ಅಪ್ಪು ಇದ್ರೆ ಇದನ್ನು ಮೆಚ್ಚಿಕೊಳ್ಳುತ್ತಿದ್ರಾ..? ಕನ್ನಡಕ್ಕೆ ದರ್ಶನ್‌ ಕೊಡುಗೆ ಸಾಕಷ್ಟಿದೆ : ʼಫ್ಯಾನ್ಸ್‌ಗೆ ಕಿಚ್ಚನ ಪ್ರೀತಿ ಪಾಠʼ

Kiccha Sudeep : ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಕನ್ನಡ ಸಿನಿರಂಗ ಬೇಸರಗೊಂಡಿದೆ. ಕಲಾವಿದರಿಗೆ ಪ್ರೀತಿ, ಗೌರವ ನೀಡಿ ಅಷ್ಟು ಸಾಕು ಎಂದು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಈ ಕುರಿತು ಧ್ವನಿ ಎತ್ತಿದ್ದು, ಕರುನಾಡಿನ ನೆಲ, ಭಾಷೆ, ಸಂಸ್ಕೃತಿಗೆ ಇಂತಹ ಘಟನೆಗಳು ಕಪ್ಪು ಚುಕ್ಕೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Dec 20, 2022, 12:35 PM IST
  • ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತ.
  • ಘಟನೆ ಕುರಿತು ಧ್ವನಿ ಎತ್ತಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌.
  • ಒಬ್ಬ ವ್ಯಕ್ತಿಯ ಮೂರ್ಖತನ ಪ್ರೀತಿ, ಘನತೆ ಮತ್ತು ಗೌರವಕ್ಕೆ ಹೆಸರುವಾಸಿಯಾಗಿರುವ ಪುನೀತ್ ಅಭಿಮಾನಿಗಳಿಗೆ ಕಳಂಕ ಎಂದ ಕಿಚ್ಚ.
ಅಪ್ಪು ಇದ್ರೆ ಇದನ್ನು ಮೆಚ್ಚಿಕೊಳ್ಳುತ್ತಿದ್ರಾ..? ಕನ್ನಡಕ್ಕೆ ದರ್ಶನ್‌ ಕೊಡುಗೆ ಸಾಕಷ್ಟಿದೆ : ʼಫ್ಯಾನ್ಸ್‌ಗೆ ಕಿಚ್ಚನ ಪ್ರೀತಿ ಪಾಠʼ title=

Kiccha Sudeep on Darshan : ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಕನ್ನಡ ಸಿನಿರಂಗ ಬೇಸರಗೊಂಡಿದೆ. ಕಲಾವಿದರಿಗೆ ಪ್ರೀತಿ, ಗೌರವ ನೀಡಿ ಅಷ್ಟು ಸಾಕು ಎಂದು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಈ ಕುರಿತು ಧ್ವನಿ ಎತ್ತಿದ್ದು, ಕರುನಾಡಿನ ನೆಲ, ಭಾಷೆ, ಸಂಸ್ಕೃತಿಗೆ ಇಂತಹ ಘಟನೆಗಳು ಕಪ್ಪು ಚುಕ್ಕೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ದರ್ಶನ್‌ ಅವರು ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಒಬ್ಬ ಅದ್ಭುತ ಕಲಾವಿದನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ. ನಿನ್ನೆಯೂ ಸಹ ಸ್ಯಾಂಡಲ್‌ವುಡ್‌ ನಟ, ನಟಿಯರು ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಗೆಳೆಯನ ಕುರಿತು ಮತ್ತು ಅಭಿಮಾನಿಗಳಿಗಾಗಿ ಕಿಚ್ಚ ಮೌನ ಮರಿದಿದ್ದು, ತಮ್ಮ ಟ್ವಿಟರ್‌ ಖಾತೆಯಲ್ಲಿ ಸುದೀರ್ಘವಾದ ಲೆಟರ್‌ ಬರೆದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss : ಪುತ್ರಿ ಆಸ್ಪತ್ರೆಗೆ ದಾಖಲು.. ಬಿಗ್‌ಬಾಸ್‌ ಮನೆಯಿಂದ ಹೊರ ನಡೆದ ಅರುಣ್‌ ಸಾಗರ್‌

ʼʼನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಪ್ರೀತಿ ಹಾಗೂ ಗೌರವದ ಸೂಚಕ. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೆ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಘನತೆ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ. ಯಾವುದೇ ಸಮಸ್ಯೆಯನ್ನು ಸಹ ಶಾಂತ ರೀತಿಯಲ್ಲಿ ಪರಿಹರಿಸಬಹುದು. ನಿನ್ನೆ ನಾನು ನೋಡಿದ ಆ ವಿಡಿಯೋ ತುಂಬಾ ಆಘಾತಕಾರಿಯಾಗಿತ್ತು. ಆ ವೇದಿಕೆಯ ಮೇಲೆ ಅನೇಕರು ಗಣ್ಯರಿದ್ದರು ಅಲ್ಲದೆ, ಚಿತ್ರದ ಪ್ರಮುಖ ನಟಿ ಅಲ್ಲಿಯೇ ನಿಂತಿದ್ದರು. ಅಂದು ಅಲ್ಲಿದ್ದವರೆಲ್ಲರೂ ಕಾರ್ಯಕ್ರಮ ಒಂದು ಭಾಗವಾಗಿದ್ದವರು ಅಷ್ಟೇ.

ಆ ಸಮಯದಲ್ಲಿ ಹುಟ್ಟಿದ ಕೋಪಕ್ಕೂ ಅವರಿಗು ಯಾವುದೇ ಸಂಬಂಧವಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸಿರುವುದು ಸರಿಯಲ್ಲ, ಈ ಘಟನೆ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುವಂತಿದೆ. ದರ್ಶನ್‌ಗೆ ಸಂಬಂಧಿಸಿದಂತೆ, ಅವರ ಮತ್ತು ಪುನೀತ್ ಅಭಿಮಾನಿಗಳ ನಡುವೆ ಮನಸ್ತಾಪ ಇರಬಹುದು ಆದ್ರೆ, ಈ ರೀತಿ ಮಾಡಿ ಅಂತ ಅಪ್ಪು ಅವರೇ ಬೆಂಬಲಿಸುತ್ತಿದ್ದಾರಾ..? ಇದಕ್ಕೆ ಉತ್ತರ ಬಹುಶಃ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೆ ಗೊತ್ತಿದೆ. ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಮೂರ್ಖತನ ಪ್ರೀತಿ, ಘನತೆ ಮತ್ತು ಗೌರವಕ್ಕೆ ಹೆಸರುವಾಸಿಯಾಗಿರುವ ಪುನೀತ್ ಅಭಿಮಾನಿಗಳಿಗೆ ಕಳಂಕವಾಗಿದೆ.

ಇದನ್ನೂ ಓದಿ: Yash: 1 ಗಂಟೆ ನಿಂತು 700 ಫ್ಯಾನ್ಸ್‌ ಜೊತೆ ಸೆಲ್ಫಿ! 'Real Super Star' ಎಂದ ನೆಟ್ಟಿಜನ್‌

ದರ್ಶನ್ ಕನ್ನಡ ಸಿನಿರಂಗಕ್ಕೆ ಮತ್ತು ನಮ್ಮ ಭಾಷೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಖಂಡಿತವಾಗಿಯೂ ಈ ರೀತಿ ಅವರನ್ನು ಅವಮಾನಿಸಿದ್ದು ನನಗೆ ನೋವುಂಟು ಮಾಡಿದೆ. ಕನ್ನಡ ಸಿನಿರಂಗ ಅದ್ಭುತ ವಿಚಾರಗಳಿಂದ ರಾಷ್ಟ್ರದಾದ್ಯಂತ ಹೆಸರುವಾಸಿಯಾಗಿದೆ. ಕನ್ನಡ ಮತ್ತು ಕರ್ನಾಟಕವನ್ನು ಎಲ್ಲಾ ರಾಜ್ಯಗಳು ಗೌರವಿಸುತ್ತವೆ. ಈ ರೀತಿಯ ಘಟನೆ ಕರುನಾಡಿನ ಬಗ್ಗೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ.

ನಟರು ಮತ್ತು ಅಭಿಮಾನಿಗಳ ನಡುವೆ ವ್ಯತ್ಯಾಸಗಳಿವೆ ಎಂದು ನನಗೆ ತಿಳಿದಿದೆ. ಈ ಕುರಿತು ಮಾತನಾಡಲು ನಾನು ಯಾರೂ ಅಲ್ಲ. ಆದ್ರೆ ದರ್ಶನ್ ಮತ್ತು ಪುನೀತ್ ಇಬ್ಬರೂ ನನಗೆ ಬೇಕಾದವರು. ಅವರ ಜೀವನದಲ್ಲಿ ನಾನು ಹೊಂದಿದ್ದ ಸ್ಥಾನವನ್ನು ಉಳಿಸಿಕೊಂಡು, ನನ್ನ ಭಾವನೆಗಳನ್ನು ಬರೆಯಲು ಈ ಸ್ವಾತಂತ್ರ್ಯವನ್ನು ತೆಗೆದುಕೊಂಡೆ. ಹೆಚ್ಚು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ. 27 ವರ್ಷ ಸಿನಿ ಜಗತ್ತಿನಲ್ಲಿ ಪ್ರಯಾಣಿಸಿರುವ ನನಗೆ ಒಂದು ವಿಷಯದ ಅರಿವಾಗಿದೆ. ಇಲ್ಲಿ ಯಾರೂ ಶಾಶ್ವತವಲ್ಲ. ಎಲ್ಲೇಡೆ ಪ್ರೀತಿ ಹರಡೋಣ ಇದೇ, ಯಾರನ್ನಾದರೂ ಮತ್ತು ಯಾವುದೇ ಪರಿಸ್ಥಿತಿಯನ್ನು ಗೆಲ್ಲುವ ಏಕೈಕ ಮಾರ್ಗ. ನಿಮ್ಮ ಕಿಚ್ಚ...ʼʼ ಎಂದು ಬಾವುಕ ನುಡಿಗಳನ್ನಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News