RRR Ticket Price Hike! RRR ಬಿಡುಗಡೆಗೂ ಮುನ್ನ ಟಿಕೆಟ್ ದರದಲ್ಲಿ ಭಾರಿ ಏರಿಕೆ, ಏನಿದು ಹೊಸ ಸುದ್ದಿ!

RRR Updates - Jr NTR ಮತ್ತು Ram Charan ಅಭಿನಯದ ಬಹು ನಿರೀಕ್ಷಿತ ಚಿತ್ರ RRR ಬಿಡುಗಡೆಗೂ ಮುನ್ನವೇ ಟಿಕೆಟ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ.

Written by - Nitin Tabib | Last Updated : Mar 19, 2022, 12:17 PM IST
  • RRR ಬಿಡುಗಡೆಗೂ ಮುನ್ನ ಟಿಕೆಟ್ ದರಗಳಲ್ಲಿ ಭಾರಿ ಏರಿಕೆ!
  • ಏನಿದು ಆಂಧ್ರ ಪ್ರದೇಶ ಸರ್ಕಾರದ ಹೊಸ ಆದೇಶ
  • ಈ ಆದೇಶ ಯಾರಿಗೆ ಅನ್ವಯಿಸಲಿದೆ?
RRR Ticket Price Hike! RRR ಬಿಡುಗಡೆಗೂ ಮುನ್ನ ಟಿಕೆಟ್ ದರದಲ್ಲಿ ಭಾರಿ ಏರಿಕೆ, ಏನಿದು ಹೊಸ ಸುದ್ದಿ! title=
RRR Updates (File Photo)

RRR Latest News - ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಚಿತ್ರಗಳ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇವುಗಳಲ್ಲಿ ಕೆಲ ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದರೆ, ಇನ್ನೂ ಕೆಲವು ಬಿಡುಗಡೆಗೆ ಸಿದ್ಧವಾಗಿವೆ. ಇವುಗಳಲ್ಲಿ ದಕ್ಷಿಣ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಮತ್ತು Jr NTR ಮತ್ತು Ram Charan ಅಭಿನಯದ ರೈಸ್, ರೋರ್ ಅಂಡ್ ರಿವೋಲ್ಟ್ (RRR) ಸದ್ಯ ಭಾರಿ ಚರ್ಚೆಯಲ್ಲಿದೆ. ಈ ಚಿತ್ರವು ಖ್ಯಾತ ಬಾಲಿವುಡ್ ತಾರೆಯರಾಗಿರುವ ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgan) ಅವರ ದಕ್ಷಿಣದ ಚೊಚ್ಚಲ ಚಿತ್ರವಾಗಿದೆ. ಇನ್ನೊಂದೆಡೆ ಮಾಧ್ಯಮ ವರದಿಗಳ ಪ್ರಕಾರ ಈ ಚಿತ್ರ ಬಿಡುಗಡೆಗೂ ಮುನ್ನವೇ ಟಿಕೆಟ್ ದರಗಳು ಹೆಚ್ಚಾಗಲಿವೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶವೂ ಕೂಡ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ-ಒಂದೇ ದಿನ ‘ಜೇಮ್ಸ್​’ ಗಳಿಸಿದ್ದು ಬರೋಬ್ಬರಿ 30 ಕೋಟಿ ರೂಪಾಯಿ..!

