Karnataka Lok Sabha Election Results 2024: ಕರ್ನಾಟಕದ 'ಲೋಕ' ಸಮರದಲ್ಲಿ ಗೆದ್ದವರು ಯಾರು ಸೋತವರು ಯಾರು?

Karnataka Lok Sabha Election Result 2024: ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಸ್ತುತ ನಡೆಯುತ್ತಿದೆ. 18ನೇ ಲೋಕಸಭೆ ಚುನಾವಣೆಯಲ್ಲಿ ಎರಡನೇ ಮತ್ತು ಮೂರನೇ ಹಂತದಲ್ಲಿ (ಕ್ರಮವಾಗಿ ಏಪ್ರಿಲ್ 19 ಮತ್ತು ಮೇ 7) ಮತದಾನ ನಡೆದಿತ್ತು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸುತ್ತಿದೆ

Written by - Manjunath N | Last Updated : Jun 4, 2024, 02:36 PM IST
  • 2011 ರಲ್ಲಿ ರಾಜ್ಯದಲ್ಲಿ ನಡೆದ ಜನಗಣತಿಯ ಪ್ರಕಾರ ಕರ್ನಾಟಕದ 28 ಸ್ಥಾನಗಳು 6.11 ಕೋಟಿ ನಾಗರಿಕರ ರಾಜ್ಯದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ.
  • 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದೆ.
  • ಸ್ವತಂತ್ರ ಅಭ್ಯರ್ಥಿ ಸುಮಲತಾ , ಎನ್‌ಡಿಎ ಭಾಗವಾಗಿದ್ದ ಮತ್ತು ಈಗ ಬಿಜೆಪಿಗೆ ಸೇರ್ಪಡೆಗೊಂಡ ಅವರು ಸಹ ಒಂದು ಸ್ಥಾನವನ್ನು ಗೆದ್ದಿದ್ದಾರೆ ಮತ್ತು ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಯು ಉಳಿದ ಎರಡು ಸ್ಥಾನಗಳಲ್ಲಿ ತಲಾ ಒಂದನ್ನು ಗೆದ್ದಿದೆ. ಈಗ ಈ ಚುನಾವಣೆಯಲ್ಲಿ ಯಾರು ವಿಜಯಶಾಲಿಯಾಗುತ್ತಾರೆ ಎಂಬುದನ್ನು ನೋಡಬೇಕಾಗಿದೆ.
Karnataka Lok Sabha Election Results 2024: ಕರ್ನಾಟಕದ 'ಲೋಕ' ಸಮರದಲ್ಲಿ ಗೆದ್ದವರು ಯಾರು ಸೋತವರು ಯಾರು?  title=

Karnataka Lok Sabha Election Result 2024: ಸದ್ಯ ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಸ್ತುತ ನಡೆಯುತ್ತಿದೆ.ಎರಡು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮೈತ್ರಿ ಬಲದೊಂದಿಗೆ ಸ್ಪರ್ಧಿಸಿದರೆ ಇನ್ನೊಂದೆಡೆಗೆ ಬಿಜೆಪಿ-ಜೆಡಿಎಸ್ ಎನ್ ಡಿಎ ಮೈತ್ರಿಕೂಟದೊಂದಿಗೆ ಚುನಾವಣೆಯನ್ನು ಎದುರಿಸಿತ್ತು. 

ಈ ಬಾರಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯ ಆಧಾರದ ಮೇಲೆ ಲೋಕಸಭಾ ಚುನಾವಣೆಯನ್ನು ಎದುರಿಸಿದರೆ, ಇನ್ನೊಂದೆಡೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರ ನಡುವೆ ಮತದಾರ ಯಾರ ಕೈ ಹಿಡಿಯುತ್ತಾನೆ ಎನ್ನುವುದನ್ನು ತಿಳಿಯಲು ನಾವು ಪೂರ್ಣ ಫಲಿತಾಂಶ ಪ್ರಕಟವಾಗುವರೆಗೆ ಕಾಯಬೇಕಾಗಿದೆ.2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ್ದ ಸುಮಲತಾ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇನ್ನೂ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಯು ಉಳಿದ ಎರಡು ಸ್ಥಾನಗಳಲ್ಲಿ ತಲಾ ಒಂದರಲ್ಲಿ ಗೆಲುವನ್ನು ಸಾಧಿಸಿದ್ದವು.  ಇನ್ನೂ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಯಾರು ವಿಜಯಶಾಲಿಯಾಗುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಕರ್ನಾಟಕದ ಲೋಕಸಭಾ ಸಮರದಲ್ಲಿ ಗೆದ್ದಿರುವ ಅಭ್ಯರ್ಥಿಗಳು:

