ಬೆಂಗಳೂರು: ಮೊಟ್ಟಮೊದಲ ಬಾರಿಗೆ ಹಾಲಿವುಡ್‌ಗೆ ಕನ್ನಡ ಚಿತ್ರ ಎಂಟ್ರಿ ಕೊಟ್ಟಿದ್ದು, ಈ ದಿನವನ್ನು ಕನ್ನಡಿಗರು ಎಂದಿಗೂ ಮರೆಯಲಾಗದು. ಯಾಕಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸೃಷ್ಟಿಸಿರುವ ಹವಾ ಅಂತಹದ್ದು. ‘ವಿಕ್ರಾಂತ್ ರೋಣ’ ಸಿನಿಮಾ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿ ಅದ್ದೂರಿ ಪ್ರದರ್ಶನ ಕಾಣುತ್ತಿದ್ದು, ನಟ ಸುದೀಪ್ ಅವರ ಪತ್ನಿ ಕೂಡ ಚಿತ್ರವನ್ನು ಕಣ್ತುಂಬಿಕೊಂಡು ಖುಷಿ ಪಟ್ಟಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಊರ್ವಶಿ ಥಿಯೇಟರ್‌ನಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಫಸ್ಟ್ ಶೋ ನೋಡಿದ ಪ್ರಿಯಾ ಸುದೀಪ್, ‘ತಾವು ಅಭಿಮಾನಿಯಾಗಿ ಸಿನಿಮಾ ನೋಡಲು ಬಂದಿರುವೆ. ಜಗತ್ತಿನಾದ್ಯಂತ 'ವಿಕ್ರಾಂತ್ ರೋಣ' ಹೊಸ ಇತಿಹಾಸ ಸೃಷ್ಟಿಸೋದು ಪಕ್ಕಾ’ ಎಂದರು. ಇನ್ನೂ ಸಿನಿಮಾದ ಪ್ರತಿಯೊಂದು ದೃಶ್ಯವನ್ನೂ ಭಾವನಾತ್ಮಕವಾಗಿ ಕಣ್ತುಂಬಿಕೊಂಡರು ಪ್ರಿಯಾ ಸುದೀಪ್.
ಇದನ್ನೂ ಓದಿ: Vikrant Rona Review: ಸಿನಿಮಾ ಹೇಗಿದೆ ಅನ್ನೋ ಪಕ್ಕಾ ರಿವ್ಯೂ ಇಲ್ಲಿದೆ ನೋಡಿ
ಅಪ್ಪ-ಮಗಳ ಭಾವನೆ
Andhu. - ‘Gumma banda gumma”
Indhu - ‘Gumma bandebittaaa!!’
Bhetiaagalu naale belaggene hortideeni !!😎😎
Neevu?
Preethiya gummanige,all the best 👍😘@KicchaSudeep #VikrantRonaFDFS pic.twitter.com/HEeKCUvag8— Priya Sudeep/ಪ್ರಿಯ (@iampriya06) July 27, 2022
'ವಿಕ್ರಾಂತ್ ರೋಣ' ಪ್ರೀ ರಿಲೀಸ್ ಇವೆಂಟ್ ನಟ ಕಿಚ್ಚ ಸುದೀಪ್ ಮತ್ತು ಅವರ ಪುತ್ರಿ ನಡುವೆ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಮಗಳಿಗೆ ಅಂತಾ ಕಿಚ್ಚ ಸುದೀಪ್ ಅವರು ಹಾಡು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾ ಸುದೀಪ್ ಅವರು, ಅದು ನಮಗೂ ಎಮೋಷನಲ್ ಮೂಮೆಂಟ್ ಎಂದರು. ಅಲ್ಲದೆ ಚಿತ್ರದ ಟೆಕ್ನಿಕಲ್ ಡಿಪಾರ್ಟ್‌ಮೆಂಟ್‌ಗೆ ಫುಲ್ ಮಾರ್ಕ್ಸ್ ಕೊಟ್ಟರು.
ಅಂದಹಾಗೆ 'ವಿಕ್ರಾಂತ್ ರೋಣ' ಬಿಡುಗಡೆ ಹಿನ್ನೆಲೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬೆಳಂಬೆಳಗ್ಗೆ ಕೋಟಿ ಕೋಟಿ ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮಾಚರಣೆ ನಡೆಸಿದರು. 3D ಹಾಗೂ 2D ವರ್ಶನ್‌ನಲ್ಲಿ 'ವಿಕ್ರಾಂತ್ ರೋಣ' ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇದರ ಜೊತೆಗೆ ಕರ್ನಾಟಕ ರತ್ನ ಅಪ್ಪು ಮತ್ತು ಕಿಚ್ಚ ಸುದೀಪ್ ಅವರ ಸ್ನೇಹ ಬಾಂಧವ್ಯಕ್ಕೂ ಈ ಸಿನಿಮಾ ಸಾಕ್ಷಿಯಾಗಿದೆ. ಕಿಚ್ಚ ಸುದೀಪ್ ಹಾಗೂ ಅಪ್ಪು ಇರುವ ಕಟೌಟ್‌ಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಇದನ್ನೂ ಓದಿ: Vikrant Rona ಬಗ್ಗೆ ಹೀಗಂದಿದ್ದೇಕೆ ಬಾಲಿವುಟ್ ನಟ ರಿತೇಶ್ ದೇಶಮುಖ್?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.