ಸರ್ಕಾರ ನೀಡಿರುವ ಆದೇಶ ಏನು?
ಎಸ್‌ಎಸ್ ರಾಜಮೌಳಿ (SS Rajamouli) ಅವರ RRR ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಆಂಧ್ರ ಪ್ರದೇಶದ (Andhra Pradesh) ಜಗನ್ಮೋಹನ್ ರೆಡ್ಡಿ ಸರ್ಕಾರವು (Jaganmohan Reddy Government) ಚಿತ್ರ ಬಿಡುಗಡೆಗೆ ಮುನ್ನ ಗುರುವಾರ ಥಿಯೇಟರ್‌ಗಳಲ್ಲಿ ಟಿಕೆಟ್ ದರವನ್ನು ಹೆಚ್ಚಿಸುವಂತೆ ಆದೇಶಿಸಿದೆ ಎಂದು ಇತ್ತೀಚಿಗೆ ಪ್ರಕಟಗೊಂಡ ಮಾಧ್ಯಮ ವರದಿಗಳು ಹೇಳಿವೆ. RRR (Rise Roar And Revolt) ಬಿಡುಗಡೆಯನ್ನು ಗಮನದಲ್ಲಿಟ್ಟುಕೊಂಡು ಈ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎನ್ನಲಾಗಿದೆ. ಸರ್ಕಾರದ ನಿರ್ದೇಶನದ ಪ್ರಕಾರ, ಟಿಕೆಟ್ ದರವನ್ನು 75 ರೂಪಾಯಿಗಳಷ್ಟು ಹೆಚ್ಚಿಸಲಾಗುವುದು ಮತ್ತು ಇದು ಆಂಧ್ರಪ್ರದೇಶದ ಪ್ರತಿ ಥಿಯೇಟರ್‌ಗಳಲ್ಲಿ ಪ್ರತಿ ವರ್ಗದ ಜನರಿಗೆ ಅನ್ವಯಿಸಲಿದೆ ಎನ್ನಲಾಗಿದೆ. ಸರ್ಕಾರದ ಈ ಆದೇಶ ಗ್ರಾಮಗಳೂ ಸೇರಿದಂತೆ ಮಂಡಲಗಳಲ್ಲಿರುವ ಚಿತ್ರಮಂದಿರಗಳಿಗೂ ಕೂಡ ಅನ್ವಯಿಸಲಿದ್ದು, ಅವುಗಳು ಕೂಡ ದರ ಏರಿಕೆ ಮಾಡಬೇಕಾಗಲಿದೆ. ಚಿತ್ರದ ಮೊದಲ 10 ದಿನಗಳಿಗೆ ಈ ನಿಯಮ ಕಡ್ಡಾಯವಾಗಿರಲಿದೆ ಎಂದು ಆದೇಶದಲ್ಲಿ ಹೇಳಲಾಗಿದ್ದು,  10 ದಿನಗಳ ನಂತರ ಥಿಯೇಟರ್ ಮಾಲೀಕರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಇದನ್ನೂ ಓದಿ-ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್..! ಫೋಟೋ ವೈರಲ್

ಎಲ್ಲಿ, ಎಷ್ಟು ದರ ಏರಿಕೆಯಾಗಲಿದೆ?
ಹೆಚ್ಚಿದ ಟಿಕೆಟ್ ದರಗಳ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿನ ನಾನ್-ಎಸಿ ಥಿಯೇಟರ್‌ಗಳು ಮತ್ತು ಕೆಳ ದರ್ಜೆಯ ಟಿಕೆಟ್‌ಗಳಿಗೆ ಪ್ರೇಕ್ಷಕರು 100 ರೂ.ವರೆಗೆ ವ್ಯಯಿಸಬೇಕಾಗಲಿದೆ. ನಗರಸಭೆ ಮಟ್ಟದ ಮಟ್ಟದ ಚಿತ್ರ ಮಂದಿರಗಳಿಗೆ ರಾಜಮೌಳಿ ಅವರ ಸಿನಿಮಾ ಟಿಕೆಟ್ ಗೆ 115 ರೂ.ವರೆಗೆ ಪಾವತಿಸಬೇಕಿದ್ದು, ಇದು ತೆರಿಗೆ ಸೇರಿದಂತೆ 130 ರೂ.ಗೆ ತಲುಪಲಿದೆ. ಈ ಬೆಲೆ ನಾನ್ ಎಸಿ ಥಿಯೇಟರ್‌ಗಳಿಗೆ ಮಾತ್ರ ಅನ್ವಯಿಸಲಿದೆ. ಈ ಟಿಕೆಟ್ ದರಗಳು ಪಂಚಾಯಿತಿ ಮಟ್ಟದ ಚಿತ್ರಮಂದಿರಗಳಿಗೆ 225 ಕ್ಕೆ ಏರಿಕೆಯಾಗಳಿವೆ. ಇದೇ ವೇಳೆ ರೆಸ್ಕ್ ಲೈನ್ ಸೀಟ್ ಗಳಿಗೆ ಈ ಟಿಕೆಟ್ ದರ ರೂ.325 ಇರಲಿದೆ.

ಇದನ್ನೂ ಓದಿ-'KGF-2' ಮೊದಲ ಸಾಂಗ್ ರಿಲೀಸ್‌ಗೆ ಡೇಟ್‌ ಫಿಕ್ಸ್..! ಯಾವಾಗ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News