            ಕ್ರ.ಸಂ   ಕ್ಷೇತ್ರ     ಬಿಜೆಪಿ  + ಜೆಡಿಎಸ್‌   ಕಾಂಗ್ರೆಸ್‌

    ಫಲಿತಾಂಶ  

1 ಚಿಕ್ಕೋಡಿ  ಅಣ್ಣಾ ಸಾಹೇಬ್ ಜೊಲ್ಲೆ            ಪ್ರಿಯಾಂಕಾ ಜಾರಕಿಹೊಳಿ         ಕಾಂಗ್ರೆಸ್ ಗೆ ಗೆಲುವು
2 ಬೆಳಗಾವಿ   ಜಗದೀಶ್‌ ಶೆಟ್ಟರ್‌

  ಮೃಣಾಳ್ ಹೆಬ್ಬಾಳ್ಕರ್     

 ಬಿಜೆಪಿಗೆ ಗೆಲುವು 
3 ಬಾಗಲಕೋಟೆ  ಪಿ.ಸಿ.ಗದ್ದಿಗೌಡರ್    ಸಂಯುಕ್ತಾ ಪಾಟೀಲ್  ಬಿಜೆಪಿಗೆ ಗೆಲುವು 
4 ವಿಜಯಪುರ (ಎಸ್‌ಸಿ)

 ರಮೇಶ್ ಜಿಗಜಿಣಗಿ                 

   ರಾಜು ಅಲಗೂರು  ಬಿಜೆಪಿಗೆ ಗೆಲುವು 
5 ಕಲುಬರಗಿ (ಎಸ್‌ಸಿ)  ಉಮೇಶ್ ಜಾಧವ್    ರಾಧಾಕೃಷ್ಣ ದೊಡ್ಮನಿ ಕಾಂಗ್ರೆಸ್ ಗೆ ಗೆಲುವು 
6 ರಾಯಚೂರು (ಎಸ್‌ಟಿ)  ರಾಜಾ ಅಮರೇಶ್ವರ ನಾಯಕ್‌    ಜಿ. ಕುಮಾರ ನಾಯ್ಕ್      ಕಾಂಗ್ರೆಸ್ ಗೆ ಗೆಲುವು 
7 ಬೀದರ್  ಭಗವಂತ್ ಖೂಬಾ      ಸಾಗರ್ ಖಂಡ್ರೆ  ಕಾಂಗ್ರೆಸ್ ಗೆ ಗೆಲುವು
8 ಕೊಪ್ಪಳ ಡಾ. ಬಸವರಾಜ್ ಕ್ಯಾವಟೂರು    ರಾಜಶೇಖರ್ ಹಿಟ್ನಾಳ್  ಕಾಂಗ್ರೆಸ್ ಗೆ ಗೆಲುವು 
9 ಬಳ್ಳಾರಿ (ಎಸ್‌ಟಿ) ಶ್ರೀರಾಮುಲು     ಇ ತುಕಾರಾಂ  ಕಾಂಗ್ರೆಸ್ ಗೆ ಗೆಲುವು
10 ಹಾವೇರಿ   ಬಸವರಾಜ ಬೊಮ್ಮಾಯಿ  ಆನಂದ ಗಡ್ಡದೇವರ ಮಠ  ಬಿಜೆಪಿಗೆ ಗೆಲುವು
11 ಧಾರವಾಡ ಪ್ರಲ್ಹಾದ್ ಜೋಶಿ

