Google's Most Searched Movies: 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳು ಇವೇ ನೋಡಿ

Most Searched Movies 2022: 2022ನೇ ವರ್ಷದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳು ಜನಮನ ರಂಜಿಸಿದವು. ಅದರಲ್ಲೂ ಕನ್ನಡ ಚಿತ್ರರಂಗದ ಹಲವಾರು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದವು.

Written by - Puttaraj K Alur | Last Updated : Dec 7, 2022, 05:27 PM IST
  • 2022ನೇ ವರ್ಷದಲ್ಲಿ ಗೂಗಲ್‍ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳು ಯಾವವು ಗೊತ್ತಾ..?
  • ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕೆಜಿಎಫ್-2, ಕಾಂತಾರ ಕನ್ನಡ ಸಿನಿಮಾಗಳು
  • ಸೂಪರ್ ಡೂಪರ್ ಹಿಟ್ ಆದ ಸಿನಿಮಾಗಳ ಬಗ್ಗೆ ಅತಿಹೆಚ್ಚು ಹುಡುಕಾಟ ನಡೆಸಿರುವ ಸಿನಿಪ್ರೇಮಿಗಳು
Google's Most Searched Movies: 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳು ಇವೇ ನೋಡಿ title=
Most Searched Movies 2022

ನವದೆಹಲಿ: ಕೊರೊನಾ ಲಾಕ್‌ಡೌನ್‍ನಿಂದ 2 ವರ್ಷಗಳ ಕಾಲ ಥಿಯೇಟರ್‍ಗಳು ಖಾಲಿಖಾಲಿಯಾಗಿದ್ದವು. ಕೊರೊನಾ ವೈರಸ್ ಮಹಾಮಾರಿಯ ಆತಂಕದಿಂದ ಜನರು ಚಿತ್ರಮಂದಿಗಳತ್ತ ಮುಖ ಮಾಡಿರಲಿಲ್ಲ. ಆದರೆ ಸಿನಿಮಾ ಪ್ರೇಮಿಗಳಿಗೆ 2022ನೇ ವರ್ಷ ಅತ್ಯಂತ ರೋಮಾಂಚಕಾರಿಯಾಗಿತ್ತು. ಥಿಯೇಟರ್‍ಗಳಿಂದ ದೂರವಿದ್ದ ಸಿನಿಪ್ರೇಮಿಗಳು ತಮ್ಮ ನೆಚ್ಚಿನ ತಾರೆಯರ ಸಿನಿಮಾಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

2022ನೇ ವರ್ಷದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳು ಜನಮನ ರಂಜಿಸಿದವು. ಅದರಲ್ಲೂ ಕನ್ನಡ ಚಿತ್ರರಂಗದ ಹಲವಾರು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದವು. ಕೆಜಿಎಫ್-2 ಮತ್ತು ಕಾಂತಾರ ದೇಶ-ವಿದೇಶಗಳ ಸಿನಿಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ಸಿಯಾದವು. ಅಲ್ಲದೇ ಈ ಸಿನಿಮಾಗಳು ಯಾರೂ ಊಹಿಸದ ರೀತಿಯಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ತಮ್ಮ ನೆಚ್ಚಿನ ನಟ-ನಟರು ಮತ್ತು ಸಿನಿಮಾಗಳ ಬಗ್ಗೆ ಸಿನಿಪ್ರೇಮಿಗಳು ಹೆಚ್ಚು ಗೂಗಲ್‍ನಲ್ಲಿ ಹುಟುಕಾಟ ನಡೆಸುತ್ತಾರೆ. ಅದರಂತೆ 2022ರಲ್ಲಿ ಗೂಗಲ್‍ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಇದನ್ನೂ ಓದಿ: BBK9 : ದೊಡ್ಮನೆಯಲ್ಲಿ ಬಿಗ್‌ ಫೈಟ್‌! ಕೈ - ಕೈ ಮಿಲಾಯಿಸಿದ ಸ್ಪರ್ಧಿಗಳು!?

2022ರ ಗೂಗಲ್‌ನ ಅತಿ ಹೆಚ್ಚು ಹುಡುಕಿದ ಸಿನಿಮಾಗಳು

ಇಡೀ ಜಗತ್ತಿನ ಜನರೇ 2022ಕ್ಕೆ ವಿದಾಯ ಹೇಳಲು ಸಿದ್ಧತೆ ನಡೆಸಿದ್ದಾರೆ. 2023ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದೆ.  ಪ್ರತಿವರ್ಷವೂ Googleನಲ್ಲಿ ಅತಿಹೆಚ್ಚು ಹುಡುಕಿದ ವಿಷಯಗಳ ಬಗ್ಗೆ ಜನರಿಗೆ ಇನ್ನಿಲ್ಲದ ಕುತೂಹಲವಿರುತ್ತದೆ. ಅದೇ ರೀತಿ ಗೂಗಲ್ ಸರ್ಚ್ ಇಂಜಿನ್‍ನಲ್ಲಿ ಈ ವರ್ಷ ಯಾವ ಸಿನಿಮಾಗಳ ಬಗ್ಗೆ ಅತಿಹೆಚ್ಚು ಹುಡುಕಲಾಗಿದೆ? ಇದರ ಸಂಪೂರ್ಣ ಮಾಹಿತಿಯನ್ನು ನಾವು ಇಂದು ನಿಮ್ಮ ಮುಂದೆ ಇಡಲಿದ್ದೇವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರದಿಂದ ದಕ್ಷಿಣದ ಬ್ಲಾಕ್ಬಸ್ಟರ್‍ಗಳಾದ  ಕೆಜಿಎಫ್ ಮತ್ತು ಕಾಂತಾರವರೆಗೆ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

