ಕಾವೇರಿ ವಿವಾದ: ನಟ ರಜನಿಕಾಂತ್‌ ವಿರುದ್ಧ ರೊಚ್ಚಿಗೆದ್ದ ವಾಟಾಳ್‌!

Vatal Nagarj on Rajanikanth: ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಮೌನ ತಾಳಿರುವ ನಟ ರಜನಿಕಾಂತ್ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಡಿದೆದ್ದಿದ್ದಾರೆ.   

Written by - Savita M B | Last Updated : Sep 29, 2023, 11:28 AM IST
  • ರಾಜ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.
  • ಕಾವೇರಿ ವಿಚಾರವಾಗಿ ಅನೇಕ ಕಲಾವಿದರು ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
  • ಆದರೆ ಈ ಬಗ್ಗೆ ರಜನಿಕಾಂತ್‌ ಅವರು ಪ್ರತಿಕ್ರಿಯಿಸದೇ ಇರುವದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಕಾವೇರಿ ವಿವಾದ: ನಟ ರಜನಿಕಾಂತ್‌ ವಿರುದ್ಧ ರೊಚ್ಚಿಗೆದ್ದ ವಾಟಾಳ್‌! title=

Kaveri Protest: ರಾಜ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಪ್ರತಿಭಟನೆ, ಹೋರಾಟಗಳು ತೀವ್ರಗೊಳ್ಳುತ್ತಿವೆ. ಕಾವೇರಿ ವಿಚಾರವಾಗಿ ಅನೇಕ ಕಲಾವಿದರು ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೇ ಬೀದಿಗಿಳಿದು ಹೋರಾಟದಲ್ಲೂ ಪಾಲ್ಗೋಂಡಿದ್ದಾರೆ. ಆದರೆ ಈ ಬಗ್ಗೆ ರಜನಿಕಾಂತ್‌ ಅವರು ಪ್ರತಿಕ್ರಿಯಿಸದೇ ಇರುವದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ. 

ಈ ವಿಚಾರವಾಗಿ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ "ಯಾವುದೇ ಕಾರಣಕ್ಕೂ ರಜನಿಕಾಂತ್‌ ಕರ್ನಾಟಕ್ಕೆ ಬರಕೂಡದು, ಅವರ ಚಿತ್ರಗಳಲ್ಲಿ ಕರ್ನಾಟಕದಲ್ಲಿ ರಿಲೀಸ್‌ ಮಾಡಬಾರದು. ಅವರು ಕನ್ನಡದವರಾಗಿ ಕನ್ನಡಿಗರ ಪರ ಧ್ವನಿ ಎತ್ತಬೇಕು" ಎಂದಿದ್ದಾರೆ. 

ಇದನ್ನೂ ಓದಿ-‘ದೇವರ’ ಚಿತ್ರದಲ್ಲಿ ಜ್ಯೂ. NTR ತಾಯಿಯಾಗಿ ನಟಿಸಲಿದ್ದಾರಾ ಈ ಬಹುಭಾಷಾ ನಟಿ?

ಇನ್ನು ಪ್ರತಿಬಾರೀ ಕಾವೇರಿ ಹೋರಾಟ ಅಥವಾ ಕನ್ನಡ ಪರ ಹೋರಾಟಗಳು ನಡೆದಾಗ ರಜನಿಕಾಂತ್‌ ಅವರ ಹೆಸರು ಮುನ್ನೆಲೆಗೆ ಬಂದೇ ಬರುತ್ತದೆ. ಈ ಹಿಂದೆಯೂ ರಜನಿಕಾಂತ್ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್ ಆಗಲೇಬಾರದೆಂದು ಹೋರಾಟ ನಡೆಸಲಾಗಿತ್ತು. ಸಿನಿಮಾ ಪ್ರದರ್ಶನವನ್ನು ತಡೆಯಲಾಗಿತ್ತು. 

ಇದೀಗ ಮತ್ತೆ ಅಂಥದ್ದೇ ವಿವಾದವೊಂದು ಮುನ್ನೆಲೆಗೆ ಬಂದಿದೆ. ಇತ್ತೀಚಿಗೆ ರಜನಿಕಾಂತ್‌ ಜೈಲರ್‌ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಹೀಗಾಗಿ ರಜನಿ ಮತ್ತೆ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದ್ದಾರೆ. ಇನ್ನು ಈಗಾಗಲೇ ಬಂದ್‌ ಘೋಷಣೆಯಾಗಿದ್ದು, ಈ ವಾರ ಸಿನಿಮಾಗಳನ್ನು ಬಿಡುಗಡೆ ಮಾಡದಂತೆ ಸೂಚಿಲಾಗಿದೆ. 

ಇದನ್ನೂ ಓದಿ-Karnataka Bandh: ಕರ್ನಾಟಕ ಬಂದ್​ಗೆ ಕನ್ನಡ ಚಿತ್ರರಂಗದಿಂದ ಸಂಪೂರ್ಣ ಬೆಂಬಲ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News