   ವಿನೋದ್ ಅಸೂಟಿ     

 ಬಿಜೆಪಿಗೆ ಗೆಲುವು 
12 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ   ಅಂಜಲಿ ನಿಂಬಾಳ್ಕರ್‌  ಬಿಜೆಪಿಗೆ ಗೆಲುವು
13 ದಾವಣಗೆರೆ ಗಾಯತ್ರಿ ಸಿದ್ಧೇಶ್ವರ್  ಡಾ ಪ್ರಭಾ ಮಲ್ಲಿಕಾರ್ಜುನ  ಕಾಂಗ್ರೆಸ್ ಗೆ ಗೆಲುವು 
14 ಶಿವಮೊಗ್ಗ ಬಿವೈ ರಾಘವೇಂದ್ರ    ಗೀತಾ ಶಿವರಾಜ್‌ಕುಮಾರ್  ಬಿಜೆಪಿಗೆ ಗೆಲುವು 
15 ಉಡುಪಿ- ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ   ಡಾ. ಜಯಪ್ರಕಾಶ್ ಹೆಗ್ಡೆ  ಬಿಜೆಪಿಗೆ ಗೆಲುವು
16 ಹಾಸನ   ಪ್ರಜ್ವಲ್ ರೇವಣ್ಣ    ಶ್ರೇಯಸ್ ಪಟೇಲ್‌ ಕಾಂಗ್ರೆಸ್  ಗೆ ಗೆಲುವು 
17 ದಕ್ಷಿಣ ಕನ್ನಡ ಕ್ಯಾಪ್ಟನ್ ಬ್ರಿಜೇಶ್ ಚೌಟ    ಪದ್ಮರಾಜ್       ಬಿಜೆಪಿಗೆ ಗೆಲುವು
18

ಚಿತ್ರದುರ್ಗ (ಎಸ್‌ಸಿ)

ಎಂ. ಗೋವಿಂದ ಕಾರಜೋಳ

  ಬಿ.ಎನ್. ಚಂದ್ರಪ್ಪ     

 ಬಿಜೆಪಿಗೆ ಗೆಲುವು 
19 ತುಮಕೂರು ವಿ.ಸೋಮಣ್ಣ ಎಸ್‌ ಪಿ ಮುದ್ದಹನುಮೇಗೌಡ     ಬಿಜೆಪಿಗೆ ಗೆಲುವು 
20 ಮಂಡ್ಯ ಹೆಚ್ ಡಿ ಕುಮಾರಸ್ವಾಮಿ  ಸ್ಟಾರ್ ಚಂದ್ರು ಬಿಜೆಪಿ-ಜೆಡಿಎಸ್ ಗೆ ಗೆಲುವು 
21 ಮೈಸೂರು ಯದುವೀರ್ ಒಡೆಯರ್   ಎಂ ಲಕ್ಷ್ಮಣ್  ಬಿಜೆಪಿಗೆ ಗೆಲುವು 
22 ಚಾಮರಾಜನಗರ (ಎಸ್‌ಸಿ)  ಎಸ್ ಬಾಲರಾಜ್  ಸುನಿಲ್ ಬೋಸ್‌       ಕಾಂಗ್ರೆಸ್ ಗೆ ಗೆಲುವು
23 ಬೆಂಗಳೂರು ಗ್ರಾಮಾಂತರ ಡಾ. ಸಿ.ಎಎನ್ ಮಂಜುನಾಥ  ಡಿ ಕೆ ಸುರೇಶ್  ಬಿಜೆಪಿ-ಜೆಡಿಎಸ್ ಗೆ ಗೆಲುವು
24 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ  ಪ್ರೊ.ರಾಜೀವ್ ಗೌಡ       ಬಿಜೆಪಿಗೆ ಗೆಲುವು 
25 ಬೆಂಗಳೂರು ಸೆಂಟ್ರಲ್ ಪಿ.ಸಿ. ಮೋಹನ್  ಮನ್ಸೂರ್ ಅಲಿ ಖಾನ್‌       ಬಿಜೆಪಿಗೆ ಗೆಲುವು
26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ   ಸೌಮ್ಯಾ ರೆಡ್ಡಿ  ಬಿಜೆಪಿಗೆ ಗೆಲುವು
27 ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್‌  ರಕ್ಷಾ ರಾಮಯ್ಯ       ಬಿಜೆಪಿಗೆ ಗೆಲುವು
28 ಕೋಲಾರ ಆರ್‌ಸಿ ಮಲ್ಲೇಶ್ ಬಾಬು  ಕೆ ವಿ ಗೌತಮ್‌       ಬಿಜೆಪಿಗೆ ಗೆಲುವು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News