'Jugni 2.0' ಮೂಲಕ ಇಂಟರ್ನೆಟ್ ಮೇಲೆ ಭಾರಿ ಹವಾ ಸೃಷ್ಟಿಸಿದ Kanika Kapoor

Kanika Kapoor Jugni Album: ಬಾಲಿವುಡ್ ಗೆ ಅನೇಕ ಹಿಟ್ ಸಾಂಗ್ ಗಳನ್ನು ಕನಿಕಾ ನೀಡಿದ್ದಾರೆ. ಈ ಹಾಡುಗಳಲ್ಲಿ ಅವರ 'ಬೇಬಿ ಡಾಲ್' ಹಾಡು ಕೂಡ ಶಾಮೀಲಾಗಿದ್ದು, ಈ ಹಾಡಿಗೆ ಕನಿಕಾ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಲಭಿಸಿದೆ.

Written by - Nitin Tabib | Last Updated : Dec 25, 2020, 08:22 PM IST
  • ಬಾಲಿವುಡ್ ನಲ್ಲಿ ಕನಿಕಾ ಹಲವು ಹಿಟ್ ಸಾಂಗ್ ಗಳನ್ನು ನೀಡಿದ್ದಾರೆ.
  • ಇವುಗಳಲ್ಲಿ ಬೇಬಿ ಡಾಲ್, ಚಿಟ್ಟಿಯಾ ಕಲಾಯಿಯಾ' ಗಳಂತಹ ಹಾಡುಗಳು ಕೂಡ ಶಾಮೀಲಾಗಿವೆ.
  • ಬೇಬಿ ಡಾಲ್ ಹಾಡಿಗೆ ಅವರು ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಬಾಚಿಕೊಂಡಿದ್ದಾರೆ.
'Jugni 2.0' ಮೂಲಕ ಇಂಟರ್ನೆಟ್ ಮೇಲೆ ಭಾರಿ ಹವಾ ಸೃಷ್ಟಿಸಿದ  Kanika Kapoor title=
Kanika Kapoor Jugni Album

ನವದೆಹಲಿ: Kanika Kapoor Jugni Album: ಕೊರೊನಾ ಸೋಂಕನ್ನು ಸೋಲಿಸಿದ ಮೊದಲ ಸೆಲಿಬ್ರಿಟಿ ಕನಿಕಾ ಕಪೂರ್ ಇತ್ತೀಚಿಗೆ ಇಂಟರ್ನೆಟ್ ಮೇಲೆ ಭಾರಿ ಹವಾ ಸೃಷ್ಟಿಸಿದ್ದಾರೆ. ಹೌದು, ಈ ಬಾರಿ ಕನಿಕಾ ಇಂಟರ್ನೆಟ್ ಮೇಲೆ ಭಾರಿ ಹೆಡ್ಲೈನ್ ಗಿಟ್ಟಿಸಿದ್ದು 'ಜುಗ್ನಿ 2.0' ಅಲ್ಬಮ್ ಮೂಲಕ. ಕನಿಕಾ ಕಪೂರ್ ಅವರ ಈ ಅಲ್ಬಮ್ ಝೀ ಮ್ಯೂಸಿಕ್ ನ ಯುಟ್ಯೂಬ್ ಚಾನೆಲ್ ಮೇಲೆ ಬಿಡುಗಡೆಯಾಗಿದೆ. ಇದನ್ನು ಇದುವರೆಗೆ 60 ಲಕ್ಷಕ್ಕೂ ಅಧಿಕ ಜನರು ವಿಕ್ಷೀಸಿದ್ದಾರೆ. ಇದಕ್ಕೂ ಮೊದಲು ಕೂಡ ಕನಿಕಾ 'ಜುಗ್ನಿ ಜೀ' ಹಾಡಿಗೆ ತಮ್ಮ ಧ್ವನಿ ನೀಡಿದ್ದರು. ಇಂದಿಗೂ ಕೂಡ ಆ ಹಾಡು ಪ್ರಚಲಿತದಲ್ಲಿದೆ.

ಇದನ್ನು ಓದಿ- ಗ್ಯಾಸ್ ಲೀಕ್ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ Trollಗೆ ಒಳಕಾದ ಕನಿಕಾ ಕಪೂರ್

ದೇಶದಲ್ಲಿ ಕೊರೊನಾ ಪ್ರವೇಶಿಸಿದ ಆರಂಭಿಕ ದಿನಗಳಲ್ಲಿ ಕನಿಕಾ (Kanika Kapoor) ಕೂಡ ಕೊರೊನಾ ಸೋಂಕಿಗೆ ತುತ್ತಾದ ಸುದ್ದಿಗಳು ಪ್ರಕಟಗೊಂಡಿದ್ದವು. ತಮಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ  ಕನಿಕಾಗೆ ಗೊತ್ತಾಗುವ ಮೊದಲು ಅವರು ಒಂದು ವಿವಾಹ ಸಮಾರಂಭ ಸೇರಿದಂತೆ ಒಂದೆರಡು ವಿವಿಐಪಿ ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೊರೊನಾ ಸೂಪರ್ ಸ್ಪ್ರೆಡರ್ ಎಂದು ಭಾವಿಸಲಾಯಿತು ಹಾಗೂ ಇಡೀ ದೇಶಾದ್ಯಂತ ಅವರ ವಿರುದ್ಧ ಕ್ರೋಧ ವ್ಯಕ್ತವಾಗಿತ್ತು.

ಇದನ್ನು ಓದಿ- ಆತ್ಮಹತ್ಯೆಗೆ ಮುಂದಾಗಿದ್ದಳಂತೆ KANIKA KAPOOR, ಕಾರಣ ಇಲ್ಲಿದೆ

ಕನಿಕಾ ಬಾಲಿವುಡ್ ಗೆ ಹಲವು ಸುಪ್ರಸಿದ್ಧ ಹಾಡುಗಳನ್ನು ನೀಡಿದ್ದಾರೆ. ಅವುಗಳಲ್ಲಿ 'ಬೇಬಿ ಡಾಲ್' ಹಾಡೂ ಕೂಡ ಶಾಮೀಲಾಗಿದೆ. ಈ ಹಾಡಿಗೆ ಅವರಿಗೆ ಅತ್ಯುತ್ತಮ ಮಹಿಳಾ ಪ್ಲೇ ಬ್ಯಾಕ್ ಸಿಂಗರ್ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಲಭಿಸಿದೆ. ಇದಲ್ಲದೆ 'ಚಿಟ್ಟಿಯಾ ಕಲಾಯಿಯಾ', 'ಡಾ ಡಾ ಡಸ್ಸೆ' ಇತ್ಯಾದಿ ಸುಪ್ರಸಿದ್ಧ ಹಾಡುಗಳಿಗೂ ಕೂಡ ತಮ್ಮ ಧ್ವನಿ ನೀಡಿದ್ದಾರೆ. ತರುಣರಲ್ಲಿ ಅವರ ಹಾಡುಗಳು ಇಂದಿಗೂ ಕೂಡ ಫೇಮಸ್ ಆಗಿವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News