Kareena Kapoor: ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಬೆಬೋ

ಬಾಲಿವುಡ್ ಖ್ಯಾತ ತಾರಾ ದಂಪತಿಗಳಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿಖಾನ್ ಕಳೆದ ತಿಂಗಳಷ್ಟೇ ಮನೆಗೆ ದ್ವಿತೀಯ ಪುತ್ರನನ್ನು ಆಹ್ವಾನಿಸಿದರು. ಕರೀನಾ ಕಪೂರ್ ಖಾನ್ ಫೆಬ್ರವರಿ 21, 2021ರಂದು ಎರಡನೇ ಮಗುವಿಗೆ ಜನ್ಮ ನೀಡಿದರು.   

Written by - Yashaswini V | Last Updated : Mar 23, 2021, 01:16 PM IST
  • ಬೆಬೋ ಫೆಬ್ರವರಿ 21, 2021ರಂದು ಎರಡನೇ ಮಗುವಿಗೆ ಜನ್ಮ ನೀಡಿದರು
  • ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಕರೀನಾ ಕಪೂರ್
  • ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಫಿಟ್ನೆಸ್ ಬಗ್ಗೆ ಸಾಕಷ್ಟು ಗಮನ ಹರಿಸಿದ್ದಾರೆ
Kareena Kapoor: ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಬೆಬೋ title=
Kareena Kapoor resumes to work (Pic Courtesy: Viral Bhayani)

ಮುಂಬೈ: ಬಿ-ಟೌನ್ ಬೇಗಂ ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಎರಡನೇ ಡೆಲಿವರಿ ಬಳಿಕ ಮೊದಲ ಬಾರಿಗೆ ಶೂಟಿಂಗ್  ಸ್ಥಳಕ್ಕೆ ಹಾಜರಾದ ಕರೀನಾ ಕಪೂರ್ ಅವರನ್ನು ಕಂಡು ಬೆಬೋ ಫ್ಯಾನ್ಸ್ ಹರ್ಷ ಚಿತ್ತರಾಗಿದ್ದಾರೆ.

ವಾಸ್ತವವಾಗಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕರೀನಾ ಕಪೂರ್ ಖಾನ್ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಬೆಬೋ ಬೇಬಿ ಬ್ಲೂ ಬಣ್ಣದ ಉಡುಗೆ ಅದಕ್ಕೆ ಸರಿಹೊಂದುವ ಹೀಲ್ಡ್ ಸ್ಲಿಪ್ಪರ್ ಧರಿಸಿದ್ದರು.

ಎರಡನೇ ಮಗುವಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಸಹಜವಾಗಿ ಕರೀನಾ ಕಪೂರ್ ಖಾನ್ (Kareena Kapoor Khan) ತೂಕ ಹೆಚ್ಚಳವಾಗಿತ್ತು. ಅವರ ಇತ್ತೀಚಿನ ಫೋಟೋ ಗಮನಿಸಿದರೆ ಅವರು ತಮ್ಮ ತೂಕ ಇಳಿಸಿಕೊಳ್ಳಲು ಎಷ್ಟು ಶ್ರಮ ವಹಿಸಿದ್ದಾರೆ ಎಂಬುದು ಅವರನ್ನು ನೋಡಿದರೆ ಅರ್ಥವಾಗಲಿದೆ.

ಇದನ್ನೂ ಓದಿ - 67th National Film Awards: ನಾಲ್ಕನೇ ಬಾರಿಗೆ 'ರಾಷ್ಟ್ರ ಪ್ರಶಸ್ತಿ' ಮುಡಿಗೇರಿಸಿಕೊಂಡ ಕಂಗನಾ​ ರನೌತ್..!

ಕರೀನಾ ಕಪೂರ್ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಇಷ್ಟು ಫಿಟ್ ಆಗಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿರುವುದರ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಸ್ಪೂರ್ತಿ ಎಂದು ಹೇಳಿದರೆ ತಪ್ಪಾಗಲಾರದು.

ವಾಸ್ತವವಾಗಿ ಕರೀನಾ ಕಪೂರ್ (Kareena Kapoor) ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಫಿಟ್ನೆಸ್ ಬಗ್ಗೆ ಸಾಕಷ್ಟು ಗಮನ ಹರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಶೂಟಿಂಗ್ ಸ್ಥಳದಲ್ಲಿ ಕರೀನಾ ಅವರನ್ನು ಕಂಡು ಅವರು ತಮ್ಮ ಫಿಟ್ನೆಸ್ (Fitness) ಗಾಗಿ ಎಷ್ಟು ಶ್ರಮ ವಹಿಸಿದ್ದಾರೆ ಎಂಬುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ - National Film Awards 2021 - ರಾಷ್ಟ್ರೀಯ ಪ್ರಶಸ್ತಿ ಪಡೆದು ಭಾವುಕರಾದ Manoj Bajpayee ಹೇಳಿದ್ದೇನು ಗೊತ್ತಾ?

ಗರ್ಭದಾರಣೆ ಸಂದರ್ಭದಲ್ಲೂ ಹೆರಿಗೆ ಸಮಯದವರೆಗೂ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಕರೀನಾ ಕಪೂರ್ ಖಾನ್ ಡೆಲಿವರಿ ಆದ ತಿಂಗಳಲ್ಲಿ ಕೆಲಸಕ್ಕೆ ಹಾಜರಾಗಿರುವುದು ಅವರ ವೃತ್ತಿ ನಿಷ್ಠೆಗೆ ಸ್ಪಷ್ಟ ಉದಾಹರಣೆಯಾಗಿದೆ. ಜೊತೆಗೆ ಬಹಳಷ್ಟು ಮಂದಿಗೆ ಸ್ಪೂರ್ತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News