ಪೇಡಾನಗರಿಯಲ್ಲಿ ಹೆಬ್ಬುಲಿಯ ಘರ್ಜನೆ, ಧಾರವಾಡದಲ್ಲಿ ಕಿಚ್ಚನ ಭರ್ಜರಿ ರೋಡ್‌ ಶೋ..!

Kichha Sudeep : ಸ್ಯಾಂಡಲ್‌ವುಡ್‌ ಬಾದ್ ಷಾ ಕಿಚ್ಚ ಸುದೀಪ್‌ ಇಂದು ಅವಳಿ ನಗರದ ಸೆಂಟ್ರಲ್‌ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳು ಭರ್ಜರಿಯಾಗಿಯೇ ನಡೆದಿವೆ. ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ಇಳಿದಿರುವ ಸುದೀಪ್‌ಗೆ ಜನರಿಂದ ಉತ್ತಮ ರೆಸ್ಫಾನ್ಸ್‌ ದೊರಕುತ್ತಿದೆ. ಇಂದು ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಪ್ರಚಾರಕ್ಕೆ ಒಳ್ಳೆಯ ರೆಸ್ಫಾನ್ಸ್‌ ಸಿಗುವ ಸಾದ್ಯತೆ ಇದೆ.  

Written by - Zee Kannada News Desk | Last Updated : Apr 28, 2023, 08:52 AM IST
  • ಚುನಾವಣೆ ಸಮೀಪಿಸುತ್ತಿದ್ದಂತೆ ಕದನ ಕಲಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
  • ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿ ಪ್ರಚಾರ ನಡೆಸುತ್ತಿದ್ದಾರೆ.
  • ಇದಲ್ಲದೇ ಸಿನಿಮಾ ನಟರು ಸಹ ರಾಜಕೀಯ ಪಕ್ಷದ ಪ್ರಚಾರಕ್ಕೆ ಇಳಿದಿದ್ದಾರೆ.
ಪೇಡಾನಗರಿಯಲ್ಲಿ ಹೆಬ್ಬುಲಿಯ ಘರ್ಜನೆ, ಧಾರವಾಡದಲ್ಲಿ ಕಿಚ್ಚನ ಭರ್ಜರಿ ರೋಡ್‌ ಶೋ..!  title=

Hubli-Dharwad : ಚುನಾವಣೆ ಸಮೀಪಿಸುತ್ತಿದ್ದಂತೆ ಕದನ ಕಲಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿ ಪ್ರಚಾರ ನಡೆಸುತ್ತಿದ್ದಾರೆ. ಇದಲ್ಲದೇ ಸಿನಿಮಾ ನಟರು ಸಹ ರಾಜಕೀಯ ಪಕ್ಷದ ಪ್ರಚಾರಕ್ಕೆ ಇಳಿದಿದ್ದಾರೆ. ನಟ ಕಿಚ್ಚ ಸುದೀಪ್‌ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. 

ಇಂದು ಬೆಳಿಗ್ಗೆ 9:30ಕ್ಕೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಕಿಚ್ಚ ಸುದೀಪ್‌ ಬಿಜೆಪಿ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ. ತದನಂತರ 11 ಗಂಟೆಗೆ ಕಲಘಟಗಿಯಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಮದ್ಯಾಹ್ನ 12:30ಕ್ಕೆ ಧಾರವಾಡದಲ್ಲಿ ಮತಬೇಟೆಗೆ ಇಳಿಯಲಿದ್ದಾರೆ ಕಿಚ್ಚ ಸುದೀಪ್.‌ ಜೊತೆಗೆ ಮಧ್ಯಾಹ್ನ 3ಕ್ಕೆ ಗದಗದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ-ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ: ರೈತರು, ಯುವಕರು,ಮಹಿಳೆಯರಿಗೆ ಬಂಪರ್ ಘೋಷಣೆ

ಗುರುವಾರದಂದು ಹಿರೇಕೆರೂರಿನಲ್ಲಿ ಬಿಜೆಪಿ ಅಬ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ವೇಳೆ ಕಿಚ್ಚ ಸುದೀಪ್‌ಗೆ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಅದೇ ರೀತಿ ಧಾರವಾಡದಲ್ಲಿಯೂ ಭರ್ಜರಿ ರೆಸ್ಫಾನ್ಸ್‌ ಸಿಗುವ ಸಾಧ್ಯತೆಗಳಿವೆ. ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್‌ ಸೇರ್ಪಡೆಯಾದ ಜಗದೀಶ ಶೆಟ್ಟರ್‌ ಅವರ ವಿರುದ್ಧ ಬಿಜೆಪಿ ಸಾಕಷ್ಟು ಆರೋಪಗಳನ್ನು ಮಾಡಿ ಅವರ ವಿರುದ್ಧವಾಗಿ ಗೆಲ್ಲುಲು ಪಣ ತೊಟ್ಟಿದ್ದಾರೆ. 

ಇದಲ್ಲದೇ ಪಕ್ಷ ತೊರೆದ ಜಗದೀಶ್‌ ಶೆಟ್ಟರ್‌ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಆರೋಪವನ್ನು ಮಾಡುತ್ತಿದೆ. ಮತ್ತು ಶೆಟ್ಟರ್‌ ಅವರು ಬಿಜೆಪಿ ನನ್ನನ್ನು ಬಿಜೆಪಿ ಪಕ್ಷ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಈ ಲಿಂಗಾಯತ ವಿರೋಧಿ ಆರೋಪದಿಂದ ಬಿಜೆಪಿ ಅವಳಿನಗರದಲ್ಲಿ ಗೆಲ್ಲುವುದು ಸಂಶಯದ ಜೊತೆಗೆ ಸವಾಲು ಆಗಿದೆ. 

ಇದನ್ನೂ ಓದಿ-ಹಾಸನದಲ್ಲಿ ಮತ ಬೇಟೆಗೆ ಆಗಮಿಸುತ್ತಿದೆ ಘಟಾನುಘಟಿ ನಾಯಕರ ದಂಡು

ಬಸವಾರಾಜ ಬೊಮ್ಮಾಯಿ, ಬಿಎಸ್‌ ಯಡಿಯೂರಪ್ಪ ಈಗಾಗಲೇ ಪ್ರಚಾರದಲ್ಲಿ ಭಾಗಿಯಾಗಿರುವುದಲ್ಲದೇ ಹುಬ್ಬಳ್ಳಿ ಧಾರವಾಡದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಬಿಜೆಪಿ ಬಿಟ್ಟು ಕೈ ಸೇರಿದ ಶೆಟ್ಟರ್‌ ವಿರುದ್ಧ ಗೆಲ್ಲಲು ಬಿಜೆಪಿ ಹರಸಾಹಸ ಮಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News