ದೀಪಿಕಾ ಕುರಿತು ವಿಚಿತ್ರ ಹೇಳಿಕೆ ನೀಡಿದ ಕಾರ್ತಿಕ್ ಆರ್ಯನ್!

ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಅವರ ಕುರಿತಂತೆ ಬಾಲಿವುಡ್ ನಿರ್ದೇಶಕರಿಗೆ ದೊಡ್ಡ  ಚಾಲೆಂಜ್ ನೀಡಿದ್ದಾರೆ... ಇದರ ಹಿಂದಿನ ಮರ್ಮವೇನು ತಿಳಿಯಲು ವರದಿ ಓದಿ.

Last Updated : Jan 4, 2020, 08:18 PM IST
ದೀಪಿಕಾ ಕುರಿತು ವಿಚಿತ್ರ ಹೇಳಿಕೆ ನೀಡಿದ ಕಾರ್ತಿಕ್ ಆರ್ಯನ್! title=

ನವದೆಹಲಿ: ಬಾಲಿವುಡ್ ನ ಉದಯೋನ್ಮುಖ ನಟರಲ್ಲಿ ಒರ್ವರಾಗಿರುವ ಕಾರ್ತಿಕ್ ಆರ್ಯನ್ ಹಲವು ಬಾರಿ ತಮ್ಮ ಚಿತ್ರಗಳ ಕಾರಣ ಸುದ್ದಿಯಲ್ಲಿರುತ್ತಾರೆ. ಆದರೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ತುಂಟತನದ ಹೇಳಿಕೆಗಳಿಗೂ ಕೂಡ ನೆಟ್ಟಿಗರಿಂಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಸದ್ಯ ಕಾರ್ತಿಕ್ ಆರ್ಯನ್ ಸಾಮಾಜಿಕ ಮಾಧ್ಯಮದ ಮೇಲೆ ಹಂಚಿಕೊಂಡ ಒಂದು ಫೋಟೋಗಳಿಗಾಗಿ ಸುದ್ದಿ ಮಾಡಿದ್ದಾರೆ. ಕಾರ್ತಿಕ್, ಖ್ಯಾತ ಬಾಲಿವುಡ್ ನಟಿ ಹಾಗೂ ಗುಳಿಕೆನ್ನೆಯ ಬೆಡಗಿ ಎಂದೇ ಖ್ಯಾತ ದೀಪಿಕಾ ಪಡುಕೋಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕರಿಗೆ ನೇರ ಚಾಲೆಂಜ್ ನೀಡಿದ್ದಾರೆ ಎಂದರೆ ನೀವು ನಂಬುವಿರಾ? ಹೌದು, ಕಾರ್ತಿಕ್ ಇಟ್ಟಿರುವ ಈ ಹೆಜ್ಜೆಯ ಕುರಿತು ನಾವು ಇಲ್ಲಿ ವಿಶ್ಲೇಷಿಸಿದ್ದೇವೆ.

ಸದ್ಯ ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಚಿತ್ರ 'ಛಪಾಕ್'ನ ಪ್ರಮೋಶನ್ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಇತ್ತ ಇನ್ನೊಂದೆಡೆ ಸಾಮಾಜಿಕ ಮಾಧ್ಯಮದ ಸಹಾಯ ಪಡೆದಿರುವ ಕಾರ್ತಿಕ್ ಆರ್ಯನ್, ತಾವು ಹಾಗೂ ದೀಪಿಕಾ ಇರುವ ಹಳೆ ಫೋಟೋವೊಂದನ್ನು ಹಂಚಿಕೊಂಡು ಹಲ್ಚಲ್ ಸೃಷ್ಟಿಸಿದ್ದಾರೆ. ಈ ಫೋಟೋ ಅನ್ನು ಕಾರ್ತಿಕ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ರೂಪದಲ್ಲಿ ಪ್ರಕಟಿಸಿದ್ದಾರೆ.

ಅವರ ಈ ಫೋಟೋ ಕುರಿತು ಹೇಳುವುದಾದರೆ, ಈ ಫೋಟೋದಲ್ಲಿ ಕಾರ್ತಿಕ್ ಎಂದಿಗಿಂತ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ದೀಪಿಕಾ ಪಡುಕೋಣೆ ತಮ್ಮ ಮೊದಲಿನ ಚಿತ್ರ 'ಓಂ ಶಾಂತಿ ಓಂ' ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಅನ್ನು ಹಂಚಿಕೊಂಡಿರುವ ಕಾರ್ತಿಕ್ ಛಾಯಾಚಿತ್ರಕ್ಕೆ "ಹೈ ಕಿಸಿ ಡೈರೆಕ್ಟರ್ ಮೇ ದಮ್' ಎಂಬ ಅಡಿಬರಹ ಬರೆದಿದ್ದಾರೆ.

ತಮ್ಮ ಮುಂಬರುವ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಅಭಿನಯಿಸುವ ಇಚ್ಛೆ ಕಾರ್ತಿಕ್ ಹೊಂದಿದ್ದಾರೆ ಎಂಬುದು ಅವರ ಈ ಪೋಸ್ಟ್ ಸಾಬೀತುಪಡಿಸುತ್ತದೆ. ಅಷ್ಟೇ ಅಲ್ಲ ದೀಪಿಕಾ ಅವರ ಜೊತೆ ತಮ್ಮನ್ನು ಕಾಸ್ಟ್ ಮಾಡಲು ಬಾಲಿವುಡ್ ನಿರ್ದೇಶಕರಿಗೆ ಅವರು ಓಪನ್ ಚಾಲೆಂಜ್ ಮಾಡಿದ್ದಾರೆ.

ಕಾರ್ತಿಕ್ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ದೀಪಿಕಾ "ಇವೇ ಫೋಟೋಗಳನ್ನು ಯಾಕೆ ಆಯ್ಕೆ ಮಾಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾರ್ತಿಕ್, "ಕ್ಯೂಂಕಿ ತಬಸೇ ಕಾಯನಾತ್ ಇಸಿ ಕೋಶಿಶ್ ಮೆ ಲಗಿ ಹೈ(ಅಂದಿನಿಂದ ಇದುವರೆಗೆ ತಾವು ಇದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ)" ಎಂದಿದ್ದಾರೆ. ಆ ಬಳಿಕವೂ ಕೂಡ ದೀಪಿಕಾ, ಕಾರ್ತಿಕ್ ಜೊತೆ ತಮಾಷೆಯ ಮಾತುಗಳನ್ನು ಮುಂದುವರೆಸಿದ್ದಾರೆ. ಸದ್ಯ ಇದನ್ನೆಲ್ಲಾ ಗಮನಿಸಿದ ದೀಪಿಕಾ ಹಾಗೂ ಕಾರ್ತಿಕ್ ಆರ್ಯನ್ ಅಭಿಮಾನಿಗಳು ಈ ಉಭಯತ್ರಯರನ್ನು ಯಾವ ಬಾಲಿವುಡ್ ಡೈರೆಕ್ಟರ್ ತಮ್ಮ ಚಿತ್ರದಲ್ಲಿ ಕಾಸ್ಟ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

Trending News