ಸೈಫ್ ಅಲಿ ಖಾನ್ ಜೊತೆ 'ಪಂಗಾ'ಗಿಳಿದ ಕಂಗನಾ ರಣಾವತ್

ಒಂದು ಕಾಲದಲ್ಲಿ  ಒಕ್ಕೂಟವಾಗಿದ್ದ ಯುರೋಪ್ ನಲ್ಲಿಯೂ ಕೂಡ ಹಲವು ವಿಭಜನೆಗಳನ್ನು ಮಾಡಲಾಗಿದೆ. ಇದರಿಂದ ಸಿಕ್ಕಿದ್ದಾದರೂ ಏನು? ಇದೀಗ ಕೆಲ ಜನರು ಭಾರತವೇ ಇರಲಿಲ್ಲ. ಭಾರತ ಹಲವು ಭಾಗಗಳಲ್ಲಿ ವಿಭಜನೆಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ 3 ಭಾಗಗಳಾಗಿ ಭಾರತ ವಿಭಜನೆಗೊಂಡಿದ್ದು, ಅದನ್ನು ಜನರು ಇಂದಿಗೂ ಮರೆಯುತ್ತಿಲ್ಲ ಮತ್ತು ಅದರ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದಾರೆ ಎಂದು ಕಂಗನಾ ಹೇಳಿದ್ದಾರೆ.

Last Updated : Jan 22, 2020, 01:38 PM IST
ಸೈಫ್ ಅಲಿ ಖಾನ್ ಜೊತೆ 'ಪಂಗಾ'ಗಿಳಿದ ಕಂಗನಾ ರಣಾವತ್ title=

ನವದೆಹಲಿ: ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚೆಗೆ 'ತಾನಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರಕ್ಕೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ. 'ತಾನಾಜಿ:ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ಇತಿಹಾಸದ ಸಂಗತಿಗಳನ್ನು ತಿರುಚಲಾಗಿದ್ದು, ಇದು ತುಂಬಾ ಘಾತಕವಾಗಿದೆ ಎಂದಿದ್ದಾರೆ. ಜೊತೆಗೆ ಭಾರತದ ಸದ್ಯದ ಭಾರತದ ಪರಿಕಲ್ಪನೆ ಬ್ರೀಟಿಷರು ನೀಡಿದ್ದು, ಮೊದಲು ಭಾರತಕ್ಕೆ ಯಾವುದೇ ಪರಿಕಲ್ಪನೆ ಇರಲಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದರು. ಭಾರತದ ಅಸ್ತಿತ್ವವನ್ನು ಪ್ರಶ್ನಿಸಿದ ಸೈಫ್ ಅಲಿ ಖಾನ್ ಇದೀಗ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ.

ಪ್ರತಿಯೊಂದು ವಿಷಯದ ಮೇಲೆ ದಿಟ್ಟ ಪ್ರತಿಕ್ರಿಯೆ ನೀಡಲು ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಸೈಫ್ ಹೇಳಿಕೆಗೆ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಸೈಫ್ ಅಲಿ ಖಾನ್ ನೀಡಿರುವ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ ಎಂದು ಕಂಗನಾ ಹೇಳಿದ್ದು,  ಭಾರತವೇ ಇರದಿದ್ದರೆ 5000 ವರ್ಷಗಳ ಇತಿಹಾಸ ಹೊಂದಿರುವ 'ಮಹಾಭಾರತ' ಮಹಾಕಾವ್ಯ ಎಲ್ಲಿಂದ ಹುಟ್ಟಿಕೊಂಡಿತು? ವೇದವ್ಯಾಸರು ಬರೆದ ಈ ಮಹಾಕಾವ್ಯ ಎಲ್ಲಿಂದ ಬಂತು? ಇದು ಕೆಲವೇ ಕೆಲ ಜನರ ಅಭಿಪ್ರಾಯವಾಗಿದ್ದು, ಮಹಾಭಾರತದಲ್ಲಿ ಶ್ರೀಕೃಷ್ಣ ಕೂಡ ಇದ್ದರು, ಭಾರತ ಒಂದು ಮಹಾನ್ ರಾಷ್ಟ್ರವಾಗಿದೆ ಮತ್ತು ಭಾರತದ ಮಹಾನ್ ರಾಜರು ಇತಿಹಾಸದ ಮಹಾ ಯುದ್ಧಗಳನ್ನು ನಡೆಸಿದ್ದಾರೆ.

ಒಂದು ಕಾಲದಲ್ಲಿ ಒಕ್ಕೂಟವಾಗಿದ್ದ ಯುರೋಪ್ ನಲ್ಲಿಯೂ ಕೂಡ ಹಲವು ವಿಭಜನೆಗಳನ್ನು ಮಾಡಲಾಗಿದೆ. ಇದರಿಂದ ಸಿಕ್ಕಿದ್ದಾದರೂ ಏನು? ಇದೀಗ ಕೆಲ ಜನರು ಭಾರತವೇ ಇರಲಿಲ್ಲ. ಭಾರತ ಹಲವು ಭಾಗಗಳಲ್ಲಿ ವಿಭಜನೆಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ 3 ಭಾಗಗಳಾಗಿ ಭಾರತ ವಿಭಜನೆಗೊಂಡಿದ್ದು, ಅದನ್ನು ಜನರು ಇಂದಿಗೂ ಮರೆಯುತ್ತಿಲ್ಲ ಮತ್ತು ಅದರ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದಾರೆ ಎಂದು ಕಂಗನಾ ಹೇಳಿದ್ದಾರೆ.

ಅತ್ತ ಇನ್ನೊಂದೆಡೆ ಬಿಜೆಪಿ ಮುಖಂಡೆ ಮೀನಾಕ್ಷಿ ಲೇಖಿ ಕೂಡ ಸೈಫ್ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಫ್ ಹೇಳಿಕೆಗೆ ಟ್ವೀಟ್ ಮಾಡಿರುವ ಲೇಖಿ, "ತುರ್ಕಿ ಜನರು ಕೂಡ ತೈಮೂರನನ್ನು ಕ್ರೂರ ದೊರೆ ಎಂದು ಭಾವಿಸುತ್ತಿದ್ದರು. ಆದರೆ, ಭಾರತದಲ್ಲಿ ಮಾತ್ರ ಕೆಲ ಜನರು ತಮ್ಮ ಮಕ್ಕಳಿಗೆ ತೈಮೂರ್ ಎಂದು ನಾಮಕರಣ ಮಾಡುತ್ತಾರೆ" ಎಂದಿದ್ದಾರೆ. 14ನೇ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ತೈಮೂರ, ದೆಹಲಿ ಹಾಗೂ ಕಾಶ್ಮೀರಗಳಲ್ಲಿ ವ್ಯಾಪಕ ದರೋಡೆ ನಡೆಸಿದ್ದ. ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ತಮ್ಮ ಪುತ್ರನಿಗೆ ತೈಮೂರ ಎಂದು ನಾಮಕರಣ ಮಾಡಿದಾಗಲೂ ಕೂಡ ವ್ಯಾಪಕ ಚರ್ಚೆಗೆ ಗುರಿಯಾಗಿದ್ದರು.

ಸೈಫ್ ಹೇಳಿರುವ ಹೇಳಿಕೆಯನ್ನು ಅಸತ್ಯ ಎಂದು ಹೇಳಿ ಕಂಗನಾ ಅವರ ಮುಂಬರುವ ಚಿತ್ರ 'ಪಂಗಾ' ಜನವರಿ 24, 2020ಕ್ಕೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಶ್ವಿನಿ ಅಯ್ಯರ್ ತಿವಾರಿ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರೆ, ಫಾಕ್ಸ್ ಸ್ಟಾರ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಕಂಗನಾ ಜೊತೆ ಜಸ್ಸಿ ಗಿಲ್, ನೀನಾ ಗುಪ್ತಾ ಹಾಗೂ ರಿಚಾ ಚಡ್ಡಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending News