ಜನವರಿ 24ಕ್ಕೆ 'ಕಬ್ಜ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಫಿಕ್ಸ್.. ಮ್ಯಾಟರ್ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್

Kabzaa: ಕಬ್ಜ' ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟ 'ಕಿಚ್ಚ' ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಆಶೀರ್ವಾದದೊಂದಿಗೆ ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ಈ ಸಿನಿಮಾ ಬಗ್ಗೆ ಟಾಕ್ ಅಂತೂ ಟಾಪ್ ಲೆವೆಲ್ಲಿನಲ್ಲಿದೆ. 

Written by - YASHODHA POOJARI | Edited by - Yashaswini V | Last Updated : Jan 23, 2023, 04:00 PM IST
  • ಕಬ್ಜ ಸಿನಿಮಾ ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ.
  • ಒಟ್ಟಾರೆ ಈ ಸಿನಿಮಾಗೆ ಸುಮಾರು 140 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ನಡೆಸಲಾಗಿದೆ.
  • ಬೆಂಗಳೂರು, ಮಂಗಳೂರು, ವಿಶಾಖಪಟ್ಟಣ, ಹೈದರಾಬಾದ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ.
ಜನವರಿ 24ಕ್ಕೆ 'ಕಬ್ಜ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಫಿಕ್ಸ್.. ಮ್ಯಾಟರ್ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್ title=
Kabzaa movie release date

Kabzaa: 'ಕಬ್ಜ' ಮಿಂಚಿಂನಂತೆ ಎಂಟ್ರಿ ಕೊಟ್ಟು ಧೂಳೆಬ್ಬಿಸಲು ಸಕಲ ರೀತಿಯಲ್ಲೂ ಸಿದ್ಧವಾಗಿರುವ ಸಿನಿಮಾ. ಕಬ್ಜ ಸಿನಿಮಾ ಮೇಲೆ ನಿರೀಕ್ಷೆಯಂತೂ ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಲೇ ಇದೆ. ಕಬ್ಜ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಯಂತೂ ಅಭಿಮಾನಿಗಳ ಎದೆಯಲ್ಲಿ ಸದಾ ಕಾಡುತ್ತಲೇ ಇದೆ. ಇದೀಗ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 

ಜನವರಿ 24 ರಂದು ಕಬ್ಜ ರಿಲೀಸ್ ಡೇಟ್ ರಿವಿಲ್ ಆಗುತ್ತೆ. ಅದಕ್ಕಾಗಿ ಕೋಟಿ ಕೋಟಿ ಅಭಿಮಾನಿಗಳ ಜೊತೆಗೆ ಬೇರೆ ಸಿನಿಮಾ ಇಂಡಸ್ಟ್ರಿ ಕೂಡ ಕುತೂಹಲದಿಂದ ಕಾಯುತ್ತಿದೆ. ಕಬ್ಜ ಸಿನಿಮಾದಲ್ಲಿ ಆರ್. ಚಂದ್ರು ಜೊತೆಗೆ ಮೂರನೇ ಬಾರಿಗೆ ಉಪ್ಪಿ ಕೈಜೋಡಿಸಿದ ಮ್ಯಾಟರ್ ಕೇಳೇ ಫ್ಯಾನ್ಸ್ ಫುಲ್ ಫಿದಾ ಆಗಿದ್ರು. ಅದರ ಜೊತೆಗೆ 'ಕಬ್ಜ' ಟೀಸರ್ ಸಾಕಷ್ಟು ಸದ್ದು ಕೂಡ ಮಾಡಿತ್ತು.'

ಇದನ್ನೂ ಓದಿ- Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ

ಕಬ್ಜ ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟ 'ಕಿಚ್ಚ' ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಆಶೀರ್ವಾದದೊಂದಿಗೆ ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ಈ ಸಿನಿಮಾ ಬಗ್ಗೆ ಟಾಕ್ ಅಂತೂ ಟಾಪ್ ಲೆವೆಲ್ಲಿನಲ್ಲಿದೆ. 

ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ  ಶ್ರೀಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ- IMDB ಟಾಪ್ 20ರಲ್ಲಿ ʼಕಬ್ಜʼಗೆ 7ನೇ ಸ್ಥಾನ : ಉಪ್ಪಿ-ಕಿಚ್ಚನ ಚಿತ್ರದ ಮೇಲೆ ಭಾರಿ ನಿರೀಕ್ಷೆ

ಕಬ್ಜ ಸಿನಿಮಾ ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ. ಒಟ್ಟಾರೆ ಈ ಸಿನಿಮಾಗೆ ಸುಮಾರು 140 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ನಡೆಸಲಾಗಿದೆ. ಬೆಂಗಳೂರು, ಮಂಗಳೂರು, ವಿಶಾಖಪಟ್ಟಣ, ಹೈದರಾಬಾದ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News