ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯಾ ಶಾ-ವರುಣ್‌

ವರುಣ್‌ ಮದುವೆ ಸಂದರ್ಭದಲ್ಲಿ ಅವರ ತಂದೆ ಮಂಜುನಾಥ್ ನಿಧನರಾದ್ರು. ಈ ಕಾರಣದಿಂದ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ನಡೆಯಬೇಕಿದ್ದ ವರುಣ್‌ ಹಾಗೂ ಕಾವ್ಯಾ ಶಾ ಮದುವೆಯನ್ನು ಎರಡೂ  ಕುಟುಂಬದರು ಸೇರಿ ಮುಂದಕ್ಕೆ ಹಾಕಿದ್ರು.

Written by - CHARITHA PATEL | Edited by - Bhavishya Shetty | Last Updated : Jun 10, 2022, 03:02 PM IST
  • ನಟಿ ಕಾವ್ಯಾ ಶಾ ಹಾಗೂ ವರುಣ್‌ ಮದುವೆ
  • ಈ ಹಿಂದೆ ಮುಂದೂಡಿಕೆಯಾಗಿದ್ದ ವಿವಾಹ ಸಮಾರಂಭ
  • ಸ್ಯಾಂಡಲ್‌ವುಡ್‌ ಗಣ್ಯರು ಭಾಗಿ
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯಾ ಶಾ-ವರುಣ್‌ title=
Kavya Shah Marriage

ನಟಿ ಕಾವ್ಯಾ ಶಾ ಹಾಗೂ ವರುಣ್‌ ಕುಮಾರ್‌ ಗೌಡ ಅವರು ನಿನ್ನೆಯಷ್ಟೇ ಅದ್ದೂರಿಯಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾವ್ಯ ಹಾಗೂ ವರುಣ್‌ ಮದುವೆ ಏಪ್ರಿಲ್‌ ತಿಂಗಳಲ್ಲೇ ನಡೆಯಬೇಕಿತ್ತು. ಆದ್ರೆ ಮದುವೆಯ ಸಂಭ್ರಮದಲ್ಲಿ ಒಂದು ಕೆಟ್ಟ ಘಟನೆ ನಡೆದು ಈ ಮುದ್ದು ಜೋಡಿಯ ಮದುವೆ ಮುಂದೂಡಲಾಗಿತ್ತು.

ಇದನ್ನೂ ಓದಿ: ಲಾಂಗ್ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬಂದ್ರು ನಟಿ ಕಾವ್ಯಾ..!

ಹೌದು, ವರುಣ್‌ ಮದುವೆ ಸಂದರ್ಭದಲ್ಲಿ ಅವರ ತಂದೆ ಮಂಜುನಾಥ್ ನಿಧನರಾದ್ರು. ಈ ಕಾರಣದಿಂದ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ನಡೆಯಬೇಕಿದ್ದ ವರುಣ್‌ ಹಾಗೂ ಕಾವ್ಯಾ ಶಾ ಮದುವೆಯನ್ನು ಎರಡೂ  ಕುಟುಂಬದರು ಸೇರಿ ಮುಂದಕ್ಕೆ ಹಾಕಿದ್ರು.

ಏಪ್ರಿಲ್‌ ತಿಂಗಳಲ್ಲಿ ನಡೆಯಬೇಕಿದ್ದ ಮದುವೆ ಇದೀಗ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿ ಹಾಗೂ ಶಾಸ್ತ್ರೋಕ್ತವಾಗಿ ನಡೆದಿದೆ. ಇನ್ನು ಕಾವ್ಯಾ ಶಾ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್‌ಗಳ ಜೊತೆಗೆ ಒಂದಿಷ್ಟು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ಮದುವೆಗೆ ಸ್ಯಾಂಡಲ್‌ವುಡ್‌ ಮಂದಿ ಕೂಡ ಸಾಕ್ಷಿಯಾಗಿದ್ದು, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಲೂಸ್ ಮಾದ ಯೋಗಿ, ಧನಂಜಯ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವು ತಾರೆಯರು ಆಗಮಿಸಿ ನವಜೋಡಿಗೆ ಶುಭ ಕೋರಿದ್ರು. 

ಇನ್ನು ಈ ಜೋಡಿ ಬಗ್ಗೆ ಹೇಳೋದಾದ್ರೆ, ಕಾವ್ಯಾ ಹಾಗೂ ವರುಣ್‌ ಅವರದ್ದು ಲವ್ ಕಮ್‌ ಅರೇಂಜ್‌ ಮ್ಯಾರೇಜ್‌. ವರುಣ್‌ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ೧೧ ವರ್ಷಗಳ ಹಿಂದೆ ಬ್ಯೂಟಿ ಪೀಜೆಂಟ್‌ ಒಂದರಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅದೂ ಒಬ್ಬರನ್ನೊಬ್ಬರು ಬಿಟ್ಟು ಇರದಷ್ಟು ಹತ್ತಿರ ಆಗಿದ್ರು. ಈ ಪರಸ್ಪರ ಒಡನಾಟ, ಹೊಂದಾಣಿಕೆಯಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ಅವರಿಬ್ಬದ ನಡುವೆ ಅರಳಿದ  ಪ್ರೀತಿಯನ್ನು ಇಬ್ಬರೂ ಕೂಡ ತಮ್ಮ ತಮ್ಮ ಮನೆಯಲ್ಲಿ ಹೇಳಿದ್ರು. ಮನೆಯವರೂ ಕೂಡ ಕಿದಕ್ಕೆ ಒಪ್ಪಿಗೆ ನೀಡಿದ್ರು. ಸಸತ 10 ವರ್ಷಗಳ ಈ ಜೋಡಿಯ ಪ್ರೀತಿಗೆ ಮದುವೆಯ ಅಧಿಕೃತ ಮುದ್ರೆ ಬಿದ್ದಿದೆ. 

ಇನ್ನು ಹಿರಿಯ ನಟ ನಾಗೇಂದ್ರ ಶಾ ಅವರ ಪುತ್ರಿ ಕಾವ್ಯಾ ಶಾ ಒಂದಿಷ್ಟು ದಿನಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡ್ರು. ಕಾವ್ಯಾ ಶಾ ಕನ್ನಡದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ಮುಗಿಲ್ ಪೇಟೆ’‘ಮೂಕಜ್ಜಿಯ ಕನಸು’ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ‘ಚಿ ಸೌ ಸಾವಿತ್ರಿ’, ‘ಬಂಗಾರ’ ಧಾರಾವಾಹಿಗಳಲ್ಲೂ ಕಾವ್ಯಾ ಶಾ ನಟಿಸಿದ್ದಾರೆ. ಕಾವ್ಯಾ ಶಾ ಸೂಪರ್‌ ಡ್ಯಾನ್ಸರ್‌ ಕೂಡ ಹೌದು. ಒಂದಿಷ್ಟು ಡಾನ್ಸಿಂಗ್‌ ರಿಯಾಲಿಟಿ ಶೋಗಳಲ್ಲಿ ಕಾವ್ಯಾ ಶಾ ಸ್ಪರ್ಧೆ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರ ಭಾಷೆಯಲ್ಲೂ ಕಾವ್ಯಾ ಶಾ ಬಣ್ಣ ಹಚ್ಚಿದ್ದು, ಒಂದಿಷ್ಟು ಅವಾರ್ಡ್‌ಗಳನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಹೆಲ್ತ್ ಕೋಚ್ ಆಗಿಯೂ, ನಿರೂಪಕಿಯಾಗಿಯೂ ಕಾವ್ಯಾ ಶಾ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀನಿವಾಸ್ ಗೌಡ ಅಡ್ಡಮತದಾನ: ಮಾನಮರ್ಯಾದೆ ಇದ್ದರೆ ರಾಜಕಾರಣ ಮಾಡಲಿ ಎಂದು ಎಚ್‌ಡಿಕೆ ಆಕ್ರೋಶ

ಸದ್ಯ ಕಾವ್ಯಾ ಹಾಗೂ ವರುಣ್‌ ಅವರ ಮದುವೆಯ ಫೋಟೋಗಳು ಎಲ್ಲೆಡೆ ಹರಿದಾಡ್ತಾಯಿದ್ದು, ಸಪ್ತಪದಿ ತುಳಿದಿರುವ ಈ ನವ ಜೋಡಿಗೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News