Puneeth Parva: ಕರುನಾಡಿಗೆ ಗುಡ್ ನ್ಯೂಸ್: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ

Puneeth Parva: ಇಂದು ಪುನೀತ್ ಪರ್ವ ಗಂಧದ ಗುಡಿ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದರು.

Written by - Bhavishya Shetty | Last Updated : Oct 22, 2022, 12:55 AM IST
    • ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕ
    • ಈ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ಚಲನಚಿತ್ರ ‘ಗಂಧದ ಗುಡಿ’
    • ಹೀಗಾಗಿ ಈ ಸಿನಿಮಾಗೆ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ
Puneeth Parva: ಕರುನಾಡಿಗೆ ಗುಡ್ ನ್ಯೂಸ್: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ title=
Puneeth Parva

Puneeth Parva: ಬೆಂಗಳೂರು: ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಇಂದು ಪುನೀತ್ ಪರ್ವ ಗಂಧದ ಗುಡಿ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದರು.

ಇದನ್ನೂ ಓದಿ: Puneeth Parva Live : ‘ಪುನೀತ ಪರ್ವ’ ಅರಮನೆ ಮೈದಾನದಿಂದ ನೇರ ಪ್ರಸಾರ!

“ಅಪ್ಪು ಜನಮಾನಸದಲ್ಲಿ ಜೀವಂತವಾಗಿದ್ದಾರೆ”

 

ಅಪ್ಪುವನ್ನು ಕಳೆದುಕೊಂಡು ಒಂದು ವರ್ಷವಾಗುತ್ತಿದೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿದೆ. ನಾನು ಕರ್ನಾಟಕದ ಉದ್ದಗಲಕ್ಕೂ ಕೊಳ್ಳೇಗಾಲದಿಂದ ಹಿಡಿದು ಬೀದರ್ ವರೆಗೂ ಪ್ರತಿಯೊಂದು ಗ್ರಾಮದಲ್ಲಿ ಅಪ್ಪುವಿನ ಛಾಯಾಚಿತ್ರ, ನಮನ, ಯುವಕರಲ್ಲಿ ಅಪ್ಪುವಿನ ಬಗ್ಗೆ ಪ್ರೀತಿ ವಿಶ್ವಾಸ ನೋಡಿದಾಗ, ಕೆಲವೊಮ್ಮೆ ವಿಸ್ಮಿತನಾಗುತ್ತೇನೆ.  ಅಂತಹ ವ್ಯಕ್ತಿತ್ವಕ್ಕೆ ದೇವರ ಆಶೀರ್ವಾದವಿದೆ. ಅಪ್ಪುರವರು ಇನ್ನೂ ಬಹಳ ವರ್ಷ ಬಾಳಬೇಕಾಗಿದ್ದವರು. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅಪ್ಪು ಬಗ್ಗೆ ಎರಡು ವಿಶೇಷತೆ ಇದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಾಲಕಲಾವಿದರಾಗಿ ಖ್ಯಾತಿಯಾಗಿದ್ದಾರೆ. ಆದರೂ ಅವರ ಕೆಲಸಗಳು, ಆದರ್ಶಗಳು ಮತ್ತು ಅವರ ನಟನೆ ಮಾಡಿದ ಚಿತ್ರಗಳ ಮೂಲಕ ಅಪ್ಪು ಜನಮಾನಸದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದರು.

ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ :

ನವೆಂಬರ್ 1 ರಂದು ಅಪ್ಪುರವರಿಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಯಾಗಿರುವ ‘ಕರ್ನಾಟಕ ರತ್ನ ಪ್ರಶಸ್ತಿ’ಯನ್ನು ಸರ್ಕಾರ ನೀಡುತ್ತಿದೆ. ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲಾ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ. ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ. ಅದೇ ರೀತಿ ಪುನೀತ್ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. ಸುಮಾರು  ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭದ ಸಂಭ್ರಮವೂ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪು ಮೇಲಿನ ನಮ್ಮ ಪ್ರೀತಿ, ವಾತ್ಸಲ್ಯವನ್ನು ಸಮಸ್ತ ಕನ್ನಡ ನಾಡು ತೋರಿಸಿದಂತಾಗುತ್ತದೆ ಎನ್ನುವ ಆಶಾಭಾವನೆ ನನಗಿದೆ ಎಂದರು.

 

ಇದನ್ನೂ ಓದಿ: ನ.1ರಂದು ಪುನೀತ್ ರಾಜ್‌ಕುಮಾರ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ 

ಎಲ್ಲರಿಗೂ ಅತ್ಯಂತ ಪ್ರಿಯವಾಗಿರುವ ಡಾ.ಪುನೀತ್ ರಾಜಕುಮಾರ್ ಅವರ ಪ್ರಯೋಗ ನಿಸರ್ಗ, ಕಾಡು, ಪ್ರಾಣಿಗಳು ಮದ್ಯೆ ನಡೆದಿರುವಂತಹ ಒಂದು ಸಿನೆಮಾ ಇದು. ಇಂದು ಗಂಧದ ಗುಡಿ ಚಲನಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಪುನೀತ್ ಪರ್ವ ಆಚರಣೆಯನ್ನು ನಾವೆಲ್ಲರೂ ಸೇರಿ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ. ಅಪ್ಪುವನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಅಪ್ಪು ನಮ್ಮ ಜೊತೆಗೆ ಇದ್ದಾನೆ ಎಂಬ ಭಾವನೆ ನಮ್ಮಲ್ಲಿದೆ ಎಂದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News