ನಟಿ ಕಾಜಲ್‌ ಅಗರ್‌ವಾಲ್‌ ಮಗುವಿನ ಹೆಸರು ಬಹಿರಂಗ!

ಮಗಧೀರ ಚಿತ್ರದ ಬೆಡಗಿ ಕಾಜಲ್ ಅಗರವಾಲ್ 2020ರ ಅಕ್ಟೋಬರ್ ತಿಂಗಳಲ್ಲಿ ಬಹುಕಾಲದ ಗೆಳೆಯ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Written by - Bhavishya Shetty | Last Updated : Apr 20, 2022, 04:38 PM IST
  • ಗೌತಮ್‌-ಕಾಜಲ್‌ ಮಗುವಿನ ಹೆಸರು ಬಹಿರಂಗ
  • ಮಗುವಿಗೆ ʼನೀಲ್‌ ಕಿಚ್ಲುʼ ಎಂದು ಹೆಸರಿಟ್ಟ ಕುಟುಂಬ
  • ಏಪ್ರಿಲ್‌ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಕಾಜಲ್‌
ನಟಿ ಕಾಜಲ್‌ ಅಗರ್‌ವಾಲ್‌ ಮಗುವಿನ ಹೆಸರು ಬಹಿರಂಗ! title=
kajol agarwal

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಕಾಜಲ್‌ ಅಗರ್‌ವಾಲ್‌ ಏಪ್ರಿಲ್‌ 18 ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ಇದೀಗ ಕಾಜಲ್‌ ಹಾಗೂ ಅವರ ಪತಿ ಗೌತಮ್ ತಮ್ಮ ಮಗುವಿನ ನಾಮಕರಣ ಮಾಡಲು ಮುಂದಾಗಿದ್ದು, ಹೆಸರು ಬಹಿರಂಗಗೊಳಿಸಿದ್ದಾರೆ. 

ಇದನ್ನು ಓದಿ: ರಜನಿಕಾಂತ್‌ರನ್ನು ಬಾಲಿವುಡ್‌ಗೆ ಪರಿಚಯಿಸಿದ ಖ್ಯಾತ ನಿರ್ದೇಶಕ ಟಿ. ರಾಮರಾವ್ ನಿಧನ

ಮಗಧೀರ ಚಿತ್ರದ ಬೆಡಗಿ ಕಾಜಲ್ ಅಗರವಾಲ್ 2020ರ ಅಕ್ಟೋಬರ್ ತಿಂಗಳಲ್ಲಿ ಬಹುಕಾಲದ ಗೆಳೆಯ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟಿ, ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಮಗುವಿಗೆ ʼನೀಲ್‌ ಕಿಚ್ಲುʼ ಎಂಬ ಹೆಸರಿಡುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. 

ನಟಿ ಕಾಜಲ್​​ ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಮೇಲಿಂದ ಮೇಲೆ ಪ್ರೆಗ್ನೆನ್ಸಿ ಫೋಟೋ ಹಂಚಿಕೊಳ್ಳುತ್ತಿದ್ದರು. ಜೊತೆಗೆ ತಾವು ಮಾಡ್ತಿದ್ದ ವರ್ಕೌಟ್ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು.
ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಸಿನಿಮಾ ನೀಡಿರುವ ಖ್ಯಾತ ನಟಿ ಕಾಜಲ್ ಈಗಾಗಲೇ ಆಚಾರ್ಯ ಸೇರಿ ಅನೇಕ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು, ಆಚಾರ್ಯ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರಲಿದೆ.

ಇದನ್ನು ಓದಿ: Kajal Agarwal:ತಾಯಿಯಾದ ಖುಷಿಯಲ್ಲಿ ಕಾಜಲ್ ಅಗರ್ವಾಲ್!

ಕಾಜಲ್ ಮತ್ತು ಗೌತಮ್ ದಂಪತಿ ಮೊದಲ ಮಗುವನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ದಂಪತಿಗೆ ಅಭಿಮಾನಿಗಳು ಮತ್ತು ಆಪ್ತರು ಶುಭಹಾರೈಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News