ʼಕೆಜಿಎಫ್‌ʼನಲ್ಲಿ ನಟಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಮೋಹನ್‌ ನಿಧನ

ಮೋಹನ್‌ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದರು. ಸದ್ಯ ಅವರ ಪಾರ್ಥೀವ ಶರೀರವನ್ನು ನಿವಾಸಕ್ಕೆ ಕೊಂಡೊಯ್ಯಲಾಗಿದೆ.   

Written by - Bhavishya Shetty | Last Updated : May 7, 2022, 08:55 AM IST
  • ಖ್ಯಾತ ಹಾಸ್ಯನಟ ಮೋಹನ್ ಜುನೇಜಾ ನಿಧನ
  • ಅನಾರೋಗ್ಯದಿಂದ ಕೊನೆಯುಸಿರೆಳೆದ ನಟ
  • ಕೆಜಿಎಫ್‌ ಭಾಗ 1 ಮತ್ತು 2 ಸಿನಿಮಾದಲ್ಲಿ ನಟಿಸಿದ್ದ ಮೋಹನ್ ಜುನೇಜಾ
 ʼಕೆಜಿಎಫ್‌ʼನಲ್ಲಿ ನಟಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಮೋಹನ್‌ ನಿಧನ title=
Mohan Juneja

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯನಟ ಮೋಹನ್ ಜುನೇಜಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಹೇಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. 

ಇದನ್ನು ಓದಿ: ಚೆನ್ನೈನಲ್ಲಿ ಇಳಿಕೆಯಾದ ಇಂಧನ ಬೆಲೆ: ನಿಮ್ಮ ಊರಲ್ಲಿ ಪೆಟ್ರೋಲ್‌ ದರ ಎಷ್ಟಿದೆ ಗೊತ್ತಾ?

ಇತ್ತೀಚೆಗೆ ತೆರೆಕಂಡು ಭಾರೀ ಸದ್ದು ಮಾಡಿದ್ದ ಕೆಜಿಎಫ್‌ ಭಾಗ 1 ಮತ್ತು 2 ಸಿನಿಮಾ ಸೇರಿದಂತೆ ಕನ್ನಡದ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಅಷ್ಟೇ ಅಲ್ಲದೆ, ಸ್ಯಾಂಡಲ್‌ವುಡ್‌ನ ಅನೇಕ ನಾಯಕನಟರ ಜೊತೆ ತೆರಹಂಚಿಕೊಂಡ ಖ್ಯಾತಿ ಇವರದ್ದು. 

ಇದನ್ನು ಓದಿ: Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ

ಮೋಹನ್‌ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದರು. ಸದ್ಯ ಅವರ ಪಾರ್ಥೀವ ಶರೀರವನ್ನು ನಿವಾಸಕ್ಕೆ ಕೊಂಡೊಯ್ಯಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News