Jr NTR favorite movie : ಜೂ.ಎನ್‌ಟಿಆರ್ ಭಾರತೀಯ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಮ್ಯಾನ್ ಆಫ್ ಮಾಸ್ ತಾರಕ ರಾಮ ರಾವು ತಮ್ಮ ನಟನೆ ಮೂಲಕ ಜಗತ್ತಿನಾದ್ಯಂತ ಅಪಾರ ಫ್ಯಾನ್ಸ್ ಪಾಲೋಯಿಂಗ್ ಹೊಂದಿದ್ದಾರೆ. ಆಕ್ಷನ್‌ನಿಂದ ಹಿಡಿದು ಲವ್ ವರೆಗಿನ ಅವರ ಎಲ್ಲಾ ಸಿನಿಮಾಗಳು ಇಂದಿಗೂ ಸಿನಿರಸಿಕರಿಗೆ ಫೇವರಿಟ್.
ಹೌದು.. ಪ್ರತಿ ಸಿನಿಮಾದ ಮೂಲಕ ಎನ್‌ಟಿಆರ್ ಅಭಿಮಾನಿಗಳ ಮನ ಗೆಲ್ಲುತ್ತಲೇ ಬಂದಿದ್ದಾರೆ. ಅಲ್ಲದೆ, ಈ ವರ್ಷದ ಆರಂಭದಲ್ಲಿ ತಾರಕ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ 'RRR' ನಾಟು ನಾಟು ನೃತ್ಯಕ್ಕಾಗಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿತು. ಪ್ರಸ್ತುತ ಅವರ ಬಹು ನಿರೀಕ್ಷಿತ 'ದೇವರ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ʼಜವಾನ್ʼ ಮುಂಗಡ ಬುಕ್ಕಿಂಗ್ ಆರಂಭ..! ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಎನ್‌ಟಿಆರ್ ತಮ್ಮ ಐದು ನೆಚ್ಚಿನ ಭಾರತೀಯ ಚಲನಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅಮಿತಾಭ್ ಬಚ್ಚನ್ ಅವರ 'ದೀವಾರ್' ನಿಂದ ಕಮಲ್ ಹಾಸನ್ ಅವರ 'ದೇವರ್ ಮಗನ್' ವರೆಗಿನ ಕೆಲವು ಪ್ರಮುಖ ಹಿಟ್ ಸಿನಿಮಾಗಳ ಪಟ್ಟಿ ನೀಡಿದರು..
ದಾನ ವೀರ ಸೂರ ಕರ್ಣ : ಈ ಸಿನಿಮಾವನ್ನು ಎನ್‌ಟಿ ರಾಮರಾವ್ ಅವರು ಬರೆದು, ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. 'ದಾನ ವೀರ ಸೂರ ಕರ್ಣ' ಮಹಾಭಾರತದ ಕರ್ಣನ ಜೀವನವನ್ನು ಆಧರಿಸಿದ ಚಿತ್ರವಾಗಿದೆ. 1997 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಇಂದಿಗೂ ಜನರು ಇಷ್ಟಪಟ್ಟು ನೋಡುತ್ತಾರೆ.
ಇದನ್ನೂ ಓದಿ: ಡಾಲಿ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಆ ಸ್ಪೆಷಲ್ ಗೆಸ್ಟ್
ದೀವಾರ್ : ಅಮಿತಾಬ್ ಬಚ್ಚನ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್‌ಗಳಲ್ಲಿ 'ದೀವಾರ್' ಸಿನಿಮಾ ಕೂಡ ಒಂದು. 1975 ರಲ್ಲಿ ಬಿಡುಗಡೆಯಾದ ಆಕ್ಷನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ನಟಿಸಿದ್ದಾರೆ. ಬ್ಲಾಕ್‌ಬಸ್ಟರ್, 'ದೀವಾರ್' ಅಮಿತಾಬ್ ಬಚ್ಚನ್ ಅವರ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿದೆ.
ನಾಯಕನ್ : ಮಣಿರತ್ನಂ ಬರೆದು ನಿರ್ದೇಶಿಸಿದ 1987 ರ ತಮಿಳು ಸಿನಿಮಾ. ಈ ಚಿತ್ರದಲ್ಲಿ ಕಮಲ್ ಹಾಸನ್, ಶರಣ್ಯ ಮತ್ತು ಕಾರ್ತಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ದೇವರ್ ಮಗನ್ : 1992 ರಲ್ಲಿ ರಿಲೀಸ್ ಆದ 'ದೇವರ್ ಮಗನ್' ಅನ್ನು ಭರತನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಿವಾಜಿ ಗಣೇಶನ್, ರೇವತಿ, ಗೌತಮಿ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಶಿವ : ನಾಗಾರ್ಜುನ ಅಕ್ಕಿನೇನಿ, ಅಮಲಾ ಅಕ್ಕಿನೇನಿ ಮತ್ತು ರಘುವರನ್ ನಾಯಕರಾಗಿ ನಟಿಸಿರುವ ತೆಲುಗು ಕ್ರೈಂ ಆಕ್ಷನ್ ಡ್ರಾಮಾ ಸಿನಿಮಾ ಶಿವ. ರಾಮ್ ಗೋಪಾಲ್ ವರ್ಮಾ ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಇಂದಿಗೂ ಜನರ ಪ್ಲೇ ಲಿಸ್ಟ್‌ನಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.