1) ಬ್ರಹ್ಮಾಸ್ತ್ರ: ಭಾಗ 1 - ಶಿವ

2) ಕೆಜಿಎಫ್ - 2

3) ಕಾಶ್ಮೀರ ಫೈಲ್ಸ್

4) RRR

5) ಕಾಂತಾರ

6) ಪುಷ್ಪ: ದಿ ರೈಸ್

7) ವಿಕ್ರಮ್

8) ಲಾಲ್ ಸಿಂಗ್ ಚಡ್ಡಾ

9) ದೃಶ್ಯಂ - 2

10) ಥಾರ್: ಲವ್ ಅಂಡ್ ಥಂಡರ್

2022ರ ಗೂಗಲ್‌ನ ಅತಿಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳ ಪಟ್ಟಿಯಲ್ಲಿ ಬ್ರಹ್ಮಾಸ್ತ್ರ ಅಗ್ರಸ್ಥಾನದಲ್ಲಿದೆ. ಇನ್ನು ರಾಕಿಮಗ್ ಸ್ಟಾರ್ ಯಶ್ ಅವರ ಕೆಜಿಎಫ್ - 2 ಮತ್ತು ಕಾಶ್ಮೀರ ಫೈಲ್ ಸಿನಿಮಾಗಳ ಬಗ್ಗೆಯೂ ಹೆಚ್ಚಿನ ಜನರು ಹುಡುಕಾಟ ನಡೆಸಿದ್ದಾರೆ. 4ನೇ ಸ್ಥಾನದಲ್ಲಿ RRR ಇದ್ದು, ಇದು ಇತ್ತೀಚೆಗ್ಟೇ ಜಪಾನಿನಲ್ಲಿ ಬಿಡುಗಡೆಯಾಗಿದೆ. ತುಳು ನಾಡಿನ ದೈವಗಳ ಆರಾಧನೆ ಆಧರಿತ ರಿಷಬ್ ಶೆಟ್ಟಿಯವರ ‘ಕಾಂತಾರ’ ಈ ವರ್ಷ ಸಖತ್ ಸೌಂಡ್ ಮಾಡಿದ ಸಿನಿಮಾ. ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಗಳಿಕೆ ಮಾಡಿರುವ ಈ ಸಿನಿಮಾ ಇತ್ತೀಚೆಗಷ್ಟೇ Amazon Primeನಲ್ಲಿ ಬಿಡುಗಡೆಯಾಗಿದ್ದು, Netflixನಲ್ಲಿಯೂ ಸಹ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Haripriya - Vasishta : ಮುದ್ದಾದ ನಾಯಿ ಮರಿ ವಿಡಿಯೋ ಶೇರ್ ಮಾಡಿ Love story ಹೇಳಿದ ʻಸಿಂಹಪ್ರಿಯೆʼ 

ಅಲ್ಲು ಅರ್ಜುನ್ ಅವರ ಪುಷ್ಪ 2021ರ ಕೊನೆಯಲ್ಲಿ ಬಿಡುಗಡೆಯಾಯಿತು ಆದರೆ ರಷ್ಯಾದಲ್ಲಿ ಬಿಡುಗಡೆಯಾದ ನಂತರ ಈ ಸಿನಿಮಾ ಮತ್ತೆ ದೊಡ್ಡ ಸದ್ದು ಮಾಡಿತ್ತು. ಕಮಲ್ ಹಾಸನ್ ಅವರ ವಿಕ್ರಮ್ ತಮಿಳು ಚಲನಚಿತ್ರೋದ್ಯಮದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಯಿತು. ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ವಿವಾದಕ್ಕೆ ಗುರಿಯಾಗಿ ಬಾಕ್ಸ್ ಆಫೀಸ್‍ನಲ್ಲಿ ಸೋಲು ಕಾಣಬೇಕಾಯಿತು. ಅಜಯ್ ದೇವಗನ್ ಅವರ ಬಾಲಿವುಡ್ ಸಿನಿಮಾ ದೃಶ್ಯಂ – 2 ಮತ್ತು ಬಾಲಿವುಡ್ ನಟ ಕ್ರಿಸ್ ಹೆಮ್ಸ್‌ವರ್ತ್ ನಟನೆಯ ಥಾರ್: ಲವ್ ಅಂಡ್ ಥಂಡರ್ ಸಿನಿಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಸಿನಿಮಾಗಳಾಗಿವೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News