ಚಡ್ಡಿ ಹಾಕ್ಕೊಂಡು ದೇವಸ್ಥಾನಕ್ಕೆ ಬಂದ ಯವತಿಗೆ ಬಿಟೌನ್‌ ಕ್ವೀನ್‌ ಕ್ಲಾಸ್‌..!

Kangana Ranaut slams girls : ದೇವಸ್ಥಾನಕ್ಕೆ ತುಂಡು ಬಟ್ಟೆ ತೊಟ್ಟು ಬಂದ ಯುವತಿಯರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಕಿಡಿಕಾರಿದ್ದಾರೆ. ಅಲ್ಲದೆ, ಧಾರ್ಮಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾದ ವೇಷಭೂಷಣದ ನಿಯಮಗಳನ್ನು ರೂಪಿಸುವಂತೆ ಒತ್ತಾಯಿಸಿದ್ದಾರೆ.

Written by - Krishna N K | Last Updated : May 26, 2023, 03:35 PM IST
  • ತುಂಡು ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಬಂದ ಯುವತಿ.
  • ಯುವತಿಯ ವೇಣಭೂಷಣ ನೋಡಿ ಗರಂ ಆದ ನಟಿ ಕಂಗನಾ.
  • ದೇವಸ್ಥಾನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ರಣಾವತ್‌ ಒತ್ತಾಯ.
ಚಡ್ಡಿ ಹಾಕ್ಕೊಂಡು ದೇವಸ್ಥಾನಕ್ಕೆ ಬಂದ ಯವತಿಗೆ ಬಿಟೌನ್‌ ಕ್ವೀನ್‌ ಕ್ಲಾಸ್‌..!  title=

Kangana Ranaut : ಧಾರ್ಮಿಕ ಸ್ಥಳದಲ್ಲಿ ಸಣ್ಣ ಉಡುಪುಗಳನ್ನು ಧರಿಸಿರುವ ಹುಡುಗಿಯರ ಬಗ್ಗೆ ಕಂಗನಾ ರಣಾವತ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ದೇಗುಲಕ್ಕೆ ತುಂಡು ಬಟ್ಟೆಗಳನ್ನು ಧರಿಸಿ ಬಂದ ಯುವತಿಯರನ್ನು ಮೂರ್ಖರು ಎಂದು ಕರೆದಿದ್ದಾರೆ. ಅಲ್ಲದೆ, ಧಾರ್ಮಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾದ ವೇಷಭೂಷಣದ ನಿಯಮಗಳನ್ನು ರೂಪಿಸುವಂತೆ ಒತ್ತಾಯ ಮಾಡಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು ಹಿಮಾಚಲ ಪ್ರದೇಶದ ದೇವಸ್ಥಾನಕ್ಕೆ ತುಂಡು ಬಟ್ಟೆ ತೊಟ್ಟು ಬಂದ ಯುವತಿಯರ ಫೋಟೋಗಳನ್ನು ಹಂಚಿಕೊಂಡಿದ್ದರು. ಸಧ್ಯ ಸ್ಲೀವ್‌ಲೆಸ್ ಕ್ರಾಪ್ ಟಾಪ್‌ ಧರಿಸಿ ದೇಗುಲಕ್ಕೆ ಬಂದ ಯವತಿಗೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ವ್ಯಾಟಿಕನ್‌ಗೆ ಹೋಗಿದ್ದಾಗ ಅವರಿಗಾಗದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ದೇವಾಲಯಗಳಲ್ಲಿ ವೇಷಭೂಷಣದ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.  

ಇದನ್ನೂ ಓದಿ: ಪವಿತ್ರಾ ನರೇಶ್‌ ʼಮತ್ತೆ ಮದುವೆʼಗೆ ವಿಘ್ನ : ಕೋರ್ಟ್‌ ಮೆಟ್ಟಿಲೇರಿದ ರಮ್ಯಾ ರಘುಪತಿ

ಈ ಕುರಿತು ಕಂಗನಾ ರಣಾವತ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಸುದೀರ್ಘ ಬರವಣಿಗೆ ಬರೆದುಕೊಂಡಿದ್ದಾರೆ. ಇವು ಪಾಶ್ಚಿಮಾತ್ಯ ಬಟ್ಟೆಗಳು, ಬಿಳಿಯರಿಂದ ಆವಿಷ್ಕರಿಸಲಾಗಿವೆ ಮತ್ತು ಅವರಿಂದ ಪ್ರಚಾರ ಮಾಡಲಾಗಿದೆ. ನಾನು ಒಮ್ಮೆ ವ್ಯಾಟಿಕನ್‌ನಲ್ಲಿ (ರೋಮ್‌ನ ಒಂದು ಸಿಟಿ, ಚರ್ಚ್‌ಗಳು ಹೆಚ್ಚಾಗಿವೆ, ಉದಾ- ರೋಮನ್ ಕ್ಯಾಥೋಲಿಕ್ ಚರ್ಚ್) ಶಾರ್ಟ್ಸ್ ಮತ್ತು ಟೀ-ಶರ್ಟ್ ಧರಿಸಿದ್ದೆ, ನನಗೆ ಆವರಣಕ್ಕೆ ಸಹ ಅನುಮತಿಸಲಿಲ್ಲ, ನಾನು ಅಲ್ಲಿಂದ ಹಿಂತಿರುಗಿ ಹೋಗಿ, ಹೊಟೇಲ್‌ನಲ್ಲಿ ಬಟ್ಟೆ ಬದಲಿಸಿಕೊಂಡು ಬಂದೆ ಎಂದು ತಿಳಿಸಿದರು.

ಇನ್ನು ಯುವತಿಯ ಬಟ್ಟೆಯ ವಿಚಾರವಾಗಿಇ ಮಾತನಾಡಿರುವ ಕಂಗನಾ, ರಾತ್ರಿ ಧರಿಸುವ ಬಟ್ಟೆಗಳನ್ನು ಕ್ಯಾಶುಯಲ್‌ಗಳಂತೆ ಧರಿಸುವ ಈ ಸೋಮಾರಿಗಳು ಮೂರ್ಖರು, ಇಂತಹವರಿಗೆ ಕಠಿಣ ನಿಯಮಗಳು ಇರಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಕಂಗನಾ ಹೇಳಿಕೆಗೆ ನೆಟ್ಟಿಗರು ಬೆಂಬಲ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕಂಗನಾ ಕೇರಳ ಸ್ಟೋರಿ ಚಿತ್ರದ ಬಗ್ಗೆ ಮಾತನಾಡಿದ್ದರು. ಚಿತ್ರದ ವಿರುದ್ಧ ಯಾರೇ ಮಾತನಾಡಿದರೂ ಸಹ ಅವರು ಭಯೋತ್ಪಾದಕರು ಎಂದು ಅವರು ಕಿಡಿಕಾರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News