್ ಕೋಥಾ. ಸದ್ಯ ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಕೇರಳದಲ್ಲಿ ರೆಕಾರ್ಡ್ ಮಾಡಿದೆ. 

Written by - Savita M B | Last Updated : Aug 23, 2023, 04:30 PM IST
  • ಅಭಿಮಾನಿಗಳ ಕಾಯುವಿಕೆಗೆ ತೆರೆ ಎಳೆದಿರುವ ಕೋಥಾ ನಾಳೆ ಥಿಯೇಟರ್‌ಗೆ ಬರಲಿದೆ.
  • ಕಿಂಗ್ ಆಫ್ ಕೋಥಾ ಬಿಡುಗಡೆಗೂ ಮುನ್ನವೇ ಕೇರಳದಲ್ಲಿ ರೆಕಾರ್ಡ್ ಮಾಡಿದೆ.
  • ಕೇರಳವೊಂದರಲ್ಲೇ 500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಾಣಲಿದೆ.
ಬಿಡುಗಡೆಗೂ ಮುನ್ನವೇ ಕೇರಳದಲ್ಲಿ ಕೆಜಿಎಫ್ ದಾಖಲೆ ಮುರಿದ ಕಿಂಗ್‌ ಆಫ್‌ ಕೋಥಾ...ಇಲ್ಲಿದೆ ಕಲೆಕ್ಷನ್‌ ಡಿಟೇಲ್ಸ್‌!  title=

King of Kotha Movie : ದುಲ್ಕರ್ ಸಲ್ಮಾನ್ ನಟನೆಯ ಕಿಂಗ್ ಆಫ್ ಕೋಥಾ ಬಿಡುಗಡೆಗೂ ಮುನ್ನವೇ ಕೇರಳದಲ್ಲಿ ರೆಕಾರ್ಡ್ ಮಾಡಿದೆ. ಕಿಂಗ್ ಆಫ್ ಕೋಥಾ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಮುಂಗಡ-ಬುಕಿಂಗ್ ಚಿತ್ರದ ಸಂಖ್ಯೆಗಳಲ್ಲಿ ಅಗ್ರಸ್ಥಾನದಲ್ಲಿದೆ. 

ಚಿತ್ರ ಬಿಡುಗಡೆಗೂ ಮುನ್ನವೇ ಕೇರಳದಿಂದ ಮೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ ಚಿತ್ರ ಕೆಜಿಎಫ್ ಅನ್ನು ಹಿಂದಿಕ್ಕಿದೆ. ಈ ಕಿಂಗ್ ಆಫ್ ಕೋಥಾ ಸಿನಿಮಾ ವಿಶ್ವದಾದ್ಯಂತ 6 ಕೋಟಿಗೂ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ. 

ಇದನ್ನೂ ಓದಿ-ದಾಸನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌....2 ದಶಕಗಳ ಬಳಿಕ ಮತ್ತೆ ಒಂದಾಗ್ತಿದ್ದಾರೆ ದರ್ಶನ್-ಜೋಗಿ ಪ್ರೇಮ್!

ಕಿಂಗ್ ಆಫ್ ಕೋಥಾ ಕೇರಳವೊಂದರಲ್ಲೇ 500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ. ಅಲ್ಲದೇ 50 ದೇಶಗಳಲ್ಲಿ 2,500 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮಿ, ಶಬೀರ್ ಕಲ್ಲರಕ್ಕಲ್, ಪ್ರಸನ್ನ, ಗೋಕುಲ್ ಸುರೇಶ್, ಶಮ್ಮಿ ತಿಲಕನ್, ಶಾಂತಿ ಕೃಷ್ಣ, ಅನಿಖಾ ಸುರೇಂದ್ರನ್ ಮುಂತಾದವರು ನಟಿಸಿದ್ದಾರೆ. 

ಕಿಂಗ್ ಆಫ್ ಕೋಥಾ ಚಿತ್ರದ ಛಾಯಾಗ್ರಹಣವನ್ನು ನಿಮಿಷ್ ರವಿ ಮಾಡಿದ್ದಾರೆ. ಜೇಕ್ಸ್ ಬಿಜಾಯ್ ಮತ್ತು ಶಾನ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮತ್ತು ಈ ಚಿತ್ರವನ್ನು ಪರಮೇಶ್ವರನ್ ನಿರ್ಮಾಣ ಮಾಡಿದ್ದಾರೆ. ಇನ್ನು ದುಲ್ಕರ್ ಅವರ ಮಾಸ್ ಪಾತ್ರಕ್ಕಾಗಿ ಅಭಿಮಾನಿಗಳ ಕಾಯುವಿಕೆಯನ್ನು ಕೊನೆಗೊಳಿಸಿದ ಕೋಥಾ ನಾಳೆ ಥಿಯೇಟರ್‌ಗಳಿಗೆ ಬರಲಿದೆ. 

ಇದನ್ನೂ ಓದಿ-ಜವಾನ್ ಗೆ ಸೆನ್ಸಾರ್ ಶಾಕ್‌! ಶಾರುಖ್‌ ನ್ಯೂ ಸಿನಿಮಾ ಪ್ರಮುಖ ಸೀನ್‌ಗೆ ಕತ್ತರಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News