Kangana Ranaut: ಲೋಕಸಭೆ ಚುನಾವಣೆ ಕಣದಲ್ಲಿ ಬಾಲಿವುಡ್ ಕ್ವೀನ್ ಕಂಗನಾ.. ಸ್ಪರ್ಧೆ ಎಲ್ಲಿಂದ ಗೊತ್ತಾ?

Kangana Ranaut in Election: ಬಾಲಿವುಡ್‌ ನಟಿ ಕಂಗನಾ ರಣಾವತ್ ಇದೀಗ ಮತ್ತೆ ಸುದ್ದಿಯಲ್ಲಿದ್ದು.. ಲೋಕಸಭೆ ಟಿಕೆಟ್ ಪಡೆದು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.. ಹಾಗಾದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವುದನ್ನು ಇದೀಗ ತಿಳಿಯೋಣ..

Written by - Savita M B | Last Updated : Mar 25, 2024, 08:53 AM IST
  • ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಚಿತ್ರದ ಫಲಿತಾಂಶಗಳನ್ನು ಲೆಕ್ಕಿಸದೆ ಸರಣಿ ಚಿತ್ರಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ
  • ಇದೀಗ ಈ ಬಾಲಿವುಡ್ ನಟಿ ಚುನಾವಣಾ ಕಣದಲ್ಲಿ ನಿಂತಿದ್ದಾರೆ.
Kangana Ranaut: ಲೋಕಸಭೆ ಚುನಾವಣೆ ಕಣದಲ್ಲಿ ಬಾಲಿವುಡ್ ಕ್ವೀನ್ ಕಂಗನಾ.. ಸ್ಪರ್ಧೆ ಎಲ್ಲಿಂದ ಗೊತ್ತಾ? title=

Bollywood Actress Kangana Ranaut: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಚಿತ್ರದ ಫಲಿತಾಂಶಗಳನ್ನು ಲೆಕ್ಕಿಸದೆ ಸರಣಿ ಚಿತ್ರಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿ, ಬಾಲಿವುಡ್ ಮಾಫಿಯಾ ಮತ್ತು ದೇಶದ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸುತ್ತಿರುವ ನಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ..  

ಇದನ್ನೂ ಓದಿ-Ravichandran Ashwin: ಚಂದನವನದ ತಾರೆಯ ನೃತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಕ್ರಿಕೇಟಿಗ ಫಿದಾ..!!

ಇದೀಗ ಈ ಬಾಲಿವುಡ್ ನಟಿ ಚುನಾವಣಾ ಕಣದಲ್ಲಿ ನಿಂತಿದ್ದಾರೆ. ಕಂಗನಾ ಅನಾದಿ ಕಾಲದಿಂದಲೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಕಾರಣ ಅವರ ಕುಟುಂಬದಲ್ಲೂ ರಾಜಕಾರಣಿಗಳಿದ್ದಾರೆ. ಇತ್ತೀಚೆಗೆ ಬಿಜೆಪಿ ಕಂಗನಾ ರಣಾವತ್‌ಗೆ ಲೋಕಸಭೆ ಟಿಕೆಟ್ ನೀಡಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಬಿಜೆಪಿ ಐದನೇ ಪಟ್ಟಿಯಲ್ಲಿ ಕಂಗನಾ ರಣಾವತ್ ಹೆಸರು ಇದೆ. ಕಂಗನಾ ತನ್ನ ತವರು ಕ್ಷೇತ್ರವಾದ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲಿದ್ದಾರೆ. ಹಲವು ವರ್ಷಗಳ ಕಾಲ ನಟಿಯಾಗಿ ಮಿಂಚಿದ್ದ ಕಂಗನಾ ಸಂಸದೆಯಾಗಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ-ವಿಶ್ವದ ದುಬಾರಿ ನಟಿ.. 7 ಜನರೊಂದಿಗೆ ವಿಚ್ಛೇದನ ಪಡೆದ ಈಕೆಯ ಬಾಯ್‌ಫ್ರೆಂಡ್‌ ಫೇಮಸ್ ಗ್ಯಾಂಗ್ ಸ್ಟರ್.!

ಬಿಜೆಪಿ ಸ್ಥಾನ ನೀಡಿದ ಬಳಿಕ ಕಂಗನಾ ಪ್ರತಿಕ್ರಿಯಿಸಿದ್ದು.. ಬಿಜೆಪಿ ರಾಷ್ಟ್ರೀಯ ನಾಯಕರು ನನಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು ಮತ್ತು ನಾನು ಹುಟ್ಟಿದ ಮಂಡಿ ಸಂಸದ ಸ್ಥಾನವನ್ನು ನನಗೆ ಹಂಚಿಕೆ ಮಾಡಿದರು. ಅವರ ನಿರ್ಧಾರಕ್ಕೆ ಬದ್ಧನಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿರುವುದು ನನಗೆ ದೊಡ್ಡ ಗೌರವವಾಗಿದೆ. ಮುಂದೆಯೂ ಬಿಜೆಪಿ ಕಾರ್ಯಕರ್ತೆಯಾಗಿ, ಸಾರ್ವಜನಿಕ ಸೇವಕಿಯಾಗಿ ಕೆಲಸ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News