Kajol And Kareena Kapoor: ನಡುರಸ್ತೆಯಲ್ಲಿಯೇ ಮುಖಾಮುಖಿಯಾದ ಕಾಜೋಲ್-ಕರೀನಾ, ಮುಂದೇನಾಯ್ತು ತಿಳಿಯಲು WATCH VIDEO

Kajol and Kareena Kapoor: ಇಬ್ಬರು ಬಾಲಿವುಡ್ ತಾರೆಯರು ರಸ್ತೆಯಲ್ಲಿ ಆಕಸ್ಮಿಕ ಭೇಟಿಯಾದಾಗ, ಯಾರೂ ಊಹಿಸದ ಸಂಗತಿಯೊಂದು ಸಂಭವಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Written by - Nitin Tabib | Last Updated : Mar 3, 2022, 08:03 PM IST
  • ನಡುಬೀದಿಯಲ್ಲಿಯೇ ಭೇಟಿಯಾದ ಕಾಜೋಲ್-ಕರೀನಾ.
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋ.
  • ಪಾಪರಾಜಿಗಳನ್ನು ಲೆಕ್ಕಿಸದೆ ಗಾಸಿಪ್ ನಡೆಸಿದ ತಾರಾಮಣಿಯರು.
Kajol And Kareena Kapoor: ನಡುರಸ್ತೆಯಲ್ಲಿಯೇ ಮುಖಾಮುಖಿಯಾದ ಕಾಜೋಲ್-ಕರೀನಾ, ಮುಂದೇನಾಯ್ತು ತಿಳಿಯಲು WATCH VIDEO title=
Kajol And Kareena Kapoor (File Photo)

ನವದೆಹಲಿ: Kajol And Kareena Kapoor Gossip Video - ಖ್ಯಾತ ಬಾಲಿವುಡ್‌ನ ನಟಿಯರಾದ ಕರೀನಾ ಕಪೂರ್ (Kareena Kapoor) ಮತ್ತು ಕಾಜೋಲ್ ಅವರು 'ಕಭಿ ಖುಷಿ ಕಭಿ ಗಮ್' ನಂತಹ ಸೂಪರ್‌ಹಿಟ್ ಚಿತ್ರದಲ್ಲಿ ಸಹೋದರಿಯರ (ಅಂಜಲಿ ಮತ್ತು ಪೂಜಾ) ಪಾತ್ರದಲ್ಲಿ ನಟಿಸಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ ಹಲವು ವರ್ಷಗಳ ನಂತರ ಇಂದು ಈ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಈ ವಿಡಿಯೋ ಯಾವುದೇ ಚಿತ್ರದದ್ದಲ್ಲ, ಯಾವುದೇ ಪಾರ್ಟಿಯ ವಿಡಿಯೋ ಅಲ್ಲ. ಇದು ಪ್ರಚಾರದ ವಿಡಿಯೋ  ಕೂಡ ಅಲ್ಲ. ವಾಸ್ತವದಲ್ಲಿ ಕರೀನಾ ಕಪೂರ್ ಮತ್ತು ಕಾಜೋಲ್ ರಸ್ತೆಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ ಮತ್ತು ನಂತರ ಏನಾಯಿತು ಎಂಬುದು ನೋಡಿದವರಿಗೆ ನಂಬಲು ಸಾಧ್ಯವಾಗುತ್ತಿಲ್ಲ.

ಪೂ ಮತ್ತು ಅಂಜಲಿ ತೀವ್ರ ಗಾಸಿಪ್ ನಡೆಸಿದ್ದಾರೆ (Poo And Anjali Latest Video)
ಕರೀನಾ ಕಪೂರ್ ಮತ್ತು ಕಾಜೋಲ್ ರಸ್ತೆಯ ಮಧ್ಯದಲ್ಲಿ ನಿಂತು ಸಲೀಸಾಗಿ  ಹರಟೆ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮುಂಬೈನ ಮೆಹಬೂಬ್ ಸ್ಟುಡಿಯೋ ಹೊರಗಿನ ವಿಡಿಯೋ ಎಂದು ಹೇಳಲಾಗುತ್ತಿದೆ. ಅಲ್ಲಿ ಇಬ್ಬರೂ ಸ್ಟಾರ್‌ಗಳು ಯಾವುದೇ ಯೋಜನೆ ಇಲ್ಲದೆ ಪರಸ್ಪರ ಭೇಟಿಯಾಗಿದ್ದಾರೆ.  ನನ್ನತ್ರ ಸ್ಥಳ, ಪಾಪರಾಜಿಗಳನ್ನು ಲೆಕ್ಕಿಸದೆ ಇಬ್ಬರು ತಾರೆಯರ ಮಾತುಕತೆ ನಡೆದಿದೆ.  ಈ ಇಬ್ಬರು ಸ್ಟಾರ್‌ಗಳು ಪರಸ್ಪರರ ಒಡನಾಟವನ್ನು ತುಂಬಾ ಇಷ್ಟಪಡುತ್ತಾರೆ ಎಂದು ವೀಡಿಯೊ ಹೇಳುತ್ತಿದೆ. ಈ ವಿಡಿಯೋ ನೋಡಿ...

ಇದನ್ನೂ ಓದಿ-ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಸುಪುತ್ರ…!

ಏನು ನಡೆಯುತ್ತಿದೆ?
ಈ ವಿಡಿಯೋ ಕುರಿತು ಹೇಳುವುದಾದರೆ, ಸಾಮಾನ್ಯ ಮಹಿಳೆಯರಂತೆ ಇಬ್ಬರೂ ತಮ್ಮ ಮಕ್ಕಳು ಮತ್ತು ಕರೋನಾ ಕುರಿತು ಚರ್ಚೆ ನಡೆಸಿದ್ದಾರೆ. ಇಬ್ಬರೂ ಕಪ್ಪು ಮತ್ತು ಬಿಳಿ ಮ್ಯಾಚಿಂಗ್ ಬಟ್ಟೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಕಾಜೋಲ್, ಕರೀನಾಗೆ ಜೆಹ್ ಬಗ್ಗೆ ವಿಚಾರಿಸಿದ್ದಾರೆ. ಇಬ್ಬರ ಮಾತುಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತಿವೆ. ನಿಮ್ಮ ಹೊಸ ಮಗು ಹೇಗಿದೆ ಎಂದು ಕರೀನಾಗೆ ಕಾಜೋಲ್ ಕೇಳಿದ್ದಾರೆ. ಕರೀನಾ ಮುಗುಳ್ನಗುತ್ತಾ, ಓ ಗಾಡ್ , ಒಂದು ವರ್ಷವಾಯಿತು. ನಮಗೆಲ್ಲ ಕೋವಿಡ್ ಬಂದಿತ್ತು. ಇದಕ್ಕೆ  ಕಾಜೋಲ್ ಕೂಡ ತನಗೂ ಕರೋನಾ ಇತ್ತು ಎಂದು ಹೇಳಿದ್ದಾರೆ. ಹೊರಡುವಾಗ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿ ವಿದಾಯ ಹೇಳಿದ್ದಾರೆ

ಇದನ್ನೂ ಓದಿ-ರಾಕಿ ಭಾಯಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಈ ದಿನ ಬಿಡುಗಡೆಯಾಗಲಿದೆ KGF Chapter 2 ಟ್ರೈಲರ್

ತಮಾಷೆಯ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು
ಕರೀನಾ ಮತ್ತು ಕಾಜೋಲ್ ಅವರ ಈ ವೀಡಿಯೊಗೆ ಜನರ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.  ಈ ಇಬ್ಬರನ್ನೂ ಜನರು ಪಕ್ಕದ ಮನೆಯ ಆಂಟಿಗೆ  ಹೋಲಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡಿರುವ ಓರ್ವ ವ್ಯಕ್ತಿ ಇಲ್ಲಿ 'ಪೂ, ಅಂಜಲಿಯನ್ನು ಹೇ ಅಕ್ಕಾ ಹೇಗಿದ್ದಿಯಾ? ತುಂಬಾ ದಿನಗಳ ಬಳಿಕ ಭೇಟಿಯಾದೆ ಎಂದು ಕೇಳುತ್ತಿರುವಂತೆ ತೋರುತ್ತಿದೆ.  ಎಂದು ಬರೆದಿದ್ದಾರೆ ವಿಡಿಯೋ ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋದಲ್ಲಿ 'ಬನ್ನಿ ಸಹೋದರಿ, ಗಾಸಿಪ್ ಮಾಡೋಣ' ಎಂದು ಬರೆದಿದ್ದಾರೆ.

ಇದನ್ನೂ ಓದಿ-ನಾಳೆ ರಿಲೀಸ್ ಆಗಲಿದೆ ಒಬ್ಬ ಸಾಮಾನ್ಯ ಕ್ಯಾಬ್ ಡ್ರೈವರ್ ನ ಅಸಾಮಾನ್ಯ ಕಥೆ 'Yellow ಬೋರ್ಡ